ವೈವಾಹಿಕ ಜೀವನದಲ್ಲಿ ಕಾಡುವಂತಹ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವದು ಹೇಗೆ ಎಂದು ಚಿಂತಿಸುತ್ತಿದ್ದೀರಾ? ಅದನ್ನು ನೀವು ಸುಲಭವಾಗಿ ಬಗೆಹರಿಸಬಹುದು ಅಲ್ಲದೆ ಸಂಬಂಧಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಬಹುದು.
ವೈವಾಹಿಕ ಜೀವನದಲ್ಲಿ ಕಂಡುಬರುವಂತಹ ಸಮಸ್ಯೆ(Problem)ಯೆಂದರೆ ಅದು ಭಿನ್ನ ಆರ್ಥಿಕ ವ್ಯಕ್ತಿಗಳ ಸಂಗಾತಿಗಳಿರುವುದು. ಒಬ್ಬರು ಇಲ್ಲಿ ತುಂಬಾ ಖರ್ಚು ಮಾಡುವವರಾದರೆ, ಮತ್ತೊಬ್ಬರು ಉಳಿತಾಯಕ್ಕೆ ಒತ್ತು ನೀಡುವವರು ಆಗಿರುವರು.
Daily Horoscope: ದಿನಭವಿಷ್ಯ 02-04-2021 Today astrology
ಇದರಿಂದಾಗಿ ಸಮಸ್ಯೆಗಳು ಬರುವುದು. ಇದನ್ನು ಸರಿಯಾಗಿ ಬಗೆಹರಿಸದೆ ಇದ್ದರೆ ಆಗ ಇದರಿಂದ ಸಮಸ್ಯೆಗಳು ಕಂಡು ಬರಲು ಶುರುವಾಗುತ್ತದೆ. ಇದನ್ನು ತುಂಬಾ ಕೂಲ್ ಆಗಿ ಹಾಗೂ ಮುಕ್ತವಾಗಿ ಮಾತನಾಡಬೇಕು. ಪರಸ್ಪರರ ಖರ್ಚಿನ ಬಗ್ಗೆ ತಿಳಿಯಬೇಕು.
Vaastu Tips: ಪೊರಕೆಗೆ 'ವಾಸ್ತು ಟಿಪ್ಸ್' ಏನು ಮಾಡಬೇಕು? ಏನು ಮಾಡಬಾರದು?
ಹಣ(Money)ದ ನಿರ್ವಹಣೆ ಮತ್ತು ಖರ್ಚಿನ ಬಗ್ಗೆ ಮಾತನಾಡದೆ ಇದ್ದರೆ ಆಗ ಸಂಗಾತಿಯು ತನ್ನ ಖರ್ಚು ವೆಚ್ಚಗಳನ್ನು ನಿಮ್ಮಿಂದ ಮುಚ್ಚಿಡುತ್ತಿದ್ದಾರೆ ಎಂದು ಹೇಳಬಹುದು. ಇದು ಮುಂದೆ ಸಮಸ್ಯೆ ಉಂಟು ಮಾಡಬಹುದು ಮತ್ತು ಇಬ್ಬರ ನಡುವಿನ ವಿಶ್ವಾಸಕ್ಕೆ ಹಾನಿ ಉಂಟು ಮಾಡಬಹುದು.
ಜಾಯಿಂಟ್ ಅಕೌಂಟ್(Joint Account) ಇದ್ದರೆ ಆಗ ಖರ್ಚನ್ನು ರಹಸ್ಯವಾಗಿಡಲು ತುಂಬಾ ಕಷ್ಟವಾಗುವುದು. ಖರ್ಚಿನ ಅಭ್ಯಾಸಗಳ ಬಗ್ಗೆ ಮಾತನಾಡುವುದು ಸುಲಭವಾದರೂ ಅದನ್ನು ಕಾರ್ಯಗತಗೊಳಿಸುವುದು ಕಷ್ಟ. ಖರ್ಚು-ವೆಚ್ಚಗಳ ಬಗ್ಗೆ ಪರಸ್ಪರರ ಜತೆಗೆ ಮುಕ್ತವಾಗಿ ಮಾತನಾಡಬೇಕು. ಬಜೆಟ್ ಮಾಡಿಕೊಂಡು ಅದರಂತೆ ಖರ್ಚು ಮಾಡಿದರೆ ಒಳ್ಳೆಯದು. ನೀವು ಇದಕ್ಕಾಗಿ ಸಮೋಲೋಚಕರನ್ನು ಭೇಟಿ ಮಾಡಬಹುದು.
ಹಳದಿ ಬಣ್ಣ ಮತ್ತು ಗುರುವಾರಕ್ಕೇನು ಸಂಬಂಧ ತಿಳಿದಿದೆಯೇ ?
ವಿವಾಹ(Marriage)ದ ಬಳಿಕ ಒಂದೆರಡು ಮಕ್ಕಳು ಆದರೆ ಅದರಿಂದ ಖರ್ಚು ಕೂಡ ಹೆಚ್ಚಾಗುವುದು ಸಾಮಾನ್ಯ. ಅದೇ ರೀತಿಯಾಗಿ ಮನೆಯಲ್ಲಿ ಹೆತ್ತವರು ಇದ್ದರೆ ಅವರ ಖರ್ಚು ಕೂಡ ನೋಡಿಕೊಳ್ಳಬೇಕಾಗುತ್ತದೆ. ಇದೆಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದು ಅತೀ ಅಗತ್ಯ.
ಕುಟುಂಬ(Family)ವು ದೊಡ್ಡದಾಗಿದ್ದರೆ ಖರ್ಚು ಹೆಚ್ಚು. ಆದರೆ ಇದೆಲ್ಲವನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಸಮಸ್ಯೆಗಳೂ ಎದುರಾಗದು. ನೀವಿಬ್ಬರು ಜತೆಯಾಗಿ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಬೇಕು. ಆರ್ಥಿಕ ಗಡಿ ರಚನೆ ಮಾಡಿ ಮತ್ತು ಇದಕ್ಕೆ ಮೀರಿ ಖರ್ಚು ಮಾಡಲು ಹೋಗಬೇಡಿ. ಮನೆಯ ಸದಸ್ಯರು ಬೇಜವಾಬ್ದಾರಿಯಿಂದ ಯಾವಾಗಲೂ ಹಣ ಕೇಳುತ್ತಲಿದ್ದರೆ ಆಗ ಇದು ಸಮಸ್ಯೆ ಸೃಷ್ಟಿಸಬಹುದು.
Daily Horoscope: ದಿನಭವಿಷ್ಯ 01-04-2021 Today astrology
ಹಣವು ಖಂಡಿತವಾಗಿಯೂ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟು ಮಾಡುವುದು. ಆದರೆ ಎಲ್ಲವನ್ನು ಸರಿಯಾಗಿ ನಿರ್ವಹಣೆ ಮಾಡಬಹುದು. ಸಂವಹನವು ಸರಿಯಾಗಿ ಇಲ್ಲದೆ ಇದ್ದ ಸಂದರ್ಭದಲ್ಲಿ ಮಾತ್ರ ಇಂತಹ ಸಮಸ್ಯೆಗಳು ತೀವ್ರವಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.