ನವದೆಹಲಿ: Happy Father's Day 2021 - ತನ್ನ ಮಗು ಯಶಸ್ಸಿನ ಪ್ರತಿಯೊಂದು ಉತ್ತುಂಗಕ್ಕೆ ತಲುಪಲಿ ಎಂಬುದು ತಂದೆಯಾದವನ ಬಯಕೆಯಾಗಿರುತ್ತದೆ. ಆದರೆ ಈ ಕನಸನ್ನು ಈಡೇರಿಸುವಲ್ಲಿ, ಹಣದ ಜೊತೆಗೆ, ತಂದೆ ತನ್ನ ಮಕ್ಕಳಿಗೆ ಹಣಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ಸಹ ಹೇಳಿಕೊಡಬೇಕು. ಹಣವನ್ನು ಸಂಪಾದಿಸುವುದು ಸುಲಭ, ನೀವು ಯಾವುದೇ ಕೆಲಸವನ್ನು ಮಾಡುವ ಮೂಲಕ ಹಣವನ್ನು ಸಂಪಾದಿಸಬಹುದು, ಆದರೆ, ಹಣ ಉಳಿತಾಯ ಮಾತ್ರ ಒಂದು ದೊಡ್ಡ ಸವಾಲಿನ ಪ್ರಶ್ನೆ. ಹೀಗಾಗಿ ನಿಮ್ಮ ಮಗುವಿಗೂ ಕೂಡ  ಹಣದ ಗುಲಾಮರಾಗದೆ, ಹಣದ ಮೇಲೆ ಸವಾರಿ ಮಾಡಬೇಕು ಎಂಬುದನ್ನು ತಿಳಿಸಿಕೊಡಲು ಮರೆಯಬೇಡಿ. ಜೀವನದಲ್ಲಿ ಆತನಿಗೆ ಕೈತುಂಬಾ ಹಣ ಸಂಪಾದನೆ ಹೇಗೆ ಮಾಡಬೇಕು ಎಂಬುದನ್ನು ಹೇಳಿಕೊಡಿ. ಆದರೆ, ಜೀವನದುದ್ದಕ್ಕೂ ಕೇವಲ ಹಣದ ಬಗ್ಗೆಯೇ ಯೋಚನೆ ಮಾಡಬಾರದು ಎಂಬುದನ್ನೂ ಕೂಡ ಹೇಳಿಕೊಡಿ.


COMMERCIAL BREAK
SCROLL TO CONTINUE READING

ಇಂದು Father's Day 2021 ನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾವು ನಿಮಗೆ ಕೆಲ ಮಂತ್ರಗಳನ್ನು ಹೇಳಿಕೊಡುತ್ತಿದ್ದು, ನೀವೂ ಕೂಡ ನಿಮ್ಮ ಮಗ ಅಥವಾ ಮಗಳಿಗೆ ಈ ಮಂತ್ರಗಳನ್ನು ಹೇಳಿಕೊಡಿ. ಇವು ಹಣದ ಬಗೆಗಿನ ಅವರ ಮನೋಭಾವವನ್ನು ಬದಲಾಯಿಸಬಹುದು. ಇವು ಕೆಲವು ಭಾರಿ ಹಣಕಾಸಿನ ಯೋಜನೆಗಳಿಗೆ ಸಂಬಂಧಿಸಿಲ್ಲ ಆದರೆ ಇವು ದೈನಂದಿನ ಜೀವನದಲ್ಲಿ ನಡೆಯುವ ಸಂಗತಿಗಳು, ಇವುಗಳ ಪರಿಣಾಮವು ನಿಮ್ಮ ಮಕ್ಕಳ ಜೀವನದ ಮೇಲೆ ಬಹಳ ಆಳವಾಗಿರುತ್ತದೆ.


