PPF Scheme: ಕೇಂದ್ರದಿಂದ ಇನ್ನೇನು 10 ದಿನಗಳಲ್ಲಿ ಸಿಗಲಿದೆ ಬೊಂಬಾಟ್ ಗಿಫ್ಟ್: ಆದ್ರೆ ಇದರಲ್ಲಿ ಹೂಡಿಕೆ ಮಾಡಿರಬೇಕು ಅಷ್ಟೇ!

PPF Scheme Latest Update: ಪಿಪಿಎಫ್ ಖಾತೆ ಹೊಂದಿರುವ ಜನರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮಾರ್ಚ್ 31 ಒಳಗೆ ಪಿಪಿಎಫ್ ಖಾತೆ ಹೊಂದಿರುವ ಜನರಿಗೆ ದೊಡ್ಡ ಮೊತ್ತದ ಹಣ ಸಿಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯನ್ನು ಮಾಡಿದೆ.

Written by - Bhavishya Shetty | Last Updated : Mar 20, 2023, 09:25 PM IST
    • ಪಿಪಿಎಫ್ ಖಾತೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.
    • ಪಬ್ಲಿಕ್ ಪ್ರಾವಿಡೆಂಟ್ ಫಂಡ್‌’ನಲ್ಲಿ ಹಣ ಹೂಡುವವರು ಈಗ ಸರ್ಕಾರದಿಂದ ದೊಡ್ಡ ಲಾಭವನ್ನು ಪಡೆಯುತ್ತಾರೆ.
    • ಈ ಹಣ ಮಾರ್ಚ್ 31 ರಂದು ನಿಮ್ಮ ಖಾತೆಗೆ ಬರಲಿದೆ
PPF Scheme: ಕೇಂದ್ರದಿಂದ ಇನ್ನೇನು 10 ದಿನಗಳಲ್ಲಿ ಸಿಗಲಿದೆ ಬೊಂಬಾಟ್ ಗಿಫ್ಟ್: ಆದ್ರೆ ಇದರಲ್ಲಿ ಹೂಡಿಕೆ ಮಾಡಿರಬೇಕು ಅಷ್ಟೇ!  title=
PPF Account

PPF Scheme Latest Update: ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಜನಸಾಮಾನ್ಯರಿಗೆ ಭಾರೀ ಉಡುಗೊರೆಗಳನ್ನು ನೀಡುತ್ತಿದೆ. ಇದೀಗ ಪಿಪಿಎಫ್ ಖಾತೆ ಹೊಂದಿರುವ ಜನರಿಗೂ ಬೊಂಬಾಟ್ ಗಿಫ್ಟ್ ನೀಡಲು ಮುಂದಾಗಿದೆ. ಈ ಬಗ್ಗೆ ಅಪ್ಡೇಟ್ ನೀಡಲಿದ್ದೇವೆ.

ಪಿಪಿಎಫ್ ಖಾತೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್‌’ನಲ್ಲಿ ಹಣ ಹೂಡುವವರು ಈಗ ಸರ್ಕಾರದಿಂದ ದೊಡ್ಡ ಲಾಭವನ್ನು ಪಡೆಯುತ್ತಾರೆ. ಈ ಹಣ ಮಾರ್ಚ್ 31 ರಂದು ನಿಮ್ಮ ಖಾತೆಗೆ ಬರಲಿದೆ.

ಇದನ್ನೂ ಓದಿ: MS Dhoni : ಕ್ಯಾಪ್ಟನ್ ಕೂಲ್ ಧೋನಿಗೆ ಈ ಪಾನಕ ಅಂದ್ರೆ ತುಂಬಾ ಇಷ್ಟ: ಪ್ರ್ಯಾಕ್ಟೀಸ್ ಟೈಂನಲ್ಲೂ ಹೇಗೆ ಕುಡಿಯುತ್ತಿದ್ದಾರೆ ನೋಡಿ

ಈ ಸಮಯದಲ್ಲಿ, ನೀವು ಈ ಯೋಜನೆಯಲ್ಲಿ ಶೇಕಡಾ 7.1 ರ ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯುತ್ತೀರಿ. ವಿಶೇಷವೆಂದರೆ ಇದರಲ್ಲಿ ಚಕ್ರಬಡ್ಡಿಯ ಲಾಭ ಕೂಡ ಸಿಗುತ್ತದೆ.

