Financial Fit: ಆರ್ಥಿಕವಾಗಿ ಬಲಿಷ್ಠರಾಗಬೇಕೆ ಹಾಗಿದ್ರೆ ಈ ನಿಯಮಗಳನ್ನ ಪಾಲಿಸಿ!
ನಿವೃತ್ತಿಯ ನಂತರವೂ ನೀವು ನಿಮ್ಮ ಪ್ರಸ್ತುತ ಜೀವನಶೈಲಿಯನ್ನು ಕಾಪಾಡಿಕೊಳ್ಳಬೇಕಾದರೆ, ನೀವು ಸರಾಸರಿ 25-30 ಪ್ರತಿಶತದಷ್ಟು ಉಳಿತಾಯ ಮಾಡಬೇಕು
ಕೊರೋನಾದಿಂದ ಪ್ರತಿಯೊಂದು ಕ್ಷೇತ್ರದ ಹಾಗೂ ಪ್ರತಿಯೊಂದು ಕಾರ್ಯವೂ ಸೇರಿದಂತೆ ಹಲವುಗಳ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರಿದೆ. ಇಂದಹ ಸನ್ನಿವೇಶದಲ್ಲಿ ನಮಲ್ಲಿ ಬಹುತೇಕ ಜನ, ಆರ್ಥಿಕ ಸಮಸ್ಯೆಗಳನ್ನು ದೂರಮಾಡಲು ಯೋಚನೆ ಮಾಡುತಿರುತ್ತಾರೆ. ಅಂತಹವರಿಗಾಗಿ ಇಲ್ಲಿವೆ ಕೆಲವೊಂದಿಷ್ಟು ಸಲಹೆಗಳು.
ಹಣ ಉಳಿತಾಯ: ಇದು ಅತ್ಯಂತ ಪ್ರಮುಖ ಅಭ್ಯಾಸವಾಗಿದ್ದು, ನೀವು ಇನ್ನೂ ಇದನ್ನು ಪ್ರಾರಂಭಿಸದೇ ಇದ್ದರೆ, ಆದಷ್ಟು ಬೇಗ ಅದನ್ನು ರೂಢಿಸಿಕೊಳ್ಳಿ. ಹಣ(Money)ಉಳಿಸುವುದು ಹೇಗೆ ಎಂದು ಯೋಚಿಸಿದರೆ. ಅದು ಸರಳವಾದ ವಿಧಾನ ನೀವು ಗಳಿಸುವುದಕ್ಕಿಂತ ಕಡಿಮೆ ಖರ್ಚು ಮಾಡಿದ್ರೆ, ಆದ್ದರಿಂದ ನೀವು ಹಣವನ್ನು ಉಳಿತಾಯ ಮಾಡ ಬಹುದು. ನಿವೃತ್ತಿಯ ನಂತರವೂ ನೀವು ನಿಮ್ಮ ಪ್ರಸ್ತುತ ಜೀವನಶೈಲಿಯನ್ನು ಕಾಪಾಡಿಕೊಳ್ಳಬೇಕಾದರೆ, ನೀವು ಸರಾಸರಿ 25-30 ಪ್ರತಿಶತದಷ್ಟು ಉಳಿತಾಯ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಇದು ಕಷ್ಟವೆನಿಸಬಹುದು.