1. Need ಹಾಗೂ Wants (ಅಗತ್ಯತೆಗಳು ಹಾಗೂ ಬಯಕೆಗಳು) ಗಳಲ್ಲಿನ ಅಂತರ ಹೇಳಿಕೊಡಿ
ತಂದೆಯಾದ ಯಾವುದೇ ವ್ಯಕ್ತಿ ತನ್ನ ಮಗುವಿಗೆ 'ಇಲ್ಲ' ಎಂದು ಹೇಳಲು ಬಯಸುವುದಿಲ್ಲ. ಆದ್ದರಿಂದ, ಅವನು ತನ್ನ ಮಗುವಿನ ಪ್ರತಿಯೊಂದು ಬೇಡಿಕೆಯನ್ನು ಈಡೇರಿಸುತ್ತಾನೆ, ಎಲ್ಲವನ್ನೂ ಖರೀದಿಸುತ್ತಾನೆ ಮತ್ತು ಕೊಡುತ್ತಾನೆ, ಅದು ಅಗತ್ಯವಿದೆಯೋ ಇಲ್ಲವೋ ಎಂದು ಯೋಚಿಸದೆ. ಉದಾಹರಣೆಗೆ ದುಬಾರಿ ಫೋನ್‌ಗಳು, ಐಪ್ಯಾಡ್‌ಗಳು, ದುಬಾರಿ ಕೈಗಡಿಯಾರಗಳು, ವಿಡಿಯೋ ಗೇಮ್‌ಗಳು ಇತ್ಯಾದಿ. ಆದರೆ ಕೆಲವೊಮ್ಮೆ ತಂದೆಯಾಗಿ, ನಿಮ್ಮ ಮಗು ಕೇಳುತ್ತಿರುವುದು ಅಗತ್ಯವಿಲ್ಲದಿರಬಹುದು ಎಂದು ನಿಮಗನಿಸುತ್ತದೆ. ಆಗ ನೀವು ವಿವಿಧ ರೀತಿಯ ಕಾರಣಗಳನ್ನು ಹೇಳುವುದರ ಮೂಲಕ ಅದನ್ನು ಖರೀದಿಸುವುದರಿಂದ ತಪ್ಪಿಸಲು ಪ್ರಯತ್ನಿಸುತ್ತೀರಿ.  ಉದಾಹರಣೆಗೆ - ನಾನು ಅದನ್ನು ಕೊಡಿಸುತ್ತೇನೆ, ಅದು ತುಂಬಾ ದುಬಾರಿಯಾಗಿದೆ ಅಥವಾ ಯಾವುದೇ ಇತರ ಕಾರಣ. ಅಗತ್ಯಗಳು ಮತ್ತು ಬಯಕೆಗಳ (Needs And Wants) ನಡುವಿನ ವ್ಯತ್ಯಾಸವನ್ನು ನಿಮ್ಮ ಮಗುವಿಗೆ ವಿವರಿಸುವ ಅವಕಾಶವನ್ನು ನೀವು ಇಲ್ಲಿ ಕಳೆದುಕೊಳ್ಳುತ್ತೀರಿ. ನಿಮ್ಮನ್ನು ತಪ್ಪಿಸುವ ಬದಲು, ಕೇಳುವ ವಸ್ತು ಮಗುವಿಗೆ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ವಿವರಿಸಲು ಪ್ರಯತ್ನಿಸಬೇಕು. ಈ ಅಭ್ಯಾಸವನ್ನು ನೀವು ಪ್ರತಿಯೊಂದು ಸಂಗತಿ, ಪ್ರತಿಯೊಂದು ಬೇಡಿಕೆ ಹಾಗೂ ಪ್ರತಿಯೊಂದು ವಸ್ತುವಿನ ವಿಷಯದಲ್ಲಿ  ಮಾಡಬೇಕು, ಎಲ್ಲದಕ್ಕೂ ಪ್ರತಿ ಬೇಡಿಕೆ. ಮಗು ಕೇಳುತ್ತಿರುವುದು ನಿಜವಾಗಿಯೂ ಮಗುವಿಗೆ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬ ನಿರ್ಧಾರ ಮಗುವಿಗೆ ಬಿಟ್ಟು ಬಿಡಿ.  ಕ್ರಮೇಣ ಅದು ನಿಮ್ಮ ಮಗುವಿನ ಆಲೋಚನಾ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತದೆ, ಎದು ಎಲ್ಲವನ್ನೂ ಯೋಚಿಸಲಾರಂಭಿಸುತ್ತದೆ. ಅಗತ್ಯ ಮತ್ತು ಅನಿವಾರ್ಯವಲ್ಲದ ಮಾಪಕಗಳಲ್ಲಿ ಅದನ್ನು ತೂಗಿಸುವ ಮೂಲಕ ಪ್ರತಿಯೊಂದು ನಿರ್ಧಾರವನ್ನು ಪರಿಗನಿಸುತದೆ ಮತ್ತು ನಂತರ ಅದು ಏನು ಮಾಡಬೇಕೆಂದು ನಿರ್ಧರಿಸುತ್ತದೆ.


