ʼನನ್ನ ಹೆಂಡತಿ ಜೊತೆಗೆ ಫೋನ್‌ನಲ್ಲಿ ಮಾತನಾಡಬೇಡʼ ಎಂದಿದ್ದಕ್ಕೆ ಅಣ್ಣನ ಕಥೆ ಮುಗಿಸಿದ ತಮ್ಮ..!

ಸಂದೀಪ್ ಪತ್ನಿ ಜೊತೆ ಶುಭೋದ್ ಹೆಚ್ಚಾಗಿ ಫೋನ್ ನಲ್ಲಿ ಮಾತನಾಡುತಿದ್ದ. ಈ ನಡುವೆ ತನ್ನ ಹೆಂಡತಿ ಜೊತೆ ಶುಭೋದ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಸಂದೀಪ್ ಶಂಕೆ ವ್ಯಕ್ತಪಡಿಸಿದ್ದ.

Written by - VISHWANATH HARIHARA | Edited by - Krishna N K | Last Updated : Aug 1, 2023, 03:29 PM IST
  • ಅಣ್ಣತಮ್ಮಂದಿರ ಮನಸ್ತಾಪ ಕೊಲೆಯಲ್ಲಿ ಅಂತ್ಯವಾಗಿದೆ.
  • ಪ್ರಕರಣದಲ್ಲಿ ಕೊಲೆಯಾದವನ ಹೆಸರು ಸಂದೀಪ್ ಕುಮಾರ್.
  • ಶೋಭೋದ್ ಮಂಡಲ್ ನಡುವೆ ಫೋನ್ ವಿಚಾರಕ್ಕೆ ಗಲಾಟೆ ನಡೆದಿದೆ.
 ʼನನ್ನ ಹೆಂಡತಿ ಜೊತೆಗೆ ಫೋನ್‌ನಲ್ಲಿ ಮಾತನಾಡಬೇಡʼ ಎಂದಿದ್ದಕ್ಕೆ ಅಣ್ಣನ ಕಥೆ ಮುಗಿಸಿದ ತಮ್ಮ..! title=

ಬೆಂಗಳೂರು : ದೂರುದ ಬಿಹಾರದಿಂದ ಕೂಲಿ ಕೆಲಸಕ್ಕೆ ಬಂದಿದ್ದ ಅಣ್ಣತಮ್ಮಂದಿರ ಮನಸ್ತಾಪ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಕರಣದಲ್ಲಿ ಕೊಲೆಯಾದವನ ಹೆಸರು ಸಂದೀಪ್ ಕುಮಾರ್. ಈತನನ್ನು ಕೊಂದು ಮುಗಿಸಿದವನು ಶುಭೋದ್ ಮಂಡಲ್. ಸೋದರ ಸಂಬಂಧಿಯಾದ ಸಂದೀಪ್ ಕುಮಾರ್ ಹಾಗೂ ಶೋಭೋದ್ ಮಂಡಲ್ ನಡುವೆ ಫೋನ್ ವಿಚಾರಕ್ಕೆ ಗಲಾಟೆ ನಡೆದಿದೆ.

ಸಂದೀಪ್ ಪತ್ನಿ ಜೊತೆಗೆ ಶುಭೋದ್ ಪೋನ್ ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದ. ಹೀಗಾಗಿ  ಸಂದೀಪ್ ನನ್ನ ಹೆಂಡತಿ ಜೊತೆ ಯಾಕೆ ಮಾತನಾಡುತ್ತಿಯಾ ಎಂದು ಪ್ರಶ್ನಿಸಿದ್ದಾನೆ. ಈ ಜಿದ್ದಿಗೆ ಸಂದೀಪ್ ನನ್ನು ಶೋಭೋದ್ ಕೊಲೆ ಮಾಡಿದ್ದಾನೆ. ಕಳೆದ  ಶುಕ್ರವಾರ ತಡರಾತ್ರಿ  ಹತ್ಯೆ ನಡೆದಿದ್ದು, ಸಂದೀಪ್ ಕೆಲಸ ಅರಸಿ ಸಿಲಿಕಾನ್ ಸಿಟಿಗೆ  ಬಂದಿದ್ದ. ಕಳೆದ ಮೂರು ತಿಂಗಳ ಹಿಂದಷ್ಟೇ  ಶುಭೋದ್ ಸಹ ಬೆಂಗಳೂರಿಗೆ ಬಂದಿದ್ದ.

ಇದನ್ನೂ ಓದಿ:  ಸಿಸಿಬಿ ಪೊಲೀಸ್ರ ಮುಂದೆ ಉಗ್ರ ನಜೀರ್ ಕಳ್ಳಾಟ..!

ಈ ವೇಳೆ ಸಂದೀಪ್ ಪತ್ನಿ ಜೊತೆ ಶುಭೋದ್ ಹೆಚ್ಚಾಗಿ ಫೋನ್ ನಲ್ಲಿ ಮಾತನಾಡುತಿದ್ದ. ಈ ನಡುವೆ ತನ್ನ ಹೆಂಡತಿ ಜೊತೆ ಶುಭೋದ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಸಂದೀಪ್ ಶಂಕೆ ವ್ಯಕ್ತಪಡಿಸಿದ್ದ. ಅಂತೆಯೇ ಶುಕ್ರವಾರ ರಾತ್ರಿ ಇಬ್ಬರು ಕುಡಿಯುವಾಗ ಇದೇ ವಿಚಾರಕ್ಕೆ ಜಗಳ ಶುರುವಾಗಿದೆ. ಜಗಳದ ಬಳಿಕ ಮಲಗಿದ್ದ ಸಂದೀಪ್ ಕುಮಾರ್ ಮೇಲೆ ಹಲ್ಲೆ ಮಾಡಿ ಹತ್ಯೆಗೈದು ಶುಭೋದ್ ಮಂಡಲ್ ಪರಾರಿಯಾಗಿದ್ದ. 

ಕೊಲೆಯಾದ 24 ಗಂಟೆ ರೂಂನಲ್ಲೇ ಶವ ಬಿದ್ದಿತ್ತು.‌ ಶನಿವಾರ ರಾತ್ರಿ ಸ್ನೇಹಿತ ಮನೆಗೆ ಬಂದಾಗ ಸಂದೀಪ್ ಶವ  ಪತ್ತೆಯಾಗಿದೆ. ಬಳಿಕ ಚಿಕ್ಕಜಾಲ ಪೊಲೀಸರಿಂದ ತನಿಖೆ ನಡೆಸಿದಾಗ ಕೊಲೆಯ ಅಸಲಿ ಕಹಾನಿ ಬಯಲಾಗಿದೆ. ಸದ್ಯ ನಾಪತ್ತೆಯಾಗಿದ್ದ ಆರೋಪಿ ಶುಭೋದ್ ಮಂಡಲ್ ಬಂಧಿಸಿದ ಪೊಲೀರು ತನಿಖೆ ಮುಂದುವರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News