Unique Devi Temple: ಇಲ್ಲಿ ದೇವಿಗೆ ಐದು ಕಲ್ಲು ಅರ್ಪಿಸಿ ಹರಕೆ ತೀರಿಸಲಾಗುತ್ತದೆ
ಕೊನೆಯ ಕ್ಷಣದವರೆಗೆ ಕಾಯಬೇಡಿ: ನಿಮ್ಮ ಹಣಕಾಸಿನ ಪರಿಸ್ಥಿತಿಯ ವಿಷಯಕ್ಕೆ ಬಂದಾಗ, ಮುಂದೆ ಪಶ್ಚಾತ್ತಾಪಪಡುವುದಕ್ಕಿಂತ, ಮುಂಚಿತವಾಗಿಯೇ ನೀವು ಸುರಕ್ಷಿತವಾಗಿರಬೇಕು. ಆದರೆ ಆರ್ಥಿಕ ಭದ್ರತೆ ನಿಮ್ಮ ಗುರಿಯಾಗಬೇಕು. ಸಾಲ(Lone) ಬಾಕಿ ಇರುವ ಯಾವುದೇ ಸಾಲವನ್ನು ಸಕಾಲಕ್ಕೆ ಪಾವತಿಸಿ, ಸಾಲ ಬಾಕಿ ಇರುವ ಸಾಲಮಾತ್ರ ಪಾವತಿಸಿ. ಬಾಡಿಗೆ, ಫೋನ್ ಮತ್ತು ಇಂಟರ್ನೆಟ್ ಬಿಲ್ ಅಥವಾ ಇನ್ನಾವುದೇ ಆಗಿರಲಿ, ಸಮಯಕ್ಕೆ ಸರಿಯಾಗಿ ಹಣ ಪಾವತಿಮಾಡುವುದು ಅಗತ್ಯ. ನಿಮಗೆ ತೊಂದರೆ ಇದ್ದರೆ, ಸ್ವಯಂ ಡೆಬಿಟ್ ಸೌಲಭ್ಯದ ಪ್ರಯೋಜನ ವನ್ನು ಪಡೆದುಕೊಳ್ಳಿ ಅಥವಾ ನಿಮ್ಮ ಫೋನ್ ನಲ್ಲಿ ರಿಮೈಂಡರ್ ಸೆಟ್ ಮಾಡಿ. ಇಂದು ನಾವು ಡಿಜಿಟಲ್ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ, ದಿನಾಂಕವನ್ನು ಮರೆಯಬೇಡಿ. ನಿಮ್ಮ ಬಳಿ ಹಣವಿಲ್ಲದಿದ್ದರೆ, ಕಂಪನಿಯೊಂದಿಗೆ ಮಾತನಾಡಿ ಮತ್ತು ನಿಮ್ಮ ಬಿಲ್ಲಿಂಗ್ ಸೈಕಲ್ ಅನ್ನು ಬದಲಾಯಿಸಿ.
Money Problem: ನಿಮಗೆ ಕಾಡುವ ಆರ್ಥಿಕ ಸಮಸ್ಯೆಗಳಿಗೆ ನಿಮ್ಮ ಕೈಯಲ್ಲಿಯೇ ಇದೆ ಪರಿಹಾರ!
ಖರ್ಚು ವೆಚ್ಚದ ಮೇಲೆ ಕಣ್ಣಿಡಿ: ಯಾವುದು ಮುಖ್ಯ ಮತ್ತು ಯಾವುದು ಮುಖ್ಯವಲ್ಲ ಎಂಬುದನ್ನು ನಿರ್ಧರಿಸಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಎಲ್ಲಾ ಖರ್ಚು ವೆಚ್ಚಗಳ ಮೇಲೆ ಗಮನ ವನ್ನು ಇಡುವುದು ಅತ್ಯುತ್ತಮ ಮಾರ್ಗವಾಗಿದೆ. ಹೆಚ್ಚಿನ ಪಾವತಿಗಳನ್ನು ಆನ್ ಲೈನ್(Online)ನಲ್ಲಿ ಮಾಡಲಾಗುತ್ತದೆ, ಆದ್ದರಿಂದ ನೀವು ವ್ಯವಹಾರದ ಮೇಲೆ ಕಣ್ಣಿಡಬೇಕಾಗುತ್ತದೆ. ಕೇವಲ ಒಂದು ತಿಂಗಳ ಕಾಲ ನಿಮ್ಮ ಖರ್ಚುಗಳನ್ನು ಟ್ರ್ಯಾಕ್ ಮಾಡುವುದರಿಂದ ನಿಮ್ಮ ಹಣ ಎಲ್ಲಿಗೆ ಹೋಗುತ್ತದೆ ಮತ್ತು ಅದನ್ನು ಹೇಗೆ ಉಳಿಸಬಹುದು ಎಂಬುದನ್ನು ತಿಳಿಯಲು ನಿಮಗೆ ಸಹಾಯವಾಗುತ್ತದೆ. ನೀವು ಏನಾದರೂ ವ್ಯರ್ಥವಾಗಿ ಖರ್ಚು ಮಾಡುತ್ತಿದ್ದರೆ, ಈ ಮೂಲಕ ನೀವು ಸುಲಭವಾಗಿ ಅರ್ಥವಾಗುತ್ತದೆ.