2. ಹಣ ಗಳಿಕೆ ಅವಶ್ಯಕ ಸಂಗತಿಯಾಗಿದೆ ಆದರೆ ಉಳಿತಾಯ ಅತ್ಯಾವಶ್ಯಕ (Financial Planning)
Earning Is Important But, Saving Is Mandatory ಎಂಬ ಮಂತ್ರವನ್ನು ನೀವು ನಿಮ್ಮ ಮಗುವಿಗೆ ಹೇಳಿಕೊಡಬೇಕು. ಏಕೆಂದರೆ, ಹಣವನ್ನು ಉಳಿಸುವ ಅಭ್ಯಾಸವನ್ನು ಬಾಲ್ಯದಿಂದಲೂ ಮಕ್ಕಳಲ್ಲಿ ಬೆಳೆಸಬೇಕು. ಪ್ರತಿದಿನ ಅವನು ಸ್ವಲ್ಪ ಹಣವನ್ನು ಸಣ್ಣ ಪಿಗ್ಗಿ ಬ್ಯಾಂಕಿನಲ್ಲಿ ಇಡಬೇಕು. ಇದು ಉಳಿತಾಯದ ಮೊದಲ ಹೆಜ್ಜೆ. ಆತನ ಪಾಲಿಗೆ ಉಳಿತಾಯ ಎನ್ನುವುದು ಹಸಿವು, ಬಾಯಾರಿಕೆ ಹಾಗೂ ನಿದ್ರೆಯಂತಹ ಅನಿವಾರ್ಯತೆಯಾಗಿಬೇಕು. ಅಂದರೆ, ಅದರ ಹೊರತು ಜೀವನ ಸಾಗುವುದಿಲ್ಲ ಎಂಬ ಮನವರಿಕೆ ಆತನಲ್ಲಿ ಬೆಳೆಸಿ ಮತ್ತು ಅವನನ್ನು ಈ ಅಚ್ಚಿನಲ್ಲಿ ರೂಪಿಸುವುದು ತಂದೆಯ ಜವಾಬ್ದಾರಿಯಾಗಿದೆ. ನೀವು ಅವನಿಗೆ ಪಾಕೆಟ್ ಹಣವನ್ನು ನೀಡಿ, ಆದರೆ ಉಳಿತಾಯದ ಗುರಿಯೊಂದಿಗೆ ಅದನ್ನು ನೀಡಿ. ಅಂದರೆ, ಒಂದು ವೇಳೆ ನೀವು ಅವನಿಗೆ ಪ್ರತಿದಿನ 100 ರೂಪಾಯಿ ಪಾಕೆಟ್ ಹಣವನ್ನು ನೀಡಿದರೆ, ಪ್ರತಿ ತಿಂಗಳು ಅದರಿಂದ 900 ರೂಪಾಯಿಗಳನ್ನು ತನ್ನ ಪಿಗ್ಗಿ ಬ್ಯಾಂಕಿನಲ್ಲಿ ಠೇವಣಿ ಇಡಲು ಹೇಳಿಕೊಡಿ. ಅವನ ಪಾಕೆಟ್ ಮನಿ ಪ್ರತಿತಿಂಗಳು 5 ರೂಪಾಯಿಗಳಷ್ಟು ಹೆಚ್ಚಾಗುತ್ತದೆ ಎಂಬ ಗುರಿಯನ್ನು ಅವನಿಗೆ ನೀಡಿ. ಅಂದರೆ, 100 ರೂಪಾಯಿಗಳಲ್ಲಿ 30 ರೂಪಾಯಿಗಳನ್ನು ಪಿಗ್ಗಿ ಬ್ಯಾಂಕಿನಲ್ಲಿ ಹಾಕಬೇಕು, ಉಳಿದ 70 ರೂಪಾಯಿಗಳನ್ನು ಅವನು ಖರ್ಚು ಮಾಡಬಹುದೆಂದು ನೀವು ಅವನಿಗೆ ಕಲಿಸಿದಂತಾಗುತ್ತದೆ. ಇದು ನೀವು ನಿಮ್ಮ ಮಗುವಿಗೆ ಹೇಳಿಕೊಡುವ ಉಳಿತಾಯದ ಮೊದಲ ಮತ್ತು ಮೂಲ ಸೂತ್ರ. ಈ ಅಭ್ಯಾಸ ಮಗುವಿನಲ್ಲಿ ಚಮತ್ಕಾರದ ಬೆಳವಣಿಗೆ ತರಲಿದೆ.


