Petrol Prices Latest Update:ಈ ವರ್ಷ 125 ರೂ/ಲೀ ತಲುಪಲಿದೆ ಪೆಟ್ರೋಲ್ ಬೆಲೆ

Petrol Prices Latest Update: ದಿನೇ ದಿನೇ  ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಸಾಮಾನ್ಯ ಜನರ ಜೇಬು ಸುಡುತ್ತಿದೆ. ಮತ್ತೊಂದೆಡೆ ಜಾಗತಿಕ ಕಚ್ಚಾ ತೈಲತೈಲ ಬೆಲೆಗಳು ನಿರ್ಧಾರವಾಗುತ್ತವೆ ಎಂದು ಸರ್ಕಾರ ಹೇಳಿಕೊಂಡು ಬರುತ್ತಿದೆ.  ಹಾಗಾದರೆ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆಯಾಗುವ ಸಾಧ್ಯತೆಗಳಿವೆಯಾ?

Written by - Ranjitha R K | Last Updated : Jun 25, 2021, 09:20 AM IST
  • ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ
  • ಜಾಗತಿಕ ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತಿರುವ ಕಚ್ಚಾತೈಲ ಬೆಲೆ
  • ಲೀಟರ್ ಪೆಟ್ರೋಲ್ ಬೆಲೆ 125 ರೂ ತಲುಪುವ ಸಾಧ್ಯತೆ
Petrol Prices Latest Update:ಈ ವರ್ಷ 125 ರೂ/ಲೀ ತಲುಪಲಿದೆ ಪೆಟ್ರೋಲ್ ಬೆಲೆ title=
ಲೀಟರ್ ಪೆಟ್ರೋಲ್ ಬೆಲೆ 125 ರೂ ತಲುಪುವ ಸಾಧ್ಯತೆ (photo zee news)

ನವದೆಹಲಿ :  Petrol Prices Latest Update: ದಿನೇ ದಿನೇ  ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಸಾಮಾನ್ಯ ಜನರ ಜೇಬು ಸುಡುತ್ತಿದೆ. ಮತ್ತೊಂದೆಡೆ ಜಾಗತಿಕ ಕಚ್ಚಾ ತೈಲತೈಲ ಬೆಲೆಗಳು ನಿರ್ಧಾರವಾಗುತ್ತವೆ ಎಂದು ಸರ್ಕಾರ ಹೇಳಿಕೊಂಡು ಬರುತ್ತಿದೆ.  ಹಾಗಾದರೆ ಪೆಟ್ರೋಲ್ ಡೀಸೆಲ್ ಬೆಲೆ (Petrol diesel rate) ಕಡಿಮೆಯಾಗುವ ಸಾಧ್ಯತೆಗಳಿವೆಯಾ? ಭವಿಷ್ಯದಲ್ಲಿ ಅಗ್ಗವಾಗಲಿದೆಯಾ ತೈಲ ಬೆಲೆ ಎಂಬ ಪ್ರಶ್ನೆಗೆ ತಜ್ಞರು ಏನು ಹೇಳುತ್ತಾರೆ ನೋಡೋಣ. 

ಒಪೆಕ್ + ದೇಶಗಳ ಸಭೆಯ ಮೇಲೆ ನಿಗಾ :
ಕಚ್ಚಾ ತೈಲದ ಬೆಲೆ ಕಳೆದ ಒಂದು ವರ್ಷದಲ್ಲಿ ಪ್ರತಿ ಬ್ಯಾರೆಲ್‌ಗೆ 26 ಡಾಲರ್ ವರೆಗೆ ದುಬಾರಿಯಾಗಿದೆ. ಜೂನ್ 2020 ರಲ್ಲಿ, ಕಚ್ಚಾ ತೈಲ ಬ್ಯಾರೆಲ್‌ಗೆ 40 ಡಾಲರ್ ನಷ್ಟಿತ್ತು. ಈಗ ದು ಬ್ಯಾರೆಲ್‌ಗೆ  76 ಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದೆ. ಇದೀಗ ಎಲ್ಲರ ಕಣ್ಣುಗಳು ಜುಲೈ 1 ರಂದು ನಡೆಯಲಿರುವ OPEC+ಸಭೆಯತ್ತ ನೆಟ್ಟಿದೆ. ಇದರಲ್ಲಿ ಉತ್ಪಾದನಾ ನೀತಿಗೆ ಸಂಬಂಧಿಸಿದ ನಿರ್ಧಾರವನ್ನು  ತೆಗೆದುಕೊಳ್ಳಬೇಕಾಗಿದೆ. 

