ITR Filing Alert: ಸೋಮಾರಿತನದಿಂದ, ಹೇಗೆ ಮಾಡಬೇಕು ಎಂಬುದು ಗೊತ್ತಿಲ್ಲದೆ, ನಮಗೆ ಅಷ್ಟೆಲ್ಲಾ ಆದಾಯ ಇಲ್ಲ ಎನ್ನುವ ಕಾರಣಕ್ಕೆ, ಏನೂ ತೊಂದರೆ ಆಗುವುದಿಲ್ಲ ಎಂಬ ಭಂಡತನದಿಂದ ಅಥವಾ ಸರ್ಕಾರ ಮತ್ತೆ ಡೆಡ್ ಲೈನ್ ವಿಸ್ತರಣೆ ಮಾಡುತ್ತೆ ಎಂದು ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ಸ್ (ITR) ಫೈಲ್ ಮಾಡುವುದಿಲ್ಲ. ಇಂಥ ಕೆಟ್ಟ ಪ್ರಾಕ್ಟೀಸ್ ಅನ್ನು ತಪ್ಪಿಸಲು ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ಸ್ (ITR) ಫೈಲ್ ಮಾಡದವರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.


COMMERCIAL BREAK
SCROLL TO CONTINUE READING

ಆದಾಯ ತೆರೆಗೆ ರಿಟರ್ನ್ಸ್ (ITR) ಫೈಲ್ ಮಾಡಲು ಮೊದಲಿಗೆ 2024ರ ಜುಲೈ 31ರ ಗಡುವು ನೀಡಲಾಗಿತ್