Vaastu Tips: ಪೊರಕೆಗೆ 'ವಾಸ್ತು ಟಿಪ್ಸ್' ಏನು ಮಾಡಬೇಕು? ಏನು ಮಾಡಬಾರದು?

ಗುಡಿಸುವುದರಿಂದ ಹಿಡಿದು, ಪೊರಕೆಯನ್ನು ಇಡುವ ಜಾಗದವರೆಗೆ ಎಲ್ಲಾ ವಿಷಯಗಳನ್ನು ಗಮನಿಸುವುದು ಮುಖ್ಯ. 

Last Updated : Apr 1, 2021, 07:22 PM IST
  • ಪೊರಕೆಯನ್ನು ಲಕ್ಷ್ಮಿಯ ಪ್ರತೀಕ ಎಂದು ಹೇಳಲಾಗುತ್ತದೆ.
  • ಗುಡಿಸುವುದರಿಂದ ಹಿಡಿದು, ಪೊರಕೆಯನ್ನು ಇಡುವ ಜಾಗದವರೆಗೆ ಎಲ್ಲಾ ವಿಷಯಗಳನ್ನು ಗಮನಿಸುವುದು ಮುಖ್ಯ.
  • ಹಲವಾರು ಬಾರಿ ಪೊರಕೆ ತುಂಡಾಗಿದ್ದರೂ ಅದನ್ನ ಬಳಸುತ್ತೇವೆ. ಆದರೆ ವಾಸ್ತುವಿನ ಅನುಸಾರ ಇದು ತಪ್ಪು
Vaastu Tips: ಪೊರಕೆಗೆ 'ವಾಸ್ತು ಟಿಪ್ಸ್' ಏನು ಮಾಡಬೇಕು? ಏನು ಮಾಡಬಾರದು? title=

ಪೊರಕೆಯನ್ನು ಲಕ್ಷ್ಮಿಯ ಪ್ರತೀಕ ಎಂದು ಹೇಳಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಕೆಲವೊಂದು ವಿಷಯಗಳ ಬಗ್ಗೆ ಗಮನ ಹರಿಸದೆ ಇದ್ದರೆ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಹೆಚ್ಚಿನ ಜನರು ಪೊರಕೆಯನ್ನು ಕಡೆಗಣಿಸುತ್ತಾರೆ. ಆದರೆ ಇದಕ್ಕೆ ಸಂಬಂಧಿಸಿದ ವಾಸ್ತುವನ್ನು ಗಮನಿಸದೆ ಇದ್ದರೆ ಮನೆಯಲ್ಲಿ ದಾರಿದ್ರ್ಯ ತಾಂಡವವಾಡುತ್ತದೆ. 

ಗುಡಿಸುವುದರಿಂದ ಹಿಡಿದು, ಪೊರಕೆ(Broom Sticks)ಯನ್ನು ಇಡುವ ಜಾಗದವರೆಗೆ ಎಲ್ಲಾ ವಿಷಯಗಳನ್ನು ಗಮನಿಸುವುದು ಮುಖ್ಯ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಪೊರಕೆಯನ್ನು ಬಳಸದ ಸಂದರ್ಭದಲ್ಲಿ ಅದನ್ನು ಕಣ್ಣಿಗೆ ಕಾಣದ ಜಾಗದಲ್ಲಿ ಇಡಿ. ದಿನವೂ ಪೊರಕೆಯನ್ನು ನೋಡುತ್ತಿದ್ದರೆ ಅದು ಉತ್ತಮವಲ್ಲ. ಹೊರಗಿಟ್ಟ ಪೊರಕೆ ಮನೆಯ ಸಕಾರಾತ್ಮಕ ಶಕ್ತಿಯನ್ನು ಹೀರುತ್ತದೆ.

Monthly Horoscope: ಏಪ್ರಿಲ್ ನಲ್ಲಿ ಈ ಗ್ರಹಗಳ ಸ್ಥಾನ ಪಲ್ಲಟ: ಇದರಿಂದ ಯಾವ ರಾಶಿಗೆ ಶುಭ-ಅಶುಭ?

ಹಲವಾರು ಬಾರಿ ಪೊರಕೆ ತುಂಡಾಗಿದ್ದರೂ ಅದನ್ನ ಬಳಸುತ್ತೇವೆ. ಆದರೆ ವಾಸ್ತು(Vaastu)ವಿನ ಅನುಸಾರ ಇದು ತಪ್ಪು. ತುಂಡಾದ ಪೊರಕೆ ಬಳಸಿದರೆ ಮನೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. 

ಹಳದಿ ಬಣ್ಣ ಮತ್ತು ಗುರುವಾರಕ್ಕೇನು ಸಂಬಂಧ ತಿಳಿದಿದೆಯೇ ?

ಪೊರಕೆಯನ್ನು ಯಾವತ್ತೂ ನೇರವಾಗಿ ನಿಲ್ಲಿಸಬೇಡಿ. ನೆರವಾಗಿಟ್ಟ ಪೊರಕೆ ಅಪಶಕುನಕ್ಕೆ ಕಾರಣವಾಗುತ್ತದೆ. ಸಂಜೆಯ ಮನೆ(House) ಗುಡಿಸುವುದು ವಾಸ್ತು ಪ್ರಕಾರ ಉತ್ತಮವಲ್ಲ. ಇದರಿಂದ ಲಕ್ಷ್ಮಿ ಮನೆ ಬಿಟ್ಟು ಹೋಗುತ್ತಾಳಂತೆ. 

Daily Horoscope: ದಿನಭವಿಷ್ಯ 01-04-2021 Today astrology

ಸಾಧ್ಯವಾದರೆ ಪೊರಕೆಯನ್ನು ಪಶ್ಚಿಮ ದಿಕ್ಕಿನಲ್ಲಿರುವ ಕೋಣೆಯಲ್ಲಿಡಿ. ಇದರಿಂದ ಪೊರಕೆಯಿಂದಾಗಿ ಮನೆಯಲ್ಲಿ ಯಾವುದೇ ರೀತಿಯ ನೆಗೆಟಿವ್ ಎನರ್ಜಿ ಹೆಚ್ಚುವುದಿಲ್ಲ. 

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಬಳಸಿ ಪೇರಳೆ ಎಲೆಯ ಫೇಸ್ ಪ್ಯಾಕ್

ಹಳೆ ಪೊರಕೆ ಬದಲು ಹೊಸ ಪೊರಕೆ ಖರೀದಿ ಮಾಡುವುದಾದರೆ ಶನಿವಾರ ಖರೀದಿಸಿ. ಪೊರಕೆಯನ್ನು ತೊಳೆಯುವುದಾದರೆ ಅದನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು. ಕೆಟ್ಟ ನೀರಿಂದ ತೊಳೆದರೆ ಅದಕ್ಕೆ ಅವಮಾನ ಮಾಡಿದಂತೆ ಆಗುತ್ತದೆ.

Hanuman Temple: ಶ್ರೀ ಆಂಜನೇಯನನ್ನು ಸ್ತ್ರೀ ರೂಪದಲ್ಲಿ ಆರಾಧಿಸಲಾಗುವ ಈ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News