SBI ಗ್ರಾಹಕರೇ ಗಮನಿಸಿ! ಬ್ಯಾಂಕಿಂಗ್ ಸೇವೆಯನ್ನು ಮುಂದುವರಿಸಲು ತಕ್ಷಣವೇ ಈ ಕೆಲಸ ಮಾಡಿ

ಸೆಪ್ಟೆಂಬರ್ 30 ರೊಳಗೆ ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡಲು ಎಸ್‌ಬಿಐ ತನ್ನ ಖಾತೆದಾರರಿಗೆ ತಿಳಿಸಿದೆ. ಗ್ರಾಹಕರು ಇದನ್ನು ಮಾಡದಿದ್ದರೆ ಅವರು ಬ್ಯಾಂಕಿಂಗ್ ಸೇವೆಯಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಎಂದು ಬ್ಯಾಂಕ್ ಎಚ್ಚರಿಸಿದೆ.

Written by - Yashaswini V | Last Updated : Jul 19, 2021, 01:50 PM IST
  • ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಸೆಪ್ಟೆಂಬರ್ 30ರವರೆಗೆ ಅವಕಾಶ
  • ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ
  • ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ? ಎಂದು ತಿಳಿಯಿರಿ
SBI ಗ್ರಾಹಕರೇ ಗಮನಿಸಿ! ಬ್ಯಾಂಕಿಂಗ್ ಸೇವೆಯನ್ನು ಮುಂದುವರಿಸಲು ತಕ್ಷಣವೇ ಈ ಕೆಲಸ ಮಾಡಿ  title=
ಬ್ಯಾಂಕಿಂಗ್ ಸೇವೆಗಳನ್ನು ಮುಂದುವರಿಸಲು ತಕ್ಷಣವೇ ಈ ಕೆಲಸ ಮಾಡಿ- ಎಸ್‌ಬಿಐ ಎಚ್ಚರಿಕೆ

ನವದೆಹಲಿ: SBI Customer Alert- ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಸೆಪ್ಟೆಂಬರ್ 30 ರ ಮೊದಲು ಪ್ಯಾನ್-ಆಧಾರ್ ಕಾರ್ಡ್ (PAN-Aadhaar) ಅನ್ನು ಲಿಂಕ್ ಮಾಡುವಂತೆ ಸೂಚನೆ ನೀಡಿದೆ. ಗ್ರಾಹಕರು ಯಾವುದೇ ಅಡೆತಡೆ ಇಲ್ಲದೆ ತಮ್ಮ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಲು ಕೂಡಲೇ ಈ ಕೆಲಸ ಮಾಡುವಂತೆ ಎಸ್‌ಬಿಐ ಟ್ವೀಟ್ ಮಾಡಿದೆ.

ಸೆಪ್ಟೆಂಬರ್ 30 ರೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡಲು ಅವಕಾಶ:
ಈ ಕುರಿತಂತೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಟ್ವೀಟ್ ಮಾಡಿರುವ ಎಸ್‌ಬಿಐ, ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು (Banking Service) ಆನಂದಿಸಲು ನಮ್ಮ ಗ್ರಾಹಕರಿಗೆ ಪ್ಯಾನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನಾವು ಸಲಹೆ ನೀಡುತ್ತೇವೆ. ಇದರೊಂದಿಗೆ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಜೋಡಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದೆ. 

ಇದನ್ನೂ ಓದಿ- ಆಧಾರ್ ಕಾರ್ಡ್‌ನಲ್ಲಿರುವ ಚಿತ್ರ ಇಷ್ಟವಾಗುತ್ತಿಲ್ಲವೇ? ಅದನ್ನು ಈ ರೀತಿ ಬದಲಾಯಿಸಿ

ವಾಸ್ತವವಾಗಿ, ಪ್ಯಾನ್ ಮತ್ತು ಆಧಾರ್ ಲಿಂಕ್ (PAN Aadhaar Linking) ಆಗದಿದ್ದರೆ, ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ ಮತ್ತು ನಿರ್ದಿಷ್ಟ ವಹಿವಾಟುಗಳನ್ನು ನಡೆಸಲು ಪ್ಯಾನ್ ಅನ್ನು ಬಳಸಲಾಗುವುದಿಲ್ಲ. ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು 2021 ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ.

