ಈ ಖಾತೆ ಹೊಂದಿದವರ ಬ್ಯಾಂಕ್ ಖಾತೆಗೆ 10 ಸಾವಿರ ವರ್ಗಾವಣೆಯಾಗುತ್ತಿದೆ! ತಕ್ಷಣ ಅಪ್ಲೈ ಮಾಡಿ

Jan Dhan Yojana: ಜನ್ ಧನ್ ಖಾತೆದಾರರಿಗೊಂದು ಸಂತಸದ ಸುದ್ದಿ. ಈ ಖಾತೆ ಹೊಂದಿದವರ ಖಾತೆಗೆ ಬ್ಯಾಂಕ್ 10,000 ರೂ. ವರ್ಗಾಯಿಸುತ್ತಿವೆ. ಈ ಯೋಜನೆಗೆ ನೀವು ಹೇಗೆ ಅರ್ಜಿ ಸಲ್ಲಿಸಬಹುದು? ತಿಳಿಯೋಣ ಬನ್ನಿ.  

Written by - Nitin Tabib | Last Updated : Jan 22, 2023, 08:47 PM IST
  • ಜನ್ ಧನ್ ಖಾತೆಯಲ್ಲಿ ಸರ್ಕಾರದ ಪರವಾಗಿ ಖಾತೆದಾರರಿಗೆ 10,000 ರೂ.ಗಳನ್ನು ವರ್ಗಾಯಿಸಲಾಗುತ್ತಿದೆ.
  • ಈ ಮೊತ್ತವನ್ನು ಪಡೆಯಲು, ನೀವು ತುಂಬಾ ಸುಲಭವಾದ ಪ್ರಕ್ರಿಯೆಯನ್ನು ಅನುಸರಿಸಬೇಕು.
  • ಈ ಹಿಂದೆ ಸರ್ಕಾರವು ಈ ಖಾತೆಗಳಿಗೆ ರೂ 5,000 ಓವರ್‌ಡ್ರಾಫ್ಟ್ ನೀಡುತ್ತಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಈ ಖಾತೆ ಹೊಂದಿದವರ ಬ್ಯಾಂಕ್ ಖಾತೆಗೆ 10 ಸಾವಿರ ವರ್ಗಾವಣೆಯಾಗುತ್ತಿದೆ! ತಕ್ಷಣ ಅಪ್ಲೈ ಮಾಡಿ title=
ಜನ್ ಧನ ಖಾತೆದಾರರಿಗೆ ಸಿಗುವ ಪ್ರಯೋಜನಗಳು

PM Jan Dhan Account: ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ದೇಶದ ಸುಮಾರು 47 ಕೋಟಿ ಜನರು ತಮ್ಮ ಖಾತೆಗಳನ್ನು ತೆರೆದಿದ್ದಾರೆ. ಈ ಖಾತೆದಾರರಿಗೆ 10,000 ರೂ.ಗಳನ್ನು ವರ್ಗಾಯಿಸಲಾಗುತ್ತಿದೆ. ಇದಕ್ಕಾಗಿ ನೀವು ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಇದಲ್ಲದೇ ಈ ಖಾತೆದಾರರಿಗೆ 1 ಲಕ್ಷ 30 ಸಾವಿರ ರೂ. ವಿಮೆ ಸಿಗುತ್ತದೆ. ನೀವು ಇನ್ನೂ ರೂ 10,000 ಸ್ವೀಕರಿಸದಿದ್ದರೆ, ನೀವು ಈ ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಬಗ್ಗೆ ತಿಳಿಯೋಣ.

1 ಲಕ್ಷ 30 ಸಾವಿರ ರೂ
ಜನ್ ಧನ್ ಖಾತೆಯನ್ನು ತೆರೆಯುವುದರಿಂದ ಹಲವಾರು ಪ್ರಯೋಜನಗಳಿವೆ. ಈ ಖಾತೆ ಹೊಂದಿರುವ ಖಾತೆದಾರರಿಗೆ ಬ್ಯಾಂಕ್ ನಿಂದ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರಲ್ಲಿ ಖಾತೆದಾರರಿಗೆ 1 ಲಕ್ಷ ರೂ.ಗಳ ಅಪಘಾತ ವಿಮೆ ನೀಡಲಾಗುತ್ತದೆ. ಇದಲ್ಲದೆ, ನೀವು ಜೀವ ವಿಮೆಯನ್ನು ಸಹ ಪಡೆಯುತ್ತೀರಿ. ಇದರಲ್ಲಿ 30 ಸಾವಿರ ರೂ. ಜೀವವಿಮೆ ಒದಗಿಸಲಾಗುತ್ತದೆ. ಜನ್ ಧನ್ ಖಾತೆದಾರರು ಅಪಘಾತದಲ್ಲಿ ಸಾವನ್ನಪ್ಪಿದರೆ, ನಾಮಿನಿಗೆ 1 ಲಕ್ಷ ರೂಪಾಯಿ ವಿಮಾ ಮೊತ್ತ ಸಿಗುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ ಮರಣ ಹೊಂದಿದವರಿಗೆ 30,000 ರೂ.