3. ಆಸೆ ದುಃಖಕ್ಕೆ ಕಾರಣ (Teach Kids Money Saving)
ಹಣ ಖರ್ಚು ಮಾಡುವ ಉದ್ದೇಶ ಹೊಂದಿದೆ. ಅದರಿಂದ ನಮಗೆ ಬೇಕಾದ ವಸ್ತುಗಳನ್ನು ನಾವು ಖರೀದಿಸುತ್ತೇವೆ. ಆದರೆ, ಇದು ಒಂದು ಕುದುರೆಯಗಿದ್ದು, ಯಾರ ಕೈಯಲ್ಲಿ ಹೋದರು ಕೂಡ ಬಿಡಿಸಿಕೊಳ್ಳಲು ಯತ್ನಿಸುತ್ತದೆ.  ಆದ್ದರಿಂದ, ಬಾಲ್ಯದಿಂದಲೂ ಈ ಕುದುರೆ ಸವಾರಿ ಮಾಡಲು ಮಕ್ಕಳಿಗೆ ಕಲಿಸಿ. ನಾವು ಸೂಪರ್ಮಾರ್ಕೆಟ್, ಮಾಲ್‌ಗಳಲ್ಲಿ ಶಾಪಿಂಗ್‌ಗೆ ಹೋದಾಗ, ನಮಗೆ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಖರೀದಿಸಿದ ನಂತರ ನಾವು ಮನೆಗೆ ಬರುತ್ತೇವೆ ಎಂದು ಅನೇಕ ಸಂಶೋಧನೆಗಳಲ್ಲಿ ತಿಳಿದುಬಂದಿದೆ. ಮುಂದಿನ ಬಾರಿ ನೀವು ಶಾಪಿಂಗ್‌ಗೆ ಹೋದಾಗ, ಪಟ್ಟಿಯನ್ನು ನಿಮ್ಮ ಮಗನಿಗೆ ಹಸ್ತಾಂತರಿಸಿ ಮತ್ತು ಶಾಪಿಂಗ್ ವಸ್ತುಗಳನ್ನು ತರಲು ಹೇಳಿ, ಅವರು ಪಟ್ಟಿಯ ಹೊರಗೆ ಅನೇಕ ವಸ್ತುಗಳನ್ನು ತರುತ್ತಾರೆ ಎಂದು ಭಾವಿಸಿ. ನಂತರ ನೀವು ಅವನ ಮುಂದೆಯೇ ಪಟ್ಟಿಯನ್ನು ಹೊಂದಿಸಿ, ಮತ್ತು ಪಟ್ಟಿಯನ್ನು ಹೊರತುಪಡಿಸಿ ಇತರೆ ವಸ್ತುಗಳನ್ನು ಏಕೆ ಖರೀದಿಸಿರುವೆ ಎಂದು ಪ್ರಶ್ನಿಸಿ.  ಅದಕ್ಕೆ ಆತನಿಂದ 50% ರಿಯಾಯಿತಿ ಇತ್ತು ಅಥವಾ ಆಫರ್ ಇತ್ತು ಅಥವಾ ಬೇರೆ ಏನಾದರು ಕಾರಣ ಆತ ಹೇಳಬಹುದು. ಇದರರ್ಥ ಪಟ್ಟಿಯಿಂದ ಹೊರಗಿರುವ ಸರಕುಗಳನ್ನು ಆತ ಅವಶ್ಯಕತೆಯಿಂದ ಖರೀದಿಸಿಲ್ಲ ಮತ್ತು ಆತ ಅವುಗಳನ್ನು ದುರಾಸೆಯಿಂದ ಖರೀದಿಸಿದ್ದಾನೆ ಎಂದಾಗುತ್ತದೆ. ಇದನ್ನು ಮಗುವಿಗೆ ವಿವರಿಸಿ ಮತ್ತು ಪಟ್ಟಿಯ ಹೊರಗಿನ ಎಲ್ಲಾ ವಸ್ತುಗಳನ್ನು ಹಿಂತಿರುಗಿಸಲು ಹೇಳಿ. ಒಂದೆರಡು ಬಾರಿ ಆತ ಅಭ್ಯಾಸ ಮಾಡಿದ ನಂತರ, ಪುನಃ ಆತ ಪಟ್ಟಿಯ ಹೊರಗಿರುವ ವಸ್ತುಗಳನ್ನು ಖರೀದಿಸಲು ಹೋಗುವುದಿಲ್ಲ.


