IRCTC: ರೈಲಿನಲ್ಲಿ ಯಾವುದೇ ಬೆರ್ತ್ ಖಾಲಿ ಇದ್ದರೆ ತಕ್ಷಣವೇ ಬರುತ್ತೆ ಅಲರ್ಟ್, ಸಿಗುತ್ತೆ ಕನ್ಫರ್ಮ್ ಟಿಕೆಟ್

IRCTC New Facility: ಪ್ರಯಾಣಿಕರು ಮತ್ತು ಗ್ರಾಹಕರು ಪುಶ್ ಅಧಿಸೂಚನೆ ಸೇವೆಯ ಮೂಲಕ ಅನೇಕ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಹೊಸ ರೈಲು ಮತ್ತು ಆಯಾ ಮಾರ್ಗದ ಖಾಲಿ ಇರುವ ಬೆರ್ತ್‌ಗಳ ಬಗ್ಗೆ ಮೊಬೈಲ್ ಫೋನ್‌ನಲ್ಲಿಯೇ ಮಾಹಿತಿ ಲಭ್ಯವಿರುತ್ತದೆ.

Written by - Yashaswini V | Last Updated : Jul 20, 2021, 12:17 PM IST
  • ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪುಶ್ ನೋಟಿಫಿಕೇಶನ್ ಸೌಲಭ್ಯ ಪರಿಚಯಿಸಿದ ಐಆರ್‌ಸಿಟಿಸಿ
  • ಈ ಸೌಲಭ್ಯದ ಮೂಲಕ ಬಳಕೆದಾರರಿಗೆ ಖಾಲಿ ಬೆರ್ತ್‌ನ ಬಗ್ಗೆ ಮಾಹಿತಿ ದೊರೆಯಲಿದೆ
  • ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್ ಪಡೆಯಲು ಸುಲಭವಾಗುತ್ತದೆ
IRCTC: ರೈಲಿನಲ್ಲಿ ಯಾವುದೇ ಬೆರ್ತ್ ಖಾಲಿ ಇದ್ದರೆ ತಕ್ಷಣವೇ ಬರುತ್ತೆ ಅಲರ್ಟ್, ಸಿಗುತ್ತೆ ಕನ್ಫರ್ಮ್ ಟಿಕೆಟ್  title=
ಐಆರ್‌ಸಿಟಿಸಿಯ ಹೊಸ ಸೌಲಭ್ಯ, ರೈಲಿನಲ್ಲಿ ಯಾವುದೇ ಬೆರ್ತ್ ಖಾಲಿ ಆದರೆ ತಕ್ಷಣ ಸಿಗುತ್ತೆ ಅಲರ್ಟ್

ನವದೆಹಲಿ: IRCTC New Facility- ಸಾಮಾನ್ಯವಾಗಿ ರೈಲಿನಲ್ಲಿ ದೂರ ಪ್ರಯಾಣ ಮಾಡಬೇಕಿದ್ದರೆ ದೃಢೀಕೃತ ಟಿಕೆಟ್ ಪಡೆಯಲು ವಾರಗಳ ಅಥವಾ ತಿಂಗಳ ಮೊದಲೇ  ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ. ಹಲವು ಬಾರಿ ದೃಢೀಕರಿಸಿದ ಟಿಕೆಟ್ ಪಡೆಯದಿದ್ದಾಗ, ಪ್ರಯಾಣಿಕರು ತತ್ಕಾಲ್ ಮತ್ತು ಏಜೆಂಟರ ಮೂಲಕ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಆದರೆ ಈಗ ನಿಮಗೆ ಈ ಚಿಂತೆ ಇರುವುದಿಲ್ಲ. ರೈಲಿನಲ್ಲಿ ಯಾವುದೇ ಬೆರ್ತ್ ಖಾಲಿ ಇದ್ದರೆ, ನಿಮಗೆ ಕೂಡಲೇ ಈ ಬಗ್ಗೆ ಮಾಹಿತಿ ಲಭ್ಯವಾಗಲಿದ್ದು ನೀವು ತಕ್ಷಣ ಆ ಟಿಕೆಟ್ ಅನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ. ಐಆರ್‌ಸಿಟಿಸಿಯ ಈ ಹೊಸ ಸೇವೆಯ ಬಗ್ಗೆ ತಿಳಿಯಿರಿ.

