ಎಸ್ ಬಿಐ ಮಕ್ಕಳಿಗಾಗಿ ತಂದಿದೆ Pehla Kadam Pehli Udaan ಉಳಿತಾಯ ಖಾತೆ ಸಿಗಲಿದೆ ಇಷ್ಟು ಸೌಲಭ್ಯ
Pehla Kadam Pehli Udaan: ಎಸ್‌ಬಿಐ ಪ್ರಕಾರ, ಈ ಉಳಿತಾಯ ಖಾತೆಯನ್ನು ವಿಶೇಷವಾಗಿ ಮಕ್ಕಳಿಗಾಗಿ ತೆರೆಯಲಾಗುತ್ತಿದೆ. ಇದರಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ.
ನವದೆಹಲಿ : Pehla Kadam Pehli Udaan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಕ್ಕಳಿಗಾಗಿ ವಿಶೇಷ ಸೌಲಭ್ಯವನ್ನು ತಂದಿದೆ. ಈ ಸೌಲಭ್ಯವನ್ನು ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ನೀಡಲಾಗುತ್ತಿದೆ. ಇದರ ವಿಶೇಷವೆಂದರೆ ಚಿಕ್ಕ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಈ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಈ ಸೌಲಭ್ಯಕ್ಕೆ ಪೆಹ್ಲಾ ಕದಮ್, ಪೆಹ್ಲಿ ಉಡಾನ್ ಎಂದು ಹೆಸರಿಸಲಾಗಿದೆ. ಇದರಲ್ಲಿ, ಮಗುವಿನ ಹೆಸರಿನಲ್ಲಿ ಖಾತೆ ತೆರೆಯುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ, ನೀವು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆದ ಕೂಡಲೇ ಎಟಿಎಂ ಕಾರ್ಡ್ (ATM Card) ಸೌಲಭ್ಯವನ್ನು ನಿಮಗೆ ನೀಡಲಾಗುತ್ತಿದೆ.
ಎಸ್‌ಬಿಐ (SBI) ಪ್ರಕಾರ, ಈ ಉಳಿತಾಯ ಖಾತೆಯನ್ನು ವಿಶೇಷವಾಗಿ ಮಕ್ಕಳಿಗಾಗಿ ತೆರೆಯಲಾಗುತ್ತಿದೆ. ಇದರಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ (Internet banking) ಸೌಲಭ್ಯವನ್ನೂ ಒದಗಿಸಲಾಗುತ್ತಿದೆ.
ಇದನ್ನೂ ಓದಿ : Paytm: ಈ ಬ್ಯಾಂಕಿನ ಗ್ರಾಹಕರು ಎಫ್‌ಡಿ ಖಾತೆಯಿಂದ ತ್ವರಿತ ಪೇಮೆಂಟ್ ಮಾಡಬಹುದು
ಪೆಹಲ ಕದಂ ಉಳಿತಾಯ ಖಾತೆ:
-ಈ ಖಾತೆಯಡಿಯಲ್ಲಿ, ಪೋಷಕರು ಮಗುವಿನೊಂದಿಗೆ ಜಂಟಿ ಖಾತೆಯನ್ನು ತೆರೆಯಬಹುದು.
-ಈ ಮಗುವನ್ನು ಪೋಷಕರು ಅಥವಾ ಮಗು ಸ್ವತಃ ನಿರ್ವಹಿಸಬಹುದು.
-ಎಟಿಎಂ ಕಾರ್ಡ್(ATM Card) ಅನ್ನು ಪೋಷಕರು ಅಥವಾ ಮಗುವಿನ ಹೆಸರಿನಲ್ಲಿ ತೆಗೆದುಕೊಳ್ಳಬಹುದು.
ಈ ಅಕೌಂಟ್ ನ ಪ್ರಯೋಜನಗಳು :
ಈ ಖಾತೆಯಲ್ಲಿ ಮೊಬೈಲ್ ಬ್ಯಾಂಕಿಂಗ್ (Mobile Banking) ಸೌಲಭ್ಯವನ್ನು ನೀಡಲಾಗುತ್ತಿದೆ. ಇದರೊಂದಿಗೆ, ಎಲ್ಲಾ ರೀತಿಯ ಬಿಲ್‌ಗಳನ್ನು ಪಾವತಿಸಬಹುದು. ಈ ಖಾತೆಯಿಂದ ದಿನಕ್ಕೆ 2,000 ರೂ. ಗಳ ವಹಿವಾಟು ನಡೆಸಬಹುದು. ಖಾತೆ ತೆರೆದ ನಂತರ ಮಗುವಿನ ಹೆಸರಿನಲ್ಲಿ ಎಟಿಎಂ ಕಾರ್ಡ್ ನೀಡಲಾಗುತ್ತದೆ. ಎಟಿಎಂನಲ್ಲಿ (ATM) ನೀವು ಈ ಖಾತೆಯಿಂದ 5,000 ರೂಗಳನ್ನು ತೆಗೆಯಬಹುದು. ಅಲ್ಲದೆ, ಇಂಟರ್ನೆಟ್ ಬ್ಯಾಂಕಿಂಗ್‌ನಲ್ಲಿ ದಿನಕ್ಕೆ 5,000 ರೂಗಳ ಟ್ರಾನ್ಸಾಕ್ಶನ್ ನಡೆಸಬಹುದು. ಈ ಖಾತೆಯಲ್ಲಿ ವೈಯಕ್ತಿಕ ಅಪಘಾತದ ಕವರ್ ಸಹ ನೀಡಲಾಗಿದೆ.