ಇದನ್ನೂ ಓದಿ : Gold-Silver Rate : ಚಿನ್ನ ಖರೀದಿಗೆ ಇದೇ ಸರಿಯಾದ ಸಮಯ : ಬೆಳ್ಳಿಯಲ್ಲಿ ಬೆಲೆ ಏರಿಕೆ

ಲೀಟರ್ ಪೆಟ್ರೋಲ್ ಬೆಲೆ 125 ರೂ ತಲುಪುವ ಸಾಧ್ಯತೆ : 
ಈಗ ಒಪೆಕ್ + ದೇಶಗಳು ಉತ್ಪಾದನಾ ಪೂರೈಕೆಯನ್ನು ಹೆಚ್ಚಿಸಲು ನಿರ್ಧರಿಸಿದರೆ, ಭಾರತದಲ್ಲಿ ಪೆಟ್ರೋಲ್ (Petrol) ಮತ್ತು ಡೀಸೆಲ್ ಬೆಲೆ ಕಡಿಮೆಯಾಗುವುದೇ? ಈ ಕುರಿತು ತೈಲ ತಜ್ಞ ಅರವಿಂದ್ ಮಿಶ್ರಾ ಪ್ರಕಾರ, ಡಾಲರ್ ಎದುರು ನಿರಂತರವಾಗಿ ರೂಪಾಯಿ ಕುಸಿತಕ್ಕೆ ಮುಂಚೆಯೇ, ತೈಲ ಖರೀದಿ ವಿಚಾರದಲ್ಲಿ ಆದಾಯದ ಮೇಲೆ ಒತ್ತಡವಿತ್ತು. ಇದೀಗ, ಸರ್ಕಾರವು ಲಸಿಕೆ (Vaccination) ಅಭಿಯಾನವನ್ನು ಸಹ ನಡೆಸುತ್ತಿದೆ.  ಈ ಪರಿಸ್ಥಿತಿಯಲ್ಲಿ, ತೈಲ ಬೆಲೆಗಳನ್ನು ಕಡಿಮೆ ಮಾಡಲಾಗುವ ಬಗ್ಗೆ ಯಾವ ಭರವಸೆಯೂ ಇಲ್ಲ ಎನ್ನಲಾಗಿದೆ. ಇದರ ಪ್ರಕಾರ, ಈ ವರ್ಷದ ಡಿಸೆಂಬರ್ ವೇಳೆಗೆ ಪೆಟ್ರೋಲ್ ಬೆಲೆ (Petrol price) ಪ್ರತಿ ಲೀಟರ್‌ಗೆ 125 ರೂ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. 

ಮತ್ತಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ :
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಏರಿಕೆಯಾಗುತ್ತಿದ್ದು, ಇದು ಭಾರತದಲ್ಲಿನ ಉತ್ಪನ್ನಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಒಎನ್‌ಜಿಸಿ ಮಾಜಿ ಅಧ್ಯಕ್ಷ ಆರ್.ಎಸ್.ಶರ್ಮಾ ಹೇಳಿದ್ದಾರೆ. ಆದ್ದರಿಂದ, ಗ್ರಾಹಕರು (Customers) ಮತ್ತಷ್ಟು ಬೆಲೆ ಏರಿಕೆಗೆ ಸಿದ್ಧರಾಗಿರಬೇಕು.  ಆದರೆ ಈ ಬೆಲೆಗಳು ಎಷ್ಟರ ಮಟ್ಟಿಗೆ ಹೆಚ್ಚಾಗುತ್ತವೆ ಎಂದು ಹೇಳುವುದು ಕಷ್ಟ.

ಇದನ್ನೂ ಓದಿ : Aadhaar Update: ನೀವು 5 ಲಕ್ಷ ರೂ.ಗಿಂತ ಹೆಚ್ಚಿನ ಶಾಪಿಂಗ್ ಮಾಡಲು ಬಯಸಿದರೆ ತಪ್ಪದೇ ಈ ಕೆಲಸ ಮಾಡಿ

ಇರಾನ್ ಮೇಲೆ ಅಮೆರಿಕದ (America) ನಿರ್ಬಂಧದಿಂದಾಗಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.  ಯುಎಸ್ ನಿರ್ಬಂಧಗಳನ್ನು ಸಡಿಲಿಸಿದರೆ, ಇರಾನ್ (Iran) ಪೂರೈಕೆಯನ್ನು ಹೆಚ್ಚಿಸಬಹುದು. ಆದರೆ ಈ ಬಗ್ಗೆ ಉಭಯ ದೇಶಗಳ ಹೇಳಿಕೆಗಳು ಸಂಪೂರ್ಣವಾಗಿ ಭಿನ್ನವಾಗಿವೆ. ಆದ್ದರಿಂದ, ಪೂರೈಕೆ ತಕ್ಷಣವೇ ಹೆಚ್ಚಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಸದ್ಯಕ್ಕೆ ನೀಡುವುದು ಕಷ್ಟ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News