ರೈಲಿನಲ್ಲಿ ಖಾಲಿ ಇರುವ ಬರ್ತ್ ಅನ್ನು ಕಂಡುಹಿಡಿಯುವುದು ಹೇಗೆ?
ವಾಸ್ತವವಾಗಿ, ನೀವು ಐಆರ್‌ಸಿಟಿಸಿ (IRCTC) ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದಾಗ, ಎಲ್ಲಾ ರೈಲುಗಳಲ್ಲಿ ಆಸನಗಳ ಲಭ್ಯತೆಯನ್ನು ನೀವು ನೋಡಬಹುದು. ಸೀಟು ಖಾಲಿಯಾಗಿದ್ದರೆ ನೀವು ಟಿಕೆಟ್ ಬುಕ್ (Ticket Booking) ಮಾಡುತ್ತೀರಿ. ಒಂದೊಮ್ಮೆ ಸೀಟ್ ಖಾಲಿ ಇಲ್ಲದಿದ್ದರೆ ಅದೃಷ್ಟದ ಆಧಾರದ ಮೇಲೆ ವೈಟಿಂಗ್ ಟಿಕೆಟ್ ತೆಗೆದುಕೊಳ್ಳುತ್ತೀರಿ ಅಥವಾ ವೈಟಿಂಗ್ ಲಿಸ್ಟ್ ಹೆಚ್ಚಾಗಿದ್ದರೆ ಟಿಕೆಟ್ ಕಾಯ್ದಿರಿಸದೆಯೂ ಇರಬಹುದು. ಆದರೆ ಈಗ ನೀವು ರೈಲಿನಲ್ಲಿ ಯಾವುದೇ ಆಸನ ಖಾಲಿ ಇದ್ದರೆ ಸುಲಭವಾಗಿ ಅದರ ಬಗ್ಗೆ ಮಾಹಿತಿ ಪಡೆಯಬಹುದು. ಐಆರ್‌ಸಿಟಿಸಿ ಈಗ ತನ್ನ ಪ್ರಯಾಣಿಕರಿಗೆ ಈ ಸೌಲಭ್ಯವನ್ನು ನೀಡುತ್ತಿದೆ.

ಇದನ್ನೂ ಓದಿ-  Rajdhani Express: ರಾಜಧಾನಿ ಎಕ್ಸ್‌ಪ್ರೆಸ್ ಹೊಸ 'ಅವತಾರ್', 'ಸ್ಮಾರ್ಟ್' ಬೋಗಿಗಳೊಂದಿಗೆ ಆರಾಮದಾಯಕ ಪ್ರಯಾಣಕ್ಕೆ ಒತ್ತು

ಪುಶ್ ನೋಟಿಫಿಕೇಶನ್ ಸೌಲಭ್ಯ ಪರಿಚಯಿಸಿದ ಐಆರ್‌ಸಿಟಿಸಿ:
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಪುಶ್ ನೋಟಿಫಿಕೇಶನ್ (Push Notifications)  ಸೌಲಭ್ಯವನ್ನು ಪ್ರಾರಂಭಿಸಿದೆ. ಇದರೊಂದಿಗೆ ಬಳಕೆದಾರರಿಗೆ ಆಸನ ಲಭ್ಯತೆ ಸೇರಿದಂತೆ ಹಲವು ರೀತಿಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಐಆರ್‌ಸಿಟಿಸಿ ಇತ್ತೀಚೆಗೆ ತನ್ನ ವೆಬ್‌ಸೈಟ್ ಅನ್ನು ನವೀಕರಿಸಿದೆ, ಇದರಲ್ಲಿ ಅನೇಕ ಹೊಸ ವೈಶಿಷ್ಟ್ಯಗಳನ್ನು ಕೂಡ ಸೇರಿಸಲಾಗಿದೆ. ರೈಲಿನಲ್ಲಿ ಆಸನ ಖಾಲಿ ಇದ್ದಾಗಲೆಲ್ಲಾ, ಬಳಕೆದಾರರ ಮೊಬೈಲ್‌ನಲ್ಲಿ  ಅದರ ಅಧಿಸೂಚನೆ ಲಭ್ಯವಾಗಲಿದೆ. ನಂತರ ಬಳಕೆದಾರರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಖಾಲಿ ಇರುವ ಆಸನವನ್ನು ಕಾಯ್ದಿರಿಸಬಹುದು. ಇದಕ್ಕಾಗಿ, ಬಳಕೆದಾರರು ಮೊದಲು ಐಆರ್‌ಸಿಟಿಸಿಯ ವೆಬ್‌ಸೈಟ್‌ಗೆ ಹೋಗಿ ಪುಶ್ ನೋಟಿಫಿಕೇಶನ್ ಸೌಲಭ್ಯವನ್ನು ತೆಗೆದುಕೊಳ್ಳಬೇಕಾಗುತ್ತದೆ.

