ನವದೆಹಲಿ : ನಿಮ್ಮ ಯಾವುದೇ ಎಲ್‌ಐಸಿ ಪಾಲಿಸಿ ಲ್ಯಾಪ್ಸ್  ಆಗಿದ್ದರೆ, ಅಕ್ಟೋಬರ್ 22 ರವರೆಗೆ ನಿಮಗೆ ಸುವರ್ಣಾವಕಾಶವಿದೆ. ಭಾರತೀಯ ಜೀವ ವಿಮಾ ನಿಗಮವು (LIC) ಆಗಸ್ಟ್ 23 ರಿಂದ ವಿಶೇಷ ರಿವೈವಲ್ ಅಭಿಯಾನವನ್ನು (lic revival campaign) ಆರಂಭಿಸಿದೆ. ಇದರ ಅಡಿಯಲ್ಲಿ, ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು 23 ಆಗಸ್ಟ್ ನಿಂದ 22 ಅಕ್ಟೋಬರ್ ನಡುವೆ ಯಾವಾಗ ಬೇಕಾದರೂ ಮತ್ತೆ ಆರಂಭಿಸಬಹುದು. ಅದರ ಸಂಪೂರ್ಣ ಪ್ರಕ್ರಿಯೆ ಹೀಗಿದೆ. 


COMMERCIAL BREAK
SCROLL TO CONTINUE READING

ಒಟ್ಟು ಪ್ರೀಮಿಯಂನಲ್ಲಿ ರಿಯಾಯಿತಿ :
ವಿಶೇಷ ರಿವೈವಲ್ ಅಭಿಯಾನದ  (lic revival campaign) ಅಡಿಯಲ್ಲಿ, ಒಟ್ಟು ಪ್ರೀಮಿಯಂನಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಎಲ್ಐಸಿ (LIC) ಮಾಹಿತಿಯನ್ನು ನೀಡಿದೆ. ಆದರೆ ಯಾವುದೇ ವೈದ್ಯಕೀಯ ಅಗತ್ಯತೆಗಳ ಮೇಲೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ. ಇದರಲ್ಲಿ, ಮ್ಯಾಕ್ರೋ ವಿಮೆ ಮತ್ತು ಆರೋಗ್ಯ ಎರಡರಲ್ಲೂ ವಿಳಂಬ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಈ ವಿಶೇಷ  ಅಭಿಯಾನದ ಅಡಿಯಲ್ಲಿ,  5 ವರ್ಷಗಳಿಗಿಂತ ಕಟ್ಟದೆ ಉಳಿಸಿಕೊಂಡಿರುವ ವಿಮೆಯನ್ನು ಮತ್ತೆ ಪ್ರಾರಂಭಿಸಬಹುದು. ಆದರೆ, ಟರ್ಮ್ ಇನ್ಶೂರೆನ್ಸ್ (Term insurance) ಮತ್ತು ಮಲ್ಟಿಪಲ್ ರಿಸ್ಕ್ ಪಾಲಿಸಿಗಳ ಮೇಲೆ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. ಇದಕ್ಕಾಗಿ ನೀವು ಸಂಪೂರ್ಣ ಶುಲ್ಕವನ್ನು ಪಾವತಿಸಬೇಕು.


ಇದನ್ನೂ ಓದಿ : Bank Holidays: ಈ ವಾರ ಸತತ 4 ದಿನಗಳವರೆಗೆ ಬ್ಯಾಂಕ್‌ಗೆ ರಜೆ, ಇಲ್ಲಿದೆ ಫುಲ್ ಲಿಸ್ಟ್


ಸಿಗಲಿದೆ 30% ವರೆಗೆ ರಿಯಾಯಿತಿ :
1 ಲಕ್ಷ ವಾರ್ಷಿಕ ಪ್ರೀಮಿಯಂ ಹೊಂದಿರುವ ವಿಮೆಯ ಮೇಲೆ 20 ಪ್ರತಿಶತದಷ್ಟು ರಿಯಾಯಿತಿ ಅಥವಾ ಗರಿಷ್ಠ 2 ಸಾವಿರ ರೂಪಾಯಿಗಳ ರಿಯಾಯಿತಿ ನೀಡಲಾಗುತ್ತದೆ. ಪಾಲಿಸಿಯ (Policy) ವಾರ್ಷಿಕ ಪ್ರೀಮಿಯಂ 1 ಲಕ್ಷದಿಂದ 3 ಲಕ್ಷದವರೆಗಿದ್ದರೆ ಅದರ ಮೇಲೆ 25% ರಿಯಾಯಿತಿ ಅಥವಾ ಗರಿಷ್ಠ 2,500 ರೂ. ವರೆಗೆ ರಿಯಾಯಿತಿ ಸಿಗುತ್ತದೆ. ಇನ್ನು ಪಾಲಿಸಿ ಪ್ರೀಮಿಯಂ 3 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿದ್ದರೆ,  ಪಾಲಿಸಿ ಮೇಲೆ 30% ಅಥವಾ ಗರಿಷ್ಠ ರೂ. 3 ಸಾವಿರ ರಿಯಾಯಿತಿ ಲಭ್ಯವಿರುತ್ತದೆ.


ಅವಧಿ ಪೂರ್ಣಗೊಳಿಸುವುದು ಕಡ್ಡಾಯ :
ಯಾವ ಪಾಲಿಸಿ ಅವಧಿಯನ್ನು ಪೂರೈಸುತ್ತದೆಯೋ  ಮತ್ತು ಪ್ರೀಮಿಯಂ ಪಾವತಿ ನಿಯಮಗಳನ್ನು ಪೂರೈಸುತ್ತದೆಯೋ ಆ ವಿಮಾ ಯೋಜನೆಗಳನ್ನು ರಿವೈವಲ್ ಅಭಿಯಾನದ ಅಡಿಯಲ್ಲಿ,  ಸೇರಿಸಲಾಗುವುದು. ಕಾರಣಾಂತರಗಳಿಂದ  ಪ್ರೀಮಿಯಂ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗದ ಗ್ರಾಹಕರಿಗಾಗಿ ಈ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಎಲ್ಐಸಿ ಹೇಳಿದೆ. 


ಇದನ್ನೂ ಓದಿ : UIDAI Update : ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ ಎರಡು ಸೇವೆಗಳನ್ನು ನಿಲ್ಲಿಸಿದ UIDAI : ಬಳಕೆದಾರರಿಗೆ ನೇರವಾದ ಪರಿಣಾಮ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.