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ಡಬಲ್ ಧಮಾಕಾ! DA ಬಳಿಕ ಇದೀಗ TAಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟ


4. ಮಕ್ಕಳು ನೋಡುವುದನ್ನೇ ಕಲಿಯುತ್ತಾರೆ (Money Saving And Investment)
ಮಕ್ಕಳು ನೋಡುವುದನ್ನೇ ಕಳೆಯುತ್ತಾರೆ ಎಂಬುದನ್ನು ನಮ್ಮ ಮನೆಯಲ್ಲಿ ಗುರುಹಿರಿಯರು ಹೇಳುವುದನ್ನು ನೀವೂ ಕೇಳಿರಬಹುದು. ಇಂತಹುದರಲ್ಲಿ ಓರ್ವ ತಂದೆಯಾಗಿ ನಿಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಲಿದೆ. ನಿಮ್ಮ ಮಗ ಅಥವಾ ಮಗಳು ಹಣದ ಬಗ್ಗೆ ನೀವು ಹೊಂದಿರುವ ನಡುವಳಿಕೆಯನ್ನೇ ಕಲಿಯುತ್ತಾರೆ, ಆದ್ದರಿಂದ ಮೊದಲು ನೀವು ಹಣದ ಬಗ್ಗೆ ನಿಮ್ಮ ಮನೋಭಾವವನ್ನು ಬದಲಾಯಿಸಬೇಕು. ಮನೆಗೆ ಯಾವುದೇ ವಸ್ತುವನ್ನು ಕೊಂಡೊಯ್ಯುವ ಮೊದಲು,   ಮನೆಗೆ ಹೋದಾಗ ಮಕ್ಕಳು ನಿಮಗೆ ಏನನ್ನು ಪ್ರಶ್ನಿಸಬಹುದು ಎಂಬುದನ್ನು ಮೊದಲೇ ಆಲೋಚಿಸಿ ಅದರ ಉತ್ತರವನ್ನು ತಯಾರಿಸಿಕೊಳ್ಳಿ. ಉದಾಹರಣೆಗೆ ನೀವು ಆ ವಸ್ತುವನ್ನು ಮನೆಗೆ ತಂದಿದ್ದಾದರು ಏಕೆ? ಅದರ ಅವಶ್ಯಕತೆ ಎಷ್ಟಿದೆ? ಇತ್ಯಾದಿ. ಏಕೆಂದರೆ, ಮುಂದಿನ ಬಾರಿಗೆ ನೀವು ನಿಮ್ಮ ಮಗುವಿಗೆ ಯಾವುದಾದರೊಂದು ವಸ್ತುವನ್ನು ಖರೀದಿಸಲು ನಿರಾಕರಿಸಿದಾಗ, ಮಗು ಅದನ್ನು ಒಪ್ಪಿಕೊಳ್ಳಲೇ ಇದೆ ಎಂಬುದರ ಯಾವುದೇ ಗಾರಂಟಿ ಇರುವುದಿಲ್ಲ. ಹೀಗಾಗಿ ಮಹಾತ್ಮಾ ಗಾಂಧಿಜೀ ಅವರು ಹೇಳಿರುವಂತೆ ಮೊದಲು ನೀವು ಬೆಲ್ಲವನ್ನು ತಿನ್ನುವುದನ್ನು ಬಿಡಿ, ನಂತರ ಇತರರಿಗೆ ಬೆಲ್ಲ ಸೇವಿಸದಿರಲು ಹೇಳಿಕೊಡಿ.