ನೀವು ಒಂದು ನಿರ್ದಿಷ್ಟ ದಿನಾಂಕಕ್ಕೆ ರೈಲಿನಲ್ಲಿ ಆಸನವನ್ನು ಕಾಯ್ದಿರಿಸುತ್ತಿದ್ದೀರಿ, ನೀವು ಎಲ್ಲಾ ರೈಲುಗಳಲ್ಲಿ ಟಿಕೆಟ್ ಲಭ್ಯತೆಯನ್ನು ಪರಿಶೀಲಿಸಿದ್ದೀರಿ. ಆದರೆ ರೈಲಿನಲ್ಲಿ ಯಾವುದೇ ಆಸನ ಲಭ್ಯವಿಲ್ಲ ಎಂದು ಭಾವಿಸಿ. ಆಗ ನೀವು ಟಿಕೆಟ್ ಕಾಯ್ದಿರಿಸುವುದಿಲ್ಲ. ಈ ಸಂದರ್ಭದಲ್ಲಿ ಈ ಮೊದಲೇ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕನು ತನ್ನ ಟಿಕೆಟ್ ಅನ್ನು ರದ್ದುಗೊಳಿಸಿದರೆ, ನಿಮ್ಮ ಮೊಬೈಲ್‌ನಲ್ಲಿ ತಕ್ಷಣ ಅಧಿಸೂಚನೆ ಬರುತ್ತದೆ, ಈ ಎಸ್‌ಎಂಎಸ್‌ನಲ್ಲಿ ರೈಲು ಸಂಖ್ಯೆಯ ಮಾಹಿತಿಯೂ ಇರುತ್ತದೆ, ನಂತರ ನೀವು ಬಯಸಿದರೆ, ನೀವು ಕೂಡಲೇ ಈ ಟಿಕೆಟ್ ಕಾಯ್ದಿರಿಸಬಹುದು.

ಇದನ್ನೂ ಓದಿ- India's Most Luxurious Trains: ಭಾರತದ ಈ ರೈಲುಗಳ ಮುಂದೆ 5 ಸ್ಟಾರ್ ಹೋಟೆಲ್‌ಗಳೂ ಬೆರಗಾಗುತ್ತವೆ

ನೀವು ಐಆರ್‌ಸಿಟಿಸಿ ವೆಬ್‌ಸೈಟ್ ತೆರೆದಾಗ, ನೀವು ಪುಶ್ ಅಧಿಸೂಚನೆಗಳ ಆಯ್ಕೆಯನ್ನು ಪಡೆಯುತ್ತೀರಿ. ಗ್ರಾಹಕರು ಈ ವಿಶೇಷ ಸೇವೆಗೆ ಸಂಪೂರ್ಣವಾಗಿ ಉಚಿತವಾಗಿ ಚಂದಾದಾರರಾಗಬಹುದು. ಇದಕ್ಕಾಗಿ ಅವರು ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು ಮತ್ತು ಈ ಸೇವೆಗೆ ಚಂದಾದಾರರಾಗಬೇಕು. ಐಆರ್‌ಸಿಟಿಸಿ ಪ್ರಸ್ತುತ 30 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News