ಇದನ್ನೂ ಓದಿ-Budget 2023: ಸರ್ಕಾರಿ ನೌಕರರಿಗೆ ಒಂದು ಸಿಹಿ ಮತ್ತು ಕಹಿ ಸುದ್ದಿ!

ಜನ್ ಧನ್ ಖಾತೆಯನ್ನು ಹೇಗೆ ತೆರೆಯಬಹುದು?
ನೀವು ಬ್ಯಾಂಕ್‌ನಿಂದ 10 ಸಾವಿರ ರೂಪಾಯಿ ಪಡೆಯಬೇಕಾದರೆ, ನಿಮ್ಮ ಹೆಸರಿನಲ್ಲಿ ಜನ್ ಧನ್ ಖಾತೆಯನ್ನು ನೀವು ಹೊಂದಿರಬೇಕು. ನೀವು ಇನ್ನೂ ಈ ಯೋಜನೆಯ ಖಾತೆಯನ್ನು ತೆರೆಯದಿದ್ದರೆ, ನೀವು ಬ್ಯಾಂಕ್‌ಗೆ ಹೋಗುವ ಮೂಲಕ ಈ ಖಾತೆಯನ್ನು ತೆರೆಯಬಹುದು. ಈ ಖಾತೆಯನ್ನು ತೆರೆಯುವ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ. ಬ್ಯಾಂಕ್ ಈ ಖಾತೆಗಳನ್ನು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಆಧಾರದ ಮೇಲೆ ತೆರೆಯುತ್ತದೆ.

ಇದನ್ನೂ ಓದಿ-ಮಾರುತಿ ಕಂಪನಿಯ 7 ಆಸನ ಹೊಂದಿರುವ ಈ ಕಾರು ಬಿಡುಗಡೆಗೆ ಜನ ತುದಿಗಾಲಲ್ಲಿ ಕಾಯುತ್ತಿದ್ದಾರೆ, ಕಾರಣ ಗೊತ್ತಾ?

ಈ ರೀತಿ ನಿಮಗೆ 10 ಸಾವಿರ ರೂ. ಸಿಗುತ್ತದೆ
ಜನ್ ಧನ್ ಖಾತೆಯಲ್ಲಿ ಸರ್ಕಾರದ ಪರವಾಗಿ ಖಾತೆದಾರರಿಗೆ 10,000 ರೂ.ಗಳನ್ನು ವರ್ಗಾಯಿಸಲಾಗುತ್ತಿದೆ. ಈ ಮೊತ್ತವನ್ನು ಪಡೆಯಲು, ನೀವು ತುಂಬಾ ಸುಲಭವಾದ ಪ್ರಕ್ರಿಯೆಯನ್ನು ಅನುಸರಿಸಬೇಕು. ಈ ಹಿಂದೆ ಸರ್ಕಾರವು ಈ ಖಾತೆಗಳಿಗೆ ರೂ 5,000 ಓವರ್‌ಡ್ರಾಫ್ಟ್ ನೀಡುತ್ತಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ, ಪ್ರಸ್ತುತ ಸರ್ಕಾರ ಈ ಖಾತೆಗಳಲ್ಲಿ 10,000 ರೂ.ಗಳ ಓವರ್ಡ್ರಾಫ್ಟ್ ಸೌಕರ್ಯ ನೀಡಲಾಗುತ್ತಿದೆ. ಈ ಖಾತೆಯಲ್ಲಿ ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೀರಿ. ಈ ಖಾತೆಗಳಲ್ಲಿ ನೀವು ಮಿನಿಮಮ್ ಬ್ಯಾಲೆನ್ಸ್ ಕಾಯುವ ಟೆನ್ಷನ್ ಇಲ್ಲ. ಇದರಲ್ಲಿ ನಿಮಗೆ ರುಪೇ ಡೆಬಿಟ್ ಕಾರ್ಡ್ ಕೂಡ ನೀಡಲಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News