SC On Maharashtra Politics: ಆಡಳಿತಾರೂಢ ಶಿಂಧೆ ಸರ್ಕಾರಕ್ಕೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಸುಪ್ರೀಂ

SC On Maha Political Crisis: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಕುರಿತು ಇಂದು ಸುಪ್ರೀಂ ಕೋರ್ಟ್ ತನ್ನ ತೀರ್ಪು ಪ್ರಕಟಿಸಿದೆ. ಶಿಂಧೆ ಬಣದ 16 ಶಾಸಕರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿಯ ಕುರಿತು ಇಂದು ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿದೆ    

Written by - Nitin Tabib | Last Updated : May 11, 2023, 01:15 PM IST
  • ಪ್ರಜಾಪ್ರಭುತ್ವದ ಪ್ರಕಾರ ಪಕ್ಷದಿಂದ ವಿಪ್ ಅನ್ನು ಬೇರ್ಪಡಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
  • ಪಕ್ಷ ಸಾರ್ವಜನಿಕರಿಂದ ಮಾತಯಾಚಿಸುತ್ತದೆ.
  • ಆದರೆ ವಿಪ್ ಯಾರೆಂದು ಶಾಸಕರು ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ.
SC On Maharashtra Politics: ಆಡಳಿತಾರೂಢ ಶಿಂಧೆ ಸರ್ಕಾರಕ್ಕೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಸುಪ್ರೀಂ title=
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು

Supreme Court On Maharashtra Political Crisis: ಸುದೀರ್ಘ ನಿರೀಕ್ಷೆಯ ಬಳಿಕ ಇಂದು ಸರ್ವೋಚ್ಛ ನ್ಯಾಯಾಲಯ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ತೀರ್ಪು ಪ್ರಕಟಿಸಿದೆ. ಸುಪ್ರೀಂ ಪ್ರಕಟಿಸಿರುವ ಈ ತೀರ್ಪಿನ ಬಳಿಕ ಶಿಂಧೆ ಬಣಕ್ಕೆ ಭಾರಿ ನೆಮ್ಮದಿ ಸಿಕ್ಕಂತಾಗಿದೆ. ಈ ಕುರಿತು ತನ್ನ ತೀರ್ಪಿನಲ್ಲಿ ಹೇಳಿರುವ ಸುಪ್ರೀಂ ಶಾಸಕರ ಅನರ್ಹತೆಯ ಬಗ್ಗೆ ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಇದಕ್ಕಾಗಿ ಶೀಘ್ರವೇ ತೀರ್ಮಾನ ಕೈಗೊಳ್ಳುವಂತೆ ಸ್ಪೀಕರ್‌ಗೆ ಆದೇಶಿಸಲಾಗಿದೆ. ಉದ್ಧವ್ ಠಾಕ್ರೆ ವೋಟ್ ಆಫ್ ಕಾನ್ಫಿಡೆನ್ಸ್ ಎದುರಿಸಲಿಲ್ಲ, ಹೀಗಾಗಿ ಅವರ ಮರು ಆಯ್ಕೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಜಾಪ್ರಭುತ್ವದ ಪ್ರಕಾರ ಪಕ್ಷದಿಂದ ವಿಪ್ ಅನ್ನು ಬೇರ್ಪಡಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪಕ್ಷ ಸಾರ್ವಜನಿಕರಿಂದ ಮಾತಯಾಚಿಸುತ್ತದೆ. ಆದರೆ ವಿಪ್ ಯಾರೆಂದು ಶಾಸಕರು ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ. ಪಕ್ಷದ ಶಾಸಕರ ಸಭೆಯಲ್ಲಿ ಉದ್ಧವ್ ಠಾಕ್ರೆ ಅವರನ್ನು ನಾಯಕ ಎಂದು ಪರಿಗಣಿಸಲಾಗಿತ್ತು. ಜುಲೈ 3 ರಂದು ಸ್ಪೀಕರ್ ಶಿವಸೇನೆಯ ಹೊಸ ವಿಪ್ ಅನ್ನು ಅನುಮೋದಿಸಿದ್ದಾರೆ. ಈ ರೀತಿಯಲ್ಲಿ ಇಬ್ಬರು ನಾಯಕರು ಮತ್ತು ಇದೀಗ ಇಬ್ಬರು ನಾಯಕರು ವಿಪ್ ಆಗಿದ್ದಾರೆ. ಹೀಗಾಗಿ ಸಭಾಧ್ಯಕ್ಷರು ಸ್ವತಂತ್ರ ತನಿಖೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿತ್ತು. ಪಕ್ಷದಿಂದ ನೇಮಕವಾಗಿರುವ ಗೋಗವಾಲೆ ಅವರನ್ನು ವಿಪ್ ಎಂದು ಪರಿಗಣಿಸಿದ್ದು ತಪ್ಪು. ಇದರೊಂದಿಗೆ ಇಡೀ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಕಳುಹಿಸಲಾಯಿತು.

