ನವದೆಹಲಿ: ದೇಶದಲ್ಲಿ 17ನೇ ವಂದೇ ಭಾರತ್ ರೈಲು ಶೀಘ್ರದಲ್ಲಿಯೇ ಸಂಚರಿಸಲಿದೆ. ಈ ಸೆಮಿ ಹೈಸ್ಪೀಡ್ ರೈಲು ಹೌರಾದಿಂದ ಪುರಿ ನಡುವೆ ಓಡಲಿದ್ದು, ಮೇ 15ರಂದು ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೌರಾ-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಸದ್ಯಕ್ಕೆ ಈ ರೈಲು ಎಲ್ಲಿ ನಿಲುಗಡೆಯಾಗಲಿದೆ, ಸಮಯ ಎಷ್ಟು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.


COMMERCIAL BREAK
SCROLL TO CONTINUE READING

ಇದು ಒಡಿಶಾಗೆ ವಂದೇ ಭಾರತ್ ರೈಲಿನ ಮೊದಲ ಉಡುಗೊರೆಯಾಗಿದ್ದರೆ, ಬಂಗಾಳಕ್ಕೆ 2ನೇಯದು. ಈ ಹಿಂದೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪರೀಕ್ಷೆಯನ್ನೂ ನಡೆಸಲಾಗಿತ್ತು. ನಂತರ ಈ ರೈಲು ಖರಗ್‌ಪುರ, ಬಾಲಸೋರ್, ಭದ್ರಕ್, ಜಾಜ್‌ಪುರ, ಕಿಯೋಂಜಾರ್ ರಸ್ತೆ, ಕಟಕ್, ಭುವನೇಶ್ವರ ಮತ್ತು ಖುರ್ದಾದಲ್ಲಿ ತಲಾ 2 ನಿಮಿಷಗಳ ಕಾಲ ನಿಲುಗಡೆಯಾಗಿತ್ತು.


ಇದನ್ನೂ ಓದಿ: ಇಮ್ರಾನ್ ಖಾನ್ ಬಂಧನ: ಅಲ್ - ಖಾದಿರ್ ಟ್ರಸ್ಟ್ ಪ್ರಕರಣ ನಡೆದು ಬಂದ ಹಾದಿ


6 ಗಂಟೆಗಳಲ್ಲಿ 520 ಕಿಮೀ


ಹೌರಾ ಮತ್ತು ಪುರಿ ನಡುವೆ ಚಲಿಸುವ ಈ 17ನೇ ವಂದೇ ಭಾರತ್ ಎಕ್ಸ್‌ಪ್ರೆಸ್ 6 ಗಂಟೆಗಳಲ್ಲಿ 520 ಕಿಮೀ ದೂರವನ್ನು ಕ್ರಮಿಸುತ್ತದೆ. ವಂದೇ ಭಾರತ್ ರೈಲಿನ ಪ್ರಾಯೋಗಿಕ ಓಡಾಟ ಏಪ್ರಿಲ್ 28 ಮತ್ತು 30ರಂದು ನಡೆಯಿತು. ಆ ಸಮಯದಲ್ಲಿ ಈ ರೈಲು ಬಂಗಾಳದ ಹೌರಾ ನಿಲ್ದಾಣದಿಂದ ಬೆಳಗ್ಗೆ 6.10ಕ್ಕೆ ಪ್ರಾರಂಭವಾಗಿ ನಂತರದ 6 ಗಂಟೆಯೊಳಗೆ ಪುರಿ ತಲುಪಿತು.


ರೈಲಿನ ಸಮಯ?


ದೇಶದ 17ನೇ ವಂದೇ ಭಾರತ್ ರೈಲು (ಹೌರಾದಿಂದ ಪುರಿ) ಗಂಟೆಗೆ 130 ಕಿಮೀ ವೇಗದಲ್ಲಿ ಹಳಿಗಳ ಮೇಲೆ ಚಲಿಸುತ್ತದೆ. ವರದಿಗಳ ಪ್ರಕಾರ, ಈ ರೈಲು ಹೌರಾದಿಂದ ಪುರಿಗೆ ಬೆಳಗ್ಗೆ 6.10ಕ್ಕೆ ಹೊರಡಲಿದೆ. ಇದು ಬೆಳಗ್ಗೆ 7.38ಕ್ಕೆ ಖರಗ್‌ಪುರ, 9.45ಕ್ಕೆ ಭದ್ರಕ್, 10.25ಕ್ಕೆ ಜಾಜ್‌ಪುರ್ ಕೆಂಡುಜಾರ್ ರಸ್ತೆ, 11ಕ್ಕೆ ಕಟಕ್, 11.25ಕ್ಕೆ ಭುವನೇಶ್ವರ, 11.45ಕ್ಕೆ ಖುರ್ದಾ ರಸ್ತೆ ಮತ್ತು 12.35ಕ್ಕೆ ಪುರಿ ತಲುಪಲಿದೆ. ಇದರ ನಂತರ ಈ ರೈಲು 1.50ಕ್ಕೆ ಪುರಿಯಿಂದ ಹೌರಾಕ್ಕೆ ಹೊರಟು ಬೆಳಗ್ಗೆ 8.30ಕ್ಕೆ ತಲುಪಲಿದೆ.


ಇದನ್ನೂ ಓದಿ: RPC Singh Joins BJP: ಕೇಂದ್ರ ಮಾಜಿ ಕೇಂದ್ರ ಸಚಿವ ಆರ್ಸಿಪಿ ಸಿಂಗ್ ಬಿಜೆಪಿಗೆ ಸೇರ್ಪಡೆ


ಕಳೆದ ತಿಂಗಳು ತಿರುವನಂತಪುರ ರೈಲು ನಿಲ್ದಾಣದಿಂದ ಕೇರಳದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಈ ರೈಲು ಕಾಸರಗೋಡಿನಿಂದ ಆರಂಭಗೊಂಡು 7 ಗಂಟೆ 50 ನಿಮಿಷಗಳಲ್ಲಿ ತಿರುವನಂತಪುರಂ ತಲುಪುತ್ತದೆ. ರೈಲು ಕೊಲ್ಲಂ, ಕೊಟ್ಟಾಯಂ, ತ್ರಿಶ್ಶೂರ್, ಶೋರನೂರು, ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ನಿಂತು ಕಾಸರಗೋಡಿನಲ್ಲಿ ಕೊನೆಗೊಳ್ಳುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.