ನವದೆಹಲಿ: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ(IBPS) ಯು ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 3,049 ಪ್ರೊಬೇಷನರಿ ಆಫೀಸರ್ / ಮ್ಯಾನೇಜ್ಮೆಂಟ್‌ ಟ್ರೈನಿ ಹುದ್ದೆಗಳು ಹಾಗೂ 1,402 ಸ್ಪೆಷಲಿಸ್ಟ್‌ ಆಫೀಸರ್ ಕೇಡರ್ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಮುಂದಿನ ಅಕ್ಟೋಬರ್‍ನಿಂದ 2024ರ ಮಾರ್ಚ್‍ವರೆಗೆ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ. ಈ ಹುದ್ದೆಗಳಿಗೆ ವಿವಿಧ ಪದವಿ/ಸ್ನಾತಕೋತ್ತರ ಪದವಿ ಪಾಸ್ ಮಾಡಿದವರು ಅರ್ಜಿ ಸಲ್ಲಿಸಬಹುದು.


COMMERCIAL BREAK
SCROLL TO CONTINUE READING

ಆಗಸ್ಟ್ 1 ರಿಂದ 21ರವರೆಗೆ ibps.inನಲ್ಲಿ ಆನ್‍ಲೈನ್ ನೋಂದಣಿ ಲಿಂಕ್ ಲಭ್ಯವಿರುತ್ತದೆ. ಈ ನೇಮಕಾತಿಯಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯುಕೋ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಒಟ್ಟು 4,451ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವ ವರ್ಗವಾರು ಖಾಲಿ ಹುದ್ದೆಗಳ ಮೀಸಲಾತಿಯನ್ನು ಪರಿಶೀಲಿಸಬಹುದಾಗಿದೆ.


ಇದನ್ನೂ ಓದಿ: ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗ ತಡೆಗೆ ಹೀಗೆ ಮಾಡಿ


IBPS PO ಪರೀಕ್ಷೆ ದಿನಾಂಕಗಳು: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2023ರ ಸೆಪ್ಟೆಂಬರ್ 23 ಮತ್ತು 30ರಂದು ಮತ್ತು 1 ಅಕ್ಟೋಬರ್ 2023ರಂದು IBPS PO  ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಪರೀಕ್ಷೆಯ ನಿಖರವಾದ ದಿನಾಂಕವನ್ನು ಐಬಿಪಿಎಸ್ ಪಿಒ ಪ್ರಿಲಿಮ್ಸ್ ಅಡ್ಮಿಟ್ ಕಾರ್ಡ್‍ನಲ್ಲಿ ತಿಳಿಸಲಾಗಿದೆ.


IBPS PO ಅಧಿಸೂಚನೆ ಮತ್ತು ಆನ್‍ಲೈನ್‍ ಅರ್ಜಿ ಲಿಂಕ್: IBPS PO ಅಧಿಸೂಚನೆಯಲ್ಲಿ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳಾದ ಪರೀಕ್ಷಾ ವೇಳಾಪಟ್ಟಿ, ಪರೀಕ್ಷಾ ಮಾದರಿ, ಪಠ್ಯಕ್ರಮ ಮತ್ತು ಅರ್ಜಿ ಭರ್ತಿ ಮಾಡುವ ಮೊದಲು ಅಭ್ಯರ್ಥಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಸೂಚನೆಗಳಿರುತ್ತವೆ.


IBPS PO ಅಧಿಸೂಚನೆ ದಿನಾಂಕ: ಆಗಸ್ಟ್ 1, 2023  


IBPS PO ನೋಂದಣಿ ಪ್ರಾರಂಭ ದಿನಾಂಕ: ಆಗಸ್ಟ್ 1, 2023


IBPS PO ಪ್ರಿಲಿಮ್ಸ್ ಪರೀಕ್ಷೆಯ ದಿನಾಂಕ: ಸೆಪ್ಟೆಂಬರ್/ಅಕ್ಟೋಬರ್ 2023


IBPS PO ಪ್ರಿಲಿಮ್ಸ್ ಪ್ರವೇಶ ಪತ್ರ ದಿನಾಂಕ: ಸೆಪ್ಟೆಂಬರ್ 2023


IBPS PO ಪರೀಕ್ಷಾ ಪೂರ್ವ ತರಬೇತಿಗಾಗಿ ಕಾಲ್ ಲೆಟರ್‍ಗಳ ಡೌನ್‍ಲೋಡ್ ಮಾಡಿಕೊಳ್ಳುವ ದಿನಾಂಕ: ಸೆಪ್ಟೆಂಬರ್ 2023


IBPS PO ಪರೀಕ್ಷಾ ಪೂರ್ವ ತರಬೇತಿಯ ನಿರ್ವಹಣೆ ದಿನಾಂಕ: ಸೆಪ್ಟೆಂಬರ್ 2023


IBPS PO ಪ್ರಿಲಿಮ್ಸ್ ಫಲಿತಾಂಶ ದಿನಾಂಕ: ಅಕ್ಟೋಬರ್ 2023


IBPS PO ಮುಖ್ಯ ಪರೀಕ್ಷೆಯ ದಿನಾಂಕ: ನವೆಂಬರ್ 2023


IBPS PO ಮುಖ್ಯ ಪರೀಕ್ಷೆ ಪ್ರವೇಶ ಪತ್ರ ದಿನಾಂಕ   ಅಕ್ಟೋಬರ್/ ನವೆಂಬರ್ 2023


IBPS PO ಮುಖ್ಯ ಪರೀಕ್ಷೆ ಫಲಿತಾಂಶ ದಿನಾಂಕ: ಡಿಸೆಂಬರ್ 2023


IBPS PO ಸಂದರ್ಶನದ ದಿನಾಂಕ: ಜನವರಿ/ಫೆಬ್ರವರಿ 2024


IBPS PO ಸಂದರ್ಶನ ಪ್ರವೇಶ ಪತ್ರ ದಿನಾಂಕ: ಜನವರಿ/ ಫೆಬ್ರವರಿ 2024


IBPS PO ತಾತ್ಕಾಲಿಕ ಹಂಚಿಕೆ ದಿನಾಂಕ: ಏಪ್ರಿಲ್ 2024


IBPS PO ಅಧಿಸೂಚನೆ ಪರಿಶೀಲಿಸಲು https://www.ibps.in/wp-content/uploads/Detailed_Notification_CRP_PO_XIII.pdf ಲಿಂಕ್ ಮೇಲೆ ಕ್ಲಿಕ್ ಮಾಡಿ


IBPS PO ಆನ್ಲೈನ್ ಅರ್ಜಿ ಲಿಂಕ್ https://ibpsonline.ibps.in/crppo13jun23/ ಮೇಲೆ ಕ್ಲಿಕ್ ಮಾಡಿ


ಇದನ್ನೂ ಓದಿ: ʼನನ್ನ ಹೆಂಡತಿ ಜೊತೆಗೆ ಫೋನ್‌ನಲ್ಲಿ ಮಾತನಾಡಬೇಡʼ ಎಂದಿದ್ದಕ್ಕೆ ಅಣ್ಣನ ಕಥೆ ಮುಗಿಸಿದ ತಮ್ಮ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.