Good news ! 23.44 ಕೋಟಿ ನೌಕರರ ಖಾತೆಗೆ ಕೇಂದ್ರ ಸರ್ಕಾರದಿಂದ ಹಣ ವರ್ಗಾವಣೆ, ನಿಮ್ಮ ಖಾತೆಯನ್ನು ಶೀಘ್ರ ಚೆಕ್ ಮಾಡಿಕೊಳ್ಳಿ
8.50 ಶೇ. ದಷ್ಟು ಹಣವನ್ನು ನೌಕರರ ಖಾತೆಗೆ ವರ್ಗಾಯಿಸಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದೆ.
ನವದೆಹಲಿ : EPFO Latest News: 23.44 ಕೋಟಿ ಉದ್ಯೋಗಿಗಳ ಖಾತೆಗೆ 2020-21ನೇ ಹಣಕಾಸು ವರ್ಷದ ಇಪಿಎಫ್ ಬಡ್ಡಿಯನ್ನು (EPF interest) ಹಾಕಲಾಗಿದೆ. 8.50 ಶೇ. ದಷ್ಟು ಹಣವನ್ನು ನೌಕರರ ಖಾತೆಗೆ ವರ್ಗಾಯಿಸಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದೆ. 23.44 ಕೋಟಿ ಖಾತೆಗೆ ಬಡ್ಡಿ ಹಣವನ್ನು ಖಾತೆಗೆ ಹಾಕಿರುವುದಾಗಿ ಇಪಿಎಫ್‌ಒ ತಿಳಿಸಿದೆ.
7 ವರ್ಷಗಳ ಕನಿಷ್ಠ ಬಡ್ಡಿ ದರ :
ಕಳೆದ ಬಾರಿ 2019-20 ರ ಆರ್ಥಿಕ ವರ್ಷದಲ್ಲಿ, KYC ಯಲ್ಲಿನ ಅಡಚಣೆಯಿಂದಾಗಿ, ಅನೇಕ ಚಂದಾದಾರರು, ಬಡ್ಡಿ ಪಡೆಯುವುದಕ್ಕೆ ಬಹಳ ಸಮಯ ಕಾಯಬೇಕಾಯಿತು. ಇಪಿಎಫ್‌ಒ (EPFO) 2020-21ರ ಹಣಕಾಸು ವರ್ಷದಲ್ಲಿ ಬಡ್ಡಿದರಗಳನ್ನು ಬದಲಾಯಿಸಿಲ್ಲ.
ಇದನ್ನೂ ಓದಿ : SBI Special Current Account ವಹಿವಾಟು ಸೇರಿದಂತೆ ಸಿಗಲಿದೆ ಅನೇಕ ಪ್ರಯೋಜನ
1. ಮಿಸ್ಡ್ ಕಾಲ್‌ನಿಂದ ಬ್ಯಾಲೆನ್ಸ್ ತಿಳಿಯಿರಿ
ನಿಮ್ಮ ಪಿಎಫ್ ಹಣವನ್ನು ಪರಿಶೀಲಿಸಲು, ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ (Missed call) ನೀಡಬೇಕು. ಇದರ ನಂತರ, ನೀವು ಇಪಿಎಫ್‌ಒ ಸಂದೇಶದ ಮೂಲಕ ಪಿಎಫ್‌ನ ವಿವರಗಳನ್ನು ಪಡೆಯಬಹುದು. ಇಲ್ಲಿಯೂ ನಿಮ್ಮ ಯುಎಎನ್ (UAN) ಪ್ಯಾನ್ (PAN Card) ಮತ್ತು ಆಧಾರ್ ಲಿಂಕ್ ಆಗಿರುವುದು ಅವಶ್ಯಕ.
2. ಬ್ಯಾಲೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ
1. ಆನ್‌ಲೈನ್‌ನಲ್ಲಿ ಬ್ಯಾಲೆನ್ಸ್ ಪರಿಶೀಲಿಸಲು, EPFO ವೆಬ್‌ಸೈಟ್‌ಗೆ ಲಾಗ್ ಇನ್ ಆಗಬೇಕು. epfindia.gov.in ನಲ್ಲಿ ಇ-ಪಾಸ್‌ಬುಕ್ ಅನ್ನು ಕ್ಲಿಕ್ ಮಾಡಿ.
2. ಇ-ಪಾಸ್‌ಬುಕ್ ಅನ್ನು ಕ್ಲಿಕ್ ಮಾಡಿದಾಗ, passbook.epfindia.gov.in ಹೊಸ ಪುಟ ಬರುತ್ತದೆ.