ರಾಜ್ಯಪಾಲರ ಬಗ್ಗೆ ಸುಪ್ರೀಂ ಹೇಳಿದ್ದೇನು?
ರಾಜ್ಯಪಾಲರು ಸಂವಿಧಾನ ನೀಡದ ಅಧಿಕಾರವನ್ನು ಮಾಡಬಾರದು. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಮುಂದೂಡಲು ಸರ್ಕಾರ ಮತ್ತು ಸ್ಪೀಕರ್ ಪ್ರಯತ್ನಿಸಿದರೆ, ಆಗ ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಈ ವಿಚಾರವಾಗಿ ಶಾಸಕರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಎಂವಿಎ ಸರ್ಕಾರವನ್ನು ಕಿತ್ತೊಗೆಯುವುದಾಗಿ ಹೇಳಿಲ್ಲ. ಅವರ ಪಕ್ಷದ ನಾಯಕತ್ವದ ಬಗ್ಗೆ ಮಾತ್ರ ಪ್ರಶ್ನೆಗಳನ್ನು ಎಟ್ಟಿದ್ದಾರೆ. ಯಾವುದೇ ಪಕ್ಷದಲ್ಲಿನ ಅತೃಪ್ತಿಯು ಫ್ಲೋರ್ ಟೆಸ್ಟ್ ಆಧಾರವಾಗಬಾರದು ಎಂದು ನ್ಯಾಯಾಲಯ ಹೇಳಿದೆ. ರಾಜ್ಯಪಾಲರಿಗೆ ಯಾವುದೇ ಪ್ರಸ್ತಾವನೆ ಬಂದಿದ್ದರೂ ಸ್ಪಷ್ಟವಾಗಿಲ್ಲ. ಭಿನ್ನಮತೀಯ ಶಾಸಕರು ಹೊಸ ಪಕ್ಷ ಕಟ್ಟುತ್ತಿದ್ದಾರೋ ಅಥವಾ ಎಲ್ಲೋ ವಿಲೀನವಾಗುತ್ತಿದ್ದಾರೋ ಗೊತ್ತಿಲ್ಲ.

ಇದನ್ನೂ ಓದಿ-Supreme Court: ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೇಕೆ ಸಿಗುತ್ತಿಲ್ಲ ಚಿಕನ್-ಮಟನ್?: ಸುಪ್ರೀಂ ಪ್ರಶ್ನೆ

'ಅನರ್ಹತೆ ಕುರಿತು ನಿರ್ಧಾರ ಕೈಗೊಳ್ಳುವುದಿಲ್ಲ'
ಇದೆ ಕಾರಣದಿಂದ ತಾನು ಅನರ್ಹತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ವಿಚಾರದಲ್ಲಿ ಶೀಘ್ರ ತೀರ್ಮಾನ ಕೈಗೊಳ್ಳುವಂತೆ ಸ್ಪೀಕರ್‌ಗೆ ಆದೇಶಿಸಲಾಗಿದೆ. ಅನರ್ಹತೆಯ ಕ್ರಮವನ್ನು ತಪ್ಪಿಸಲು ಪಕ್ಷದಲ್ಲಿನ ವಿಭಜನೆಯು ಆಧಾರವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಉದ್ಧವ್ ಅವರನ್ನು ಮತ್ತೆ ಪುನರಾಯ್ಕೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ-Cyclone Mocha: ಭಾರಿ ಅನಾಹುತಕ್ಕೆ ಕಾರಣವಾಗಲಿದೆ ಮೋಚಾ ಚಂಡಮಾರುತ! ಅಲರ್ಟ್ ಜಾರಿಗೊಳಿಸಿದ ಹವಾಮಾನ ಇಲಾಖೆ

ವಾಸ್ತವದಲ್ಲಿ ಕಳೆದ ವರ್ಷ ಏಕನಾಥ್ ಶಿಂಧೆ ಬಣದ ಬಂಡಾಯದ ನಂತರ, ಶಿವಸೇನೆ ಎರಡು ಬಣಗಳಾಗಿ ವಿಭಜನೆಯಾಯಿತು. ಇದಾದ ಬಳಿಕ ನಡೆದ ಬೆಳವಣಿಗೆಗಳಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಈಡಿದ್ದರು, ನಂತರ ಅಂದಿನ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಏಕನಾಥ್ ಶಿಂಧೆ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. 16 ಶಾಸಕರ ಸದಸ್ಯತ್ವದ ಸಿಂಧುತ್ವವನ್ನು ಉದ್ಧವ್ ಠಾಕ್ರೆ ಬಣ ಪ್ರಶ್ನಿಸಿತ್ತು ಮತ್ತು ಇಂದು ಸುಪ್ರೀಂ ನಿರ್ಧಾರ ಹೊರಬಿದ್ದಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News