ಇದನ್ನೂ ಓದಿ : IRCTC: ರೈಲಿನಲ್ಲಿ ಯಾವುದೇ ಬೆರ್ತ್ ಖಾಲಿ ಇದ್ದರೆ ತಕ್ಷಣವೇ ಬರುತ್ತೆ ಅಲರ್ಟ್, ಸಿಗುತ್ತೆ ಕನ್ಫರ್ಮ್ ಟಿಕೆಟ್
ಪೆಹಲಿ ಉಡಾನ್ ಉಳಿತಾಯ ಖಾತೆ :
-ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ತಮ್ಮ ಸಹಿಯನ್ನು ಮಾಡಬಹುದು.
-ಈ ಖಾತೆಯು ಕೇವಲ ಮಕ್ಕಳ ಹೆಸರಿನಲ್ಲಿರುತ್ತದೆ.
-ಮಕ್ಕಳು ಇದನ್ನು ನಿರ್ವಹಿಸಬಹುದು.
ಪೆಹಲಿ ಉಡಾನ್ ಖಾತೆಯ ವೈಶಿಷ್ಟ್ಯಗಳು :
ಈ ಖಾತೆಯಲ್ಲಿ ಎಟಿಎಂ ಕಾರ್ಡ್ ಸೌಲಭ್ಯವನ್ನೂ ನೀಡಲಾಗಿದೆ. ಈ ಖಾತೆಯಿಂದ ನೀವು ದಿನಕ್ಕೆ 5,000 ರೂಗಳ ವಹಿವಾಟು ನಡೆಸಬಹುದು. ಇದರಲ್ಲಿ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನೂ ಒದಗಿಸಲಾಗಿದೆ. ಪ್ರತಿದಿನ ಈ ಖಾತೆಗೆ 2,000 ರೂ.ಗಳ ವಹಿವಾಟು ನಡೆಸಬಹುದು. ಪ್ರತಿದಿನ 5,000 ರೂಪಾಯಿಗಳನ್ನು ಟ್ರಾನ್ಸ್ ಫರ್ ಮಾಡಬಹುದು. ಚೆಕ್ ಬುಕ್ (Cheque book) ಸೌಲಭ್ಯವನ್ನು ಕೂಡ ಇದರಲ್ಲಿ ನೀಡಲಾಗಿದೆ.
ಖಾತೆ ತೆರೆಯುವುದು ಹೇಗೆ ಎಂದು ತಿಳಿಯಿರಿ :
-ಮೊದಲನೆಯದಾಗಿ, ನೀವು ಎಸ್‌ಬಿಐ (State bank of India) ವೆಬ್‌ಸೈಟ್‌ಗೆ ಹೋಗಬೇಕು. ನಂತರ ಪರ್ಸನಲ್ ಬ್ಯಾಂಕಿಂಗ್ ಕ್ಲಿಕ್ ಮಾಡಿ.
-ಈಗ ಖಾತೆ ಟ್ಯಾಬ್ ಕ್ಲಿಕ್ ಮಾಡಿ ಮತ್ತು ಉಳಿತಾಯ ಖಾತೆ ಆಯ್ಕೆಗೆ ಹೋಗಿ.
-ಅದರ ನಂತರ apply now ಕ್ಲಿಕ್ ಮಾಡಿ. ಅದರ ನಂತರ ಪಾಪ್-ಅಪ್ ವಿಂಡೋ ಇನ್ಸ್ಟಾ ಉಳಿತಾಯ ಖಾತೆಯನ್ನು ತೋರಿಸುತ್ತದೆ.
-ಅದರ ನಂತರ ಡಿಜಿಟಲ್ ಖಾತೆ ತೆರೆಯುವ ಆಪ್ಶನ್ ಕ್ಲಿಕ್ ಮಾಡಿ.
-ಅದರ ನಂತರ ಖಾತೆ ತೆರೆಯಲು ಎರಡನೇ ಪುಟಕ್ಕೆ ಹೋಗಿ.
-ಇಲ್ಲಿ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ.
-ಪ್ರಕ್ರಿಯೆ ಪೂರ್ಣಗೊಂಡ ನಂತರ, ನೀವು ಎಸ್‌ಬಿಐ ಶಾಖೆಗೆ ಭೇಟಿ ನೀಡಬೇಕಾಗುತ್ತದೆ.
ಇದಲ್ಲದೆ, ನೀವು ಎಸ್‌ಬಿಐ ಶಾಖೆಗೆ ಭೇಟಿ ನೀಡಿ ಆಫ್‌ಲೈನ್ ಖಾತೆ ತೆರೆಯಬಹುದು.
ಇದನ್ನೂ ಓದಿ : ಸಂಬಳ ಪಡೆಯುವ ನೌಕರರು Income Tax ಉಳಿಸಲು 10 ಮಾರ್ಗಗಳು : 8 ಲಕ್ಷ ರೂ.ಗಿಂತ ಹೆಚ್ಚು ತೆರಿಗೆ ಉಳಿಸಬಹುದು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