ಬಡ್ಡಿ ದರಗಳನ್ನು ಹಣಕಾಸು ಸಚಿವಾಲಯವು ಪ್ರತಿ ವರ್ಷ ನಿಗದಿಪಡಿಸುತ್ತದೆ, ಇದನ್ನು ಮಾರ್ಚ್ 31 ರಂದು ನೀಡುತ್ತದೆ. ಅಂದರೆ, ಈ ಬಾರಿ ಮಾರ್ಚ್ 31 ರಂದು ಸರ್ಕಾರದಿಂದ ನಿಮ್ಮ ಖಾತೆಗೆ ಹಣ ಬರಲಿದೆ. ಬಡ್ಡಿಯನ್ನು ಪ್ರತಿ ತಿಂಗಳ 5 ನೇ ತಾರೀಖಿನಂದು ಲೆಕ್ಕಹಾಕಲಾಗುತ್ತದೆ.

ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿಯು 500 ರೂಪಾಯಿಗಳಿಂದ ಪ್ರಾರಂಭಿಸಬಹುದು. ಆರ್ಥಿಕ ವರ್ಷದಲ್ಲಿ, ನೀವು ಗರಿಷ್ಠ 1.5 ಲಕ್ಷ ರೂ.ವರೆಗೂ ಸಹ ಇನ್ವೆಸ್ಟ್ ಮಾಡಬಹುದು. ಇಷ್ಟೇ ಅಲ್ಲ, PPF ನಲ್ಲಿ ನೀವು ನಿರ್ದಿಷ್ಟ ಅವಧಿಯ ನಂತರ ಸಾಲ ಮತ್ತು ಭಾಗಶಃ ಹಿಂಪಡೆಯುವ ಸೌಲಭ್ಯದ ಪ್ರಯೋಜನವನ್ನು ಸಹ ಪಡೆಯುತ್ತೀರಿ.

ನೀವು PPF ನಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುತ್ತೀರಿ. ಇದರಲ್ಲಿ ಪಡೆದ ಬಡ್ಡಿ ಮತ್ತು ಮೆಚ್ಯೂರಿಟಿ ಮುಗಿದ ಮೇಲೆ ಸಿಗುವ ಹಣ ಮೂರೂ ಸಂಪೂರ್ಣ ತೆರಿಗೆ ಮುಕ್ತವಾಗಿರುತ್ತದೆ.

ಇದನ್ನೂ ಓದಿ: Video Viral: ಮದುವೆಯಾಗಿದ್ರೂ ಸಹ ಏರ್ಪೋರ್ಟ್’ನಲ್ಲಿ ಅಭಿಮಾನಿಗೆ ಲವ್ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ…! ವಿಡಿಯೋ ನೋಡಿ

PPF ನಲ್ಲಿನ ಹೂಡಿಕೆಯನ್ನು 15 ವರ್ಷಗಳವರೆಗೆ ಮಾಡಬೇಕು, ಆದರೆ ಹಣವನ್ನು ಹೂಡಿಕೆ ಮಾಡಿದ್ದರೆ, ನೀವು ಅದನ್ನು 6 ವರ್ಷಗಳ ನಂತರ ಕೂಡ ಹಿಂಪಡೆಯಬಹುದು. ಪಿಪಿಎಫ್ ಖಾತೆಯಲ್ಲಿ ಭಾಗಶಃ ಹಿಂಪಡೆಯುವ ಸೌಲಭ್ಯ ಲಭ್ಯವಿದ್ದು, ಹೂಡಿಕೆ ಮಾಡಿದ ಬಳಿಕ 7ನೇ ಹಣಕಾಸು ವರ್ಷದಿಂದ ಇದನ್ನು ಪಡೆಯಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News