Budget 2023: ಶೀಘ್ರದಲ್ಲಿಯೇ ಕೇಂದ್ರ ಸರ್ಕಾರ ವರ್ಷ 2023-24 ಸಾಲಿನ ಆಯವ್ಯಯ ಮಂಡಿಸಲಿದೆ. ಇದೇ ವೇಳೆ ಈ ಬಾರಿಯ ಬಜೆಟ್‌ನಲ್ಲಿ ಸರಕಾರದಿಂದ ಹಲವು ಪ್ರಮುಖ ಘೋಷಣೆಗಳು ಹೊರಬೀಳುವ ಸಾಧ್ಯತೆಗಳಿವೆ. ಇದರೊಂದಿಗೆ ಪಿಎಂ ಕಿಸಾನ್ ಬಗ್ಗೆಯೂ ಕೆಲವು ಘೋಷಣೆಗಳನ್ನು ಸರ್ಕಾರ ಮಾಡಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಇದೇ ವೇಳೆ, ಮುಂಬರುವ ಬಜೆಟ್‌ನಲ್ಲಿ ಕೇಂದ್ರವು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ ನೀಡುವ ಸಹಾಯ ಮೊತ್ತವನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಪಿಎಂ ಕಿಸಾನ್
ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಪ್ರಸ್ತುತ ವಾರ್ಷಿಕ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ. ಇನ್ನೊಂದೆಡೆ, ಪಿಎಂ ಕಿಸಾನ್ ಅಡಿಯಲ್ಲಿ ನೀಡಲಾಗುವ ಈ ಆರ್ಥಿಕ ನೆರವನ್ನು ಸರ್ಕಾರ ವರ್ಷಕ್ಕೆ 6,000 ರೂ.ನಿಂದ 8,000 ರೂ.ಗೆ ಹೆಚ್ಚಿಸಬಹುದು ಎಂಬ ಚರ್ಚೆಗಳು ಇದೀಗ ಕೇಳಿಬರಲಾರಂಭಿಸಿವೆ. ಪಿಎಂ ಕಿಸಾನ್ ಮೊತ್ತದ ಈ ಹೆಚ್ಚಳವು ಒಂದು ವರ್ಷದ ಅವಧಿಯವರೆಗೆ ಇರಬಹುದು ಎಂದು ನಿರೀಕ್ಷಿಸಲಾಗುತ್ತಿದ್ದು ಮತ್ತು ನಂತರ ಅದನ್ನು ಪರಿಶೀಲಿಸಲಾಗುವುದು ಎಂದು ಮೂಲಗಳು ಹೇಳಿವೆ.


ಪ್ರಧಾನ ಮಂತ್ರಿ ಕಿಸಾನ್ ಯೋಜನೆ
"ಪಿಎಂ-ಕಿಸಾನ್ ಮೊತ್ತದ ಹೆಚ್ಚಳವು ಬಳಕೆ ಮತ್ತು ಗ್ರಾಮೀಣ ಬೇಡಿಕೆಯನ್ನು ಬೆಂಬಲಿಸುತ್ತದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೊತ್ತವನ್ನು ದ್ವಿಗುಣಗೊಳಿಸುವ ಸಲಹೆಗಳಿದ್ದರೂ, ಆದಾಯ ವೆಚ್ಚ ಮತ್ತು ಹಣದುಬ್ಬರದ ಒತ್ತಡವನ್ನು ತಡೆಯಲು ಸರ್ಕಾರದ ಗಮನವು ಹೆಚ್ಚಳವನ್ನು ಮಿತಿಗೊಳಿಸಬಹುದು ಎಂದು ಅಧಿಕಾರಿ ಹೇಳಿದ್ದಾರೆ. ಪ್ರತಿ ರೈತರಿಗೆ 2,000 ರೂ.ಗಳ ಹೆಚ್ಚಳದಿಂದ ಸರಕಾರದ ಮೇಲೆ ವಾರ್ಷಿಕ ಸುಮಾರು 22,000 ಕೋಟಿ ರೂ. ಹೊರೆ ಬೀಳಲಿದೆ.


ಇದನ್ನೂ ಓದಿ-ಈ ಖಾತೆ ಹೊಂದಿದವರ ಬ್ಯಾಂಕ್ ಖಾತೆಗೆ 10 ಸಾವಿರ ವರ್ಗಾವಣೆಯಾಗುತ್ತಿದೆ! ತಕ್ಷಣ ಅಪ್ಲೈ ಮಾಡಿ


ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ
ಫೆಬ್ರವರಿ 2019 ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ, ಪ್ರತಿ ರೈತರ ಡಿಬಿಟಿ ಲಿಂಕ್ ಬ್ಯಾಂಕ್ ಖಾತೆಗೆ  ವಾರ್ಷಿಕವಾಗಿ ರೂ 6000 ಅನ್ನು ಮೂರು ಸಮಾನ ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ. ಯೋಜನೆಯ ಆರಂಭದಲ್ಲಿ, ಫಲಾನುಭವಿಗಳ ಸಂಖ್ಯೆ 31 ಮಿಲಿಯನ್ ಆಗಿದ್ದು, ಇದೀಗ ಈ ಫಲಾನುಭವಿಗಳ ಸಂಖ್ಯೆ 110 ಮಿಲಿಯನ್‌ಗೆ ಏರಿಕೆಯಾಗಿದೆ.


ಇದನ್ನೂ ಓದಿ-ಹೀರೋ-ಟಿವಿಎಸ್ ಟೆನ್ಶನ್ ಹೆಚ್ಚಿಸಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಹೊಂಡಾ ಕಂಪನಿಯ ಹೊಸ ಸ್ಕೂಟರ್ !


ಪ್ರಧಾನ ಮಂತ್ರಿ ಕಿಸಾನ್ ಯೋಜನೆ
2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ವಿಧಿಸಲಾಗಿದ್ದ ಲಾಕ್‌ಡೌನ್ ಸಮಯದಲ್ಲಿ ರೈತರು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಮೂರು ವರ್ಷಗಳಲ್ಲಿ ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ಅಗತ್ಯವಿರುವ ರೈತರಿಗೆ 2 ಟ್ರಿಲಿಯನ್‌ಗಿಂತಲೂ ಹೆಚ್ಚು ಆರ್ಥಿಕ ಸಹಾಯವನ್ನು ಒದಗಿಸಲಾಗಿದೆ. ಸರ್ಕಾರವು ಪ್ರಸ್ತುತ ಹಣಕಾಸು ವರ್ಷದಲ್ಲಿ ಸರ್ಕಾರ ಪಿಎಂ ಕಿಸಾನ್ ಗಾಗಿ 68,000 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಮೌಲ್ಯಮಾಪನದ ಪ್ರಕಾರ, PM-KISAN ಕೃಷಿ ಒಳಹರಿವು, ದೈನಂದಿನ ಬಳಕೆ, ಶಿಕ್ಷಣ, ಆರೋಗ್ಯ ಮತ್ತು ಇತರ ತುರ್ತು ವೆಚ್ಚಗಳನ್ನು ಖರೀದಿಸಲು ರೈತರ ದ್ರವ್ಯತೆ ಬಿಕ್ಕಟ್ಟನ್ನು ಪರಿಹರಿಸಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.