ಇದನ್ನೂ ಓದಿ- 7th Pay Commission: ಪಿಂಚಣಿಗೆ ಸಂಬಂಧಿಸಿದಂತೆ ಬದಲಾದ ನಿಯಮ; ಷರತ್ತುಗಳು ಅನ್ವಯ


5. ಹಣ ಗಳಿಕೆಯ ರೂಢಿ (Happy Father's Day 2021)
ನೀವು ಎಷ್ಟು ಶ್ರಮಪಟ್ಟು ಹಣ ಸಂಪಾದಿಸುತ್ತೀರಿ ಎಂಬುದು ನಿಮ್ಮ ಮಕ್ಕಳಿಗೆ ತಿಳಿದಿದೆಯೇ? ಬಹುಶಃ ಇಲ್ಲದೆ ಇರಬಹುದು. ಹಣವನ್ನು ಗಳಿಕೆ ಮಾಡಬೇಕಾಗುತ್ತದೆ ಎಂಬುದನ್ನು ಅವರಿಗೆ ವಿವರಿಸಿ. ಇದಕ್ಕಾಗಿ ನೀವು ಸ್ವಲ್ಪ ಪ್ರಾಯೋಗಿಕವಾಗಿರಬೇಕು. ನೀವು ಮಗುವಿಗೆ ಯಾವುದೇ ಮನೆಯ ಕೆಲಸವನ್ನು ನೀಡಿ ಮತ್ತು ಅದಕ್ಕೆ ಪ್ರತಿಯಾಗಿ ಹಣವನ್ನು ನೀಡಿ. ಉದಾಹರಣೆಗೆ, ಅವನು ತನ್ನ ಕೊಠಡಿಯನ್ನು ಸ್ವಚ್ಛಗೊಳಿಸಿದರೆ, ಅವನಿಗೆ ಹಣ ಸಿಗುತ್ತದೆ. ಅವನು ನೀರಿನ ಬಾಟಲಿಗಳನ್ನು ಫ್ರಿಜ್‌ನಲ್ಲಿ ತುಂಬಿಸಿದರೆ, ನಂತರ ಅವನಿಗೆ ಹಣ ಸಿಗುತ್ತದೆ ಅಥವಾ ಮನೆಯ ಹೊರಗಿನಿಂದ ಯಾವುದೇ ಸರಕುಗಳನ್ನು ತಂದರೆ ಅವನಿಗೆ ಹಣ ಸಿಗುತ್ತದೆ ಇತ್ಯಾದಿಗಳು. ಇದರಿಂದ ಒಬ್ಬ ವ್ಯಕ್ತಿ ಹಣ ಸಂಪಾದಿಸಲು ಕೆಲಸ ಮಾಡಬೇಕಾಗುತ್ತದೆ ಎಂದು ಬಾಲ್ಯದಲ್ಲಿಯೇ ಮಗುವಿಗೆ ಅರ್ಥವಾಗುತ್ತದೆ. ಇದು ಮಕ್ಕಳ ಹಣದ ಮನೋಭಾವವನ್ನು ಬದಲಾಯಿಸುತ್ತದೆ.


ಇದನ್ನೂ ಓದಿ-SBI New Rule: ಜುಲೈ 1 ರಿಂದ ಎಟಿಎಂನಿಂದ ಹಣ ವಿತ್ ಡ್ರಾ ಆಗಲಿದೆ ದುಬಾರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.