3. ಈಗ ಇಲ್ಲಿ ಬಳಕೆದಾರ ಹೆಸರು (UAN ಸಂಖ್ಯೆ), ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಭರ್ತಿ ಮಾಡಿ
4 . ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಹೊಸ ಪುಟತೆರೆಯುತ್ತದೆ. ಇಲ್ಲಿ ಸದಸ್ಯರ ID ಅನ್ನು ಆಯ್ಕೆ ಮಾಡಬೇಕಾಗುತ್ತದೆ.
5. ಇ-ಪಾಸ್‌ಬುಕ್‌ನಲ್ಲಿ ನಿಮ್ಮ ಇಪಿಎಫ್ ಬ್ಯಾಲೆನ್ಸ್ (EPF Ballance) ಅನ್ನು ಕಾಣಬಹುದು.
ಇದನ್ನೂ ಓದಿ : Renault Offers: ಈ ಕಂಪನಿಯ ಕಾರುಗಳ ಮೇಲೆ 1.30 ಲಕ್ಷ ರೂ.ವರೆಗಿನ ಭರ್ಜರಿ ಆಫರ್
3. ನೀವು UMANG ಆಪ್‌ನಲ್ಲಿ ಬ್ಯಾಲೆನ್ಸ್ ಪರಿಶೀಲಿಸಬಹುದು
1. ಇದಕ್ಕಾಗಿ, ನಿಮ್ಮ UMANG ಅಪ್ಲಿಕೇಶನ್ (Unified Mobile Application for New-age Governance) ತೆರೆಯಿರಿ ಮತ್ತು EPFO ಮೇಲೆ ಕ್ಲಿಕ್ ಮಾಡಿ.
2. ಈಗ ಇನ್ನೊಂದು ಪುಟದಲ್ಲಿ, employee-centric services ಮೇಲೆ ಕ್ಲಿಕ್ ಮಾಡಿ.
3. ಇಲ್ಲಿ ವ್ಯೂ ಪಾಸ್ ಬುಕ್ ಅನ್ನು ಕ್ಲಿಕ್ ಮಾಡಿ. ಇದರೊಂದಿಗೆ, ನಿಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್ (OTP) ಸಂಖ್ಯೆಯನ್ನು ಭರ್ತಿ ಮಾಡಿ.
4. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಇದರ ನಂತರ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
4. SMS ಮೂಲಕ ಬ್ಯಾಲೆನ್ಸ್ ಪರಿಶೀಲಿಸಿ :
ನಿಮ್ಮ UAN ಸಂಖ್ಯೆಯನ್ನು EPFO ನಲ್ಲಿ ನೋಂದಾಯಿಸಿದ್ದರೆ, ನೀವು ಸಂದೇಶದ ಮೂಲಕ ನಿಮ್ಮ PF ಬ್ಯಾಲೆನ್ಸ್ ಕುರಿತು ಮಾಹಿತಿಯನ್ನು ಪಡೆಯಬಹುದು. ಇದಕ್ಕಾಗಿ EPFOHO ಅನ್ನು 7738299899 ಗೆ ಕಳುಹಿಸಬೇಕು. ಇದರ ನಂತರ ನೀವು ಸಂದೇಶದ ಮೂಲಕ ಪಿಎಫ್ ಮಾಹಿತಿಯನ್ನು ಪಡೆಯುತ್ತೀರಿ.
ಇದನ್ನೂ ಓದಿ : Small Business Idea: ಸರ್ಕಾರದ ಸಹಾಯದಿಂದ ಈ ಲಾಭದಾಯಕ ವ್ಯವಹಾರ ಪ್ರಾರಂಭಿಸಿ, ಲಕ್ಷ ಲಕ್ಷ ಗಳಿಸಿ
PF ಬ್ಯಾಲೆನ್ಸ್ ತಿಳಿಯುವ ಸೇವೆ ಇಂಗ್ಲಿಷ್, ಪಂಜಾಬಿ, ಮರಾಠಿ, ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಬೆಂಗಾಲಿ ಭಾಷೆಗಳಲ್ಲಿ ಲಭ್ಯವಿದೆ. PF ಬ್ಯಾಲೆನ್ಸ್‌ಗಾಗಿ, ನಿಮ್ಮ UAN, ಬ್ಯಾಂಕ್ ಖಾತೆ, PAN ಮತ್ತು ಆಧಾರ್ (AADHAR) ಅನ್ನು ಲಿಂಕ್ ಮಾಡುವುದು ಅವಶ್ಯಕ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.