LIC policy Lapsed : ಲ್ಯಾಪ್ಸ್ ಆಗಿರುವ LIC ಪಾಲಿಸಿ ಮತ್ತೆ ಪ್ರಾರಂಭಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ
ಲ್ಯಾಪ್ಸ್ ಆದ ನಿಮ್ಮ ವಿಮೆಯನ್ನು ಆರು ತಿಂಗಳ ಒಳಗೆ ಮರುಜೀವ ಕೊಡಬಹುದಾಗಿದೆ
ಜೀವ ವಿಮಾ ಪಾಲಿಸಿ (LIC) ಸ್ಕೀಂಗೆ ಸಹಿ ಮಾಡಿದಲ್ಲಿ ನೀವು ಪ್ಲಾನ್ ಪ್ರಕಾರ ನಿಮ್ಮ ಪ್ರೀಮಿಯಂಗಳನ್ನು ಸಕಾಲದಲ್ಲಿ ಕಟ್ಟಿಕೊಂಡು ಹೋಗುತ್ತಲೇ ಇರಬೇಕು. ಆದರೆ ಬಹಳಷ್ಟು ಪ್ರಕರಣಗಳಲ್ಲಿ ಬಹಳಷ್ಟು ಮಂದಿ ಸ್ಕೀಂ ಮೇಲೆ ಹೂಡಿಕೆ ಮಾಡಲು ವಿಫಲರಾಗಿ ಪಾಲಿಸಿ ಕುಸಿಯುತ್ತದೆ.
ಇಂಥ ಪರಿಸ್ಥಿತಿಯಲ್ಲಿ ಹೂಡಿಕೆದಾರರು ಎಲ್‌ಐಸಿ(Life Insurance Corporation) ಕೊಡಮಾಡುವ ಆಯ್ಕೆಗಳನ್ನು ಅನುಸರಿಸಿ ನಿಮ್ಮ ವಿಮಾ ಪಾಲಿಸಿಗೆ ಮರುಜೀವ ತುಂಬಬಹುದು. ಆದರೆ ಇದು ಕೊಂಚ ದುಬಾರಿ ವಿಚಾರ.
ಇದನ್ನೂ ಓದಿ : EPFO: ನಿಮ್ಮ ಖಾತೆ ಈ ಬ್ಯಾಂಕುಗಳಲ್ಲಿದ್ದರೆ ಈಗಲೇ ಈ ಕೆಲಸ ಮಾಡಿ
ಸಾಮಾನ್ಯ ಮರುಪೂರಣ ಪಾಲಿಸಿ : ಈ ನಿಯಮದಡಿ, ಲ್ಯಾಪ್ಸ್(LIC policy Lapsed) ಆದ ನಿಮ್ಮ ವಿಮೆಯನ್ನು ಆರು ತಿಂಗಳ ಒಳಗೆ ಮರುಜೀವ ಕೊಟ್ಟುಕೊಳ್ಳಬಹುದಾಗಿದೆ. ಆದರೆ ಇದಕ್ಕಾಗಿ ನೀವು ಪ್ರೀಮಿಯಂ ಜೊತೆಗೆ ಬಡ್ಡಿಯನ್ನು ಕಟ್ಟಬೇಕಾಗುತ್ತದೆ.
ಇದನ್ನೂ ಓದಿ : Gold-Silver Rate : ಚಿನ್ನದ ಬೆಲೆಯಲ್ಲಿ ದೊಡ್ಡ ಬದಲಾವಣೆ; ಇಲ್ಲಿದೆ ಇಂದಿನ ಬೆಲೆ ಪರಿಶೀಲಿಸಿ!
ವೈದ್ಯಕೀಯ ಆಧಾರದ ಮರುಪೂರಣ : ಪಾಲಿಸಿ ಅವಧಿಯಲ್ಲಿ ಹೂಡಿಕೆದಾರರು(Investor) ಈ ಮರುಜೀವದ ಪ್ಲಾನ್ ಅನ್ನು ಒಮ್ಮೆ ಬಳಸಬಹುದಾಗಿದೆ. ಈ ಪ್ಲಾನ್ ಅಡಿ ಬರುವ ವೈದ್ಯಕೀಯ ಅಗತ್ಯಗಳನ್ನು ಎಲ್‌ಐಸಿ ನಿರ್ಧರಿಸಲಿದ್ದು, ಮರುಪೂರಣ ಮಾಡಬೇಕಾದ ಮೊತ್ತವನ್ನು ನಿರ್ಧರಿಸುತ್ತದೆ.
ಇದನ್ನೂ ಓದಿ : Indian Currency: 25 ಪೈಸೆಯ ಬದಲಿಗೆ 1.5 ಲಕ್ಷ ರೂ. ಮಾರಾಟ ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ವಿಶೇಷ ಮರುಪೂರಣ ಸ್ಕೀಂ : ಈ ನಿಯಮದಡಿ ಹೂಡಿಕೆದಾರರು ವಯಸ್ಸಿಗನುಸಾರವಾಗಿ ಮರುಪೂರಣದ ಅವಧಿಯಲ್ಲಿ ಹೂಡಿಕೆದಾರರು ಸಿಂಗಲ್ ಪ್ರೀಮಿಯಂ(Single Premium) ಕಟ್ಟಬೇಕು. ಪೂರ್ಣ ಪ್ರೀಮಿಯಂ ಕಟ್ಟಿದ ಮೇಲೆಯೇ ಈ ವಿಶೇಷ ಮರುಪೂರಣ ಪ್ಲಾನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಆರೋಗ್ಯವಂತರಾಗಿದ್ದೀರೆಂದು ವೈದ್ಯಕೀಯ ದಾಖಲೆಗಳ ಸಮೇತ ಸಾಬೀತುಪಡಿಸಬೇಕು.
ಇದನ್ನೂ ಓದಿ : SBI's new scheme: ವ್ಯವಹಾರಕ್ಕೆ 10 ಲಕ್ಷದಿಂದ 100 ಕೋಟಿ ರೂ.ವರೆಗೆ ಸುಲಭ ಸಾಲ ಲಭ್ಯ
ಕಂತು ಮರುಪೂರಣ ಸ್ಕೀಂ : ಈ ಸ್ಕೀಂ(Scheme)ನಡಿ ಪಾಲಿಸಿ ಲ್ಯಾಪ್ಸ್ ಆಗದಂತೆ ಹೂಡಿಕೆದಾರರಿಗೆ ಬಾಕಿಯನ್ನು ಕಂತುಗಳಲ್ಲಿ ಪಾವತಿ ಮಾಡಲು ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ : Petrol Prices Latest Update:ಈ ವರ್ಷ 125 ರೂ/ಲೀ ತಲುಪಲಿದೆ ಪೆಟ್ರೋಲ್ ಬೆಲೆ
ಸಾಲ ಕಂ ಮರುಪೂರಣ ಸ್ಕೀಂ : ಅದಾಗಲೇ ಹೂಡಿಕೆ ಮಾಡಿರುವ ತಮ್ಮದೇ ದುಡ್ಡಿನಿಂದ ಸಾಲ(Loan) ಪಡೆಯುವ ಮೂಲಕ ಹೂಡಿಕೆದಾರರು ಪ್ರೀಮಿಯಂ ಬಾಕಿ ಕಟ್ಟಲು ಅವಕಾಶವನ್ನು ಈ ಸ್ಕೀಂ ಕೊಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.