ನವದೆಹಲಿ: ಹೊಸ ಹ್ಯುಂಡೈ ಕ್ರೆಟಾ Suvಯ ಆರಂಭಿಕ ಬೆಲೆ 10.84 ಲಕ್ಷ ರೂ. ಇದೆ. ಇದು ದೇಶದಲ್ಲೇ ಅತಿಹೆಚ್ಚು ಮಾರಾಟವಾಗುವ Suvಗಳಲ್ಲಿ ಒಂದಾಗಿದೆ. ಹ್ಯುಂಡೈ ಕ್ರೆಟಾ ಬಹಳಷ್ಟು ಬ್ರಾಂಡ್ ಮೌಲ್ಯವನ್ನು ಹೊಂದಿದೆ. ಹೊಸ ಹುಂಡೈ ಕ್ರೆಟಾ ಜೊತೆಗೆ ದೇಶದಲ್ಲಿ ಬಳಸಿದ ಹ್ಯುಂಡೈ ಕ್ರೆಟಾಕ್ಕೂ ಸಖತ್ ಬೇಡಿಕೆಯಿದೆ. ಹೌದು, ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾಗೆ ಉತ್ತಮ ಬೇಡಿಕೆಯಿದೆ.


COMMERCIAL BREAK
SCROLL TO CONTINUE READING

ಹೊಸ ಕ್ರೆಟಾವನ್ನು ಖರೀದಿಸಲು ನಿಮಗೆ ಬಜೆಟ್ ತೊಂದರೆ ಇದ್ದರೆ ಹಳೆಯ ಕ್ರೆಟಾವನ್ನು ಖರೀದಿಸಬಹುದು. ಇಂದು ನಾವು ಮಾರಾಟಕ್ಕೆ ಲಭ್ಯವಿರುವ ಕೆಲವು ಹಳೆಯ ಕ್ರೆಟಾಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. Cars24 ವೆಬ್‌ಸೈಟ್‌ನಲ್ಲಿ ನಾವು ಗುರುತಿಸಿರುವ ಈ ಕೆಲವು ಬಳಸಿದ Creta SUVಗಳು ಮಾಹಿತಿ ನಿಮಗಾಗಿ ಇಲ್ಲಿದೆ ನೋಡಿ.


ಇದನ್ನೂ ಓದಿ: HDFC ಬಳಿಕ ಈ ದೊಡ್ಡ ಬ್ಯಾಂಕ್‌ಗೆ 2.27 ಕೋಟಿ ರೂ. ದಂಡ ವಿಧಿಸಿದ ಆರ್‌ಬಿ‌ಐ, ನಿಮ್ಮ ಖಾತೆಯೂ ಇದೆಯೇ?


2016ರ ಹ್ಯುಂಡೈ ಕ್ರೆಟಾ 1.6Sನ ಬೆಲೆ 7,95,000 ರೂ.ಇದೆ. ಇದು Second Owner ಕಾರು ಆಗಿದ್ದು, ಕೇವಲ 19,798 ಕಿಮೀ ಓಡಿದೆ. ದೆಹಲಿಯಲ್ಲಿ ಮಾರಾಟಕ್ಕೆ ಲಭ್ಯವಿರುವ ಈ ಪೆಟ್ರೋಲ್ ಎಂಜಿನ್ ಕಾರಿನ ನಂಬರ್ ಪ್ಲೇಟ್ DL-1C ಯಿಂದ ಪ್ರಾರಂಭವಾಗುತ್ತದೆ.


2015ರ ಹ್ಯುಂಡೈ ಕ್ರೆಟಾ 1.6Sನ ಬೆಲೆ 8,22,000 ರೂ. ಇದೆ. ಇದು 1st Owner ಕಾರು ಆಗಿದ್ದು, ಕೇವಲ 27,923 ಕಿಮೀ ಓಡಿದೆ. ದೆಹಲಿಯಲ್ಲಿ ಮಾರಾಟಕ್ಕೆ ಲಭ್ಯವಿರುವ ಈ ಪೆಟ್ರೋಲ್ ಎಂಜಿನ್ ಕಾರಿನ ನಂಬರ್ ಪ್ಲೇಟ್ ಯುಪಿ-32 ರಿಂದ ಪ್ರಾರಂಭವಾಗುತ್ತದೆ.


ಇನ್ನು 2018ರ ಹ್ಯುಂಡೈ ಕ್ರೆಟಾ 1.6 E + VTVTನ ಬೆಲೆ 8,71,000 ರೂ. ಇದೆ. ಇದು 1st Owner ಕಾರು ಆಗಿದ್ದು, 64,849 ಕಿಮೀ ಓಡಿದೆ. ದೆಹಲಿಯಲ್ಲಿ ಮಾರಾಟಕ್ಕೆ ಲಭ್ಯವಿರುವ ಈ ಪೆಟ್ರೋಲ್ ಎಂಜಿನ್ ಕಾರಿನ ನಂಬರ್ ಪ್ಲೇಟ್ DL-5C ಯಿಂದ ಪ್ರಾರಂಭವಾಗುತ್ತದೆ.


ಇದನ್ನೂ ಓದಿ: Ugadi 2023 Gold Price : ಯುಗಾದಿಗೆ 60000 ಗಡಿ ದಾಟಿದ ಚಿನ್ನ, ಹೊಸ ದಾಖಲೆ.. 10 ಗ್ರಾಂ ಬೆಲೆ ಕೇಳಿದರೆ ಬೆಚ್ಚಿ ಬೀಳುತ್ತೀರಿ!


ಮತ್ತೊಂದು 2018ರ ಹ್ಯುಂಡೈ ಕ್ರೆಟಾ 1.6 E + VTVTನ ಬೆಲೆ 7,90,000  ರೂ. ಇದೆ. ಇದು 1st Owner ಕಾರು ಆಗಿದ್ದು, ಒಟ್ಟು 80,985 ಕಿ.ಮೀ ಕ್ರಮಿಸಿದೆ. ಇದರಲ್ಲಿ ಪೆಟ್ರೋಲ್ ಎಂಜಿನ್ ಕೂಡ ಇದೆ. ಕಾರಿನ ಸಂಖ್ಯೆ ಯುಪಿ-14ರಿಂದ ಪ್ರಾರಂಭವಾಗುತ್ತದೆ. ಇದು ದೆಹಲಿಯಲ್ಲಿ ಮಾರಾಟಕ್ಕೆ ಲಭ್ಯವಿದೆ. ನೀವು ಈ 2nd hand ಕಾರುಗಳನ್ನು ಖರೀದಿಸಬಯಸಿದರೆ Cars24 ನಂತಹ ಹಲವಾರು ವೆಬ್‌ಸೈಟ್‌ಗಳಿವೆ. ನೀವು ಸೂಕ್ತವಾಗಿ ಪರಿಶೀಲನೆ ನಡೆಸಿದ ಬಳಿಕ ನಿಮಗೆ ಯಾವುದು ಇಷ್ಟವೋ ಅದನ್ನು ಖರೀದಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.