ನವದೆಹಲಿ : ಮನೆ ನಿರ್ಮಿಸುವ ಯೋಜನೆ ಹಾಕಿಕೊಂಡವರಿಗೆ ಇದು ನಿಜಕ್ಕೂ ಶುಭ ಸುದ್ದಿ. ಮನೆ ನಿರ್ಮಾಣಕ್ಕೆ ಇಳಿಯಲು ಇದು ಸೂಕ್ತ ಸಮಯ ಎಂದೇ ಹೇಳಬಹುದು. ಯಾಕೆಂದರೆ ಮನೆ ನಿರ್ಮಾಣಕ್ಕೆ ಬಳಸುವ ಸಾಮಗ್ರಿಗಳ ಬೆಲೆ ಕಡಿಮೆಯಾಗಿದೆ. ಪ್ರಮುಖ ಕಟ್ಟಡ ಸಾಮಗ್ರಿಗಳಲ್ಲಿ ಒಂದಾದ ಕಬ್ಬಿಣದ ಸರಳುಗಳ ದರ ದಿನೇ ದಿನೇ ಕುಸಿಯುತ್ತಿದೆ.  ಮಾತ್ರವಲ್ಲ ಸಿಮೆಂಟ್, ಇಟ್ಟಿಗೆ ಬೆಲೆಯಲ್ಲಿಯೂ ಇಳಿಕೆಯಾಗಿದೆ.


COMMERCIAL BREAK
SCROLL TO CONTINUE READING

ಮನೆಗಳ ಛಾವಣಿ ಮತ್ತು ಬೀಮ್ ಗಳ ನಿರ್ಮಾಣಕ್ಕೆ ಕಬ್ಬಿಣದ ಸರಳುಗಳನ್ನು ಬಳಸಲಾಗುತ್ತದೆ. ಎರಡು ತಿಂಗಳ ಹಿಂದೆ ಅಂದರೆ ಮಾರ್ಚ್‌ನಲ್ಲಿ ಈ ಸರಳುಗಳ ಬೆಲೆ ಟನ್‌ಗೆ 85 ಸಾವಿರ ರೂ.ಆಗಿತ್ತು. ಆದರೆ ಈಗ ಹಲವೆಡೆ ಟನ್ ಗೆ   45 ಸಾವಿರ ರೂಪಾಯಿಗೆ ಸಿಗುತ್ತಿದೆ.  ಅಷ್ಟೇ ಅಲ್ಲ ಬ್ರಾಂಡೆಡ್ ಬಾರ್ ಗಳ ಬೆಲೆಯಲ್ಲಿಯೂ ಇಳಿಕೆಯಾಗಿದೆ.  2022ರ ಮಾರ್ಚ್‌ನಲ್ಲಿ ಟನ್‌ಗೆ 1 ಲಕ್ಷ ರೂ.ಗೆ ಲಭ್ಯವಿದ್ದ ಈ ಕಬ್ಬಿಣದ ಸರಳುಗಳು  ಈಗ ಟನ್‌ಗೆ 80 ರಿಂದ 85 ರೂ.ಗೆ ಸಿಗುತ್ತಿದೆ. 


ಇದನ್ನೂ ಓದಿ : IRCTC Train Ticket Reservation: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್


ಕಬ್ಬಿಣದ ಸರಳುಗಳ ಬೆಲೆ ಕಡಿಮೆಯಾಗಲು ಕಾರಣ ? : 
ವಾಸ್ತವವಾಗಿ, ಉತ್ತರಭಾರದತಲ್ಲಿ ಈಗ ಸೂರ್ಯ ನೆತ್ತಿ ಸುಡುತ್ತಾನೆ, ಮಿತಿ ಮೀರಿದ ಬಿಸಿಲಿನ ಕಾರಣದಿಂದಾಗಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕೆಲಸಗಾರರು ಲಭ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಗಿತಗೊಂಡ ನಿರ್ಮಾಣ ಕಾರ್ಯಗಳಿಂದ ಈ ಸಾಮಗ್ರಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಸರಳುಗಳ ಬೆಲೆ ಕೂಡಾ  ಕಡಿಮೆಯಾಗಿದೆ. ಇದಲ್ಲದೆ, ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆಯನ್ನು ನಿಯಂತ್ರಿಸಲು ಸರ್ಕಾರವು ಅದರ ರಫ್ತಿನ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಬೆಲೆ ಇಳಿಕೆಗೆ ಇದೂ ಒಂದು ಕಾರಣವಾಗಿದೆ. 


ಸಿಮೆಂಟ್ ಬೆಲೆಯೂ ಇಳಿಕೆ : 
ಕಬ್ಬಿಣದ ಸರಳು ಹೊರತುಪಡಿಸಿ, ಸಿಮೆಂಟ್ ಬೆಲೆಯೂ ಇಳಿಕೆಯಾಗಿದೆ. ಮೇ ತಿಂಗಳಲ್ಲಿ ಸಿಮೆಂಟ್ ಚೀಲಕ್ಕೆ 400 ರೂ.ಗೆ ತಲುಪಿತ್ತು. ಈಗ ಸಿಮೆಂಟ್ ಚೀಲಕ್ಕೆ 385 ರಿಂದ 390 ರೂ.ಗೆ ಪಾವತಿಸಿದರೆ ಸಾಕು. ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ ಸಂತೋಷ್ ಮೀನಾ ಪ್ರಕಾರ, ಅದಾನಿ-ಹೋಲ್ಸಿಮ್ ಒಪ್ಪಂದದ ನಂತರ ಸಿಮೆಂಟ್ ವಲಯದಲ್ಲಿ ಅನಿಶ್ಚಿತತೆ ಕಾಣುತ್ತಿದೆ. ಈ ಒಪ್ಪಂದವು ಪೈಪೋಟಿಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಮುಂಬರುವ ದಿನಗಳಲ್ಲಿ ಸಿಮೆಂಟ್ ಬೆಲೆಗಳಲ್ಲಿ ಮತ್ತಷ್ಟು ಕುಸಿತ ಕಂಡು ಬರಲಿದೆ.  


ಇದನ್ನೂ ಓದಿ : Gold Price Today : ಮತ್ತೆ ಹೆಚ್ಚಳವಾಯಿತು ಚಿನ್ನದ ಬೆಲೆ , ಬೆಳ್ಳಿ ಬೆಲೆ ಕೂಡಾ ಏರಿಕೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.