Daily Horoscope: ದಿನಭವಿಷ್ಯ 02-04-2021 Today astrology
ಅನವಶ್ಯಕ ಖರ್ಚು ಮಾಡಬೇಡಿ: ಕೆಲವು ನಮ್ಮ ಖರ್ಚುಗಳನ್ನು ನಿಯಂತ್ರಿಸುವ ಮೂಲಕ ಆರ್ಥಿಕ ಸ್ಥಿರತೆಯನ್ನು ಸಾಧಿಸಬಹುದು. ಖರ್ಚು ವೆಚ್ಚಗಳುಸಾಮಾನ್ಯವೇ ಹೊರತು ಹವ್ಯಾಸವಾಗಬಾರದು.
ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಿ: ನಿಮಗೆ ಉತ್ತಮ ಪ್ರತಿಫಲ ವನ್ನು ನೀಡಲು ಅಥವಾ 45 ನೇ ವಯಸ್ಸಿ(Age)ನಲ್ಲಿ ನಿವೃತ್ತಿ ಪಡೆಯಲು ಇಂದು ಹೂಡಿಕೆ ಪ್ರಾರಂಭಿಸಿ.
Vaastu Tips: ಪೊರಕೆಗೆ 'ವಾಸ್ತು ಟಿಪ್ಸ್' ಏನು ಮಾಡಬೇಕು? ಏನು ಮಾಡಬಾರದು?
ಸಾಲ ಪಾವತಿಸಿ: ಮನೆ ಸೇರಿದಂತೆ ಕ್ರೆಡಿಟ್ ಕಾರ್ಡ್(Credit Card) ಸಾಲದ ಮೇಲಿನ ಬಡ್ಡಿ ದರಗಳು, ಸ್ಟೂಡೆಂಟ್ ಲೋನ್(Student Lone), ನಿಮ್ಮ ಸಾಲದ ಬಗ್ಗೆ ಸಂಪೂರ್ಣ ಕಾಳಜಿವಹಿಸಿ ಮತ್ತು ಅವುಗಳನ್ನ ಸಕಾಲದಲ್ಲಿ ಪಾವತಿಸಿ. ಮೊದಲು ಅತೀ ಹೆಚ್ಚು ಬಡ್ಡಿ ದರದ ಸಾಲವನ್ನು ಕಟ್ಟಿ ಮುಗಿಸಿಬಿಡಿ.
ಯೋಜನೆ ರೂಪಿಸಿ ಮತ್ತು ಅದಕ್ಕೆ ಅಂಟಿಕೊಳ್ಳಿ: ನಿಮ್ಮನ್ನು ಪಂಜರದಲ್ಲಿಟ್ಟುಕೊಳ್ಳುವುದಲ್ಲ. ಪ್ರತಿ ತಿಂಗಳು ನೀವು ಮಾಡುವ ಖರ್ಚು ವೆಚ್ಚಗಳನ್ನ ಪ್ಲಾನ್(Plane) ಮಾಡುವುದು. ಮುಂಚಿತವಾಗಿ ದುಬಾರಿ ವಸ್ತುಗಳ ಖರೀದಿಯನ್ನು ಯೋಜಿಸಿ ಮತ್ತು ಅನಾರೋಗ್ಯದ ಕಾರಣ ಅಥವಾ ಆಸ್ಪತ್ರೆಗೆ ಸೇರಿಸಿದಂತಹ ಅನಿರೀಕ್ಷಿತ ವೆಚ್ಚಗಳಿಗೆ ಬಗ್ಗೆ ಕೂಡ ಗಣದಲ್ಲಿರಲಿ.
ಹಳದಿ ಬಣ್ಣ ಮತ್ತು ಗುರುವಾರಕ್ಕೇನು ಸಂಬಂಧ ತಿಳಿದಿದೆಯೇ ?
ಈ ಏಳು ಸಂಗತಿಗಳು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿಲ್ಲ. ಆದ್ರೆ ಈ ಏಳು ಸಂಗತಿಗಳನ್ನ ಅನುಸರಿಸುವ ಮೂಲಕ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.