ಕರೋನಾವೈರಸ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಕಳೆದ ತಿಂಗಳು ಕೇಂದ್ರ ಸರ್ಕಾರವು ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ  ವಿಸ್ತರಿಸಿದೆ. ಈ ಮೊದಲು ಈ ಗಡುವನ್ನು ಮಾರ್ಚ್ 31 ಎಂದು ನಿಗದಿಪಡಿಸಲಾಗಿತ್ತು, ಆದರೆ ನಂತರ ಅದನ್ನು ಜೂನ್ 30ರವರೆಗೆ ವಿಸ್ತರಿಸಲಾಗಿತ್ತು.

ಇದನ್ನೂ ಓದಿ- SBI Alert: ಫ್ರೀ ಗಿಫ್ಟ್ ಆಸೆಗೆ ಬಲಿಯಾಗದಿರಿ: ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆ

ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ?
ಮೊದಲ ದಾರಿ

1- ಮೊದಲು ನೀವು ಆದಾಯ ತೆರಿಗೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ https://www.incometaxindiaefiling.gov.in/home
2- ಇಲ್ಲಿ ಎಡಭಾಗದಲ್ಲಿ ನೀವು ಲಿಂಕ್ ಆಧಾರ್ ಆಯ್ಕೆಯನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ
3- ಹೊಸ ಪುಟ ತೆರೆಯುತ್ತದೆ, ಅಲ್ಲಿ ನೀವು ಆಧಾರ್‌ನಲ್ಲಿ ಉಲ್ಲೇಖಿಸಿರುವಂತೆ ಪ್ಯಾನ್, ಆಧಾರ್ ಮತ್ತು ನಿಮ್ಮ ಹೆಸರನ್ನು ಭರ್ತಿ ಮಾಡಬೇಕು
4- ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನೀವು ಹುಟ್ಟಿದ ವರ್ಷ ಮಾತ್ರ ಇದ್ದರೆ 'ಆಧಾರ್ ಕಾರ್ಡ್‌ನಲ್ಲಿ ನನಗೆ ಹುಟ್ಟಿದ ವರ್ಷ ಮಾತ್ರ ಇದೆ' ಎಂಬ ಪೆಟ್ಟಿಗೆಯನ್ನು ಟಿಕ್ ಮಾಡಿ.
5- ಕ್ಯಾಪ್ಚಾ ಕೋಡ್ ನಮೂದಿಸಿ ಅಥವಾ ಒಟಿಪಿಗಾಗಿ ಟಿಕ್ ಮಾಡಿ
6- ಲಿಂಕ್ ಆಧಾರ್ ಬಟನ್ ಕ್ಲಿಕ್ ಮಾಡಿ, ಈ ರೀತಿಯಾಗಿ ನೀವು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಬಹುದು.

ಇನ್ನೊಂದು ಮಾರ್ಗ
ನೀವು ಎಸ್‌ಎಂಎಸ್ ಮೂಲಕ ಪ್ಯಾನ್ ಮತ್ತು ಆಧಾರ್ ಅನ್ನು ಸಹ ಲಿಂಕ್ ಮಾಡಬಹುದು.
- ಮೊಬೈಲ್‌ನ ಸಂದೇಶ ಪೆಟ್ಟಿಗೆಯಲ್ಲಿ, ಟೈಪ್ ಮಾಡಿ - UIDPAN <12-ಅಂಕಿಯ ಆಧಾರ್> <10-ಅಂಕಿಯ ಪ್ಯಾನ್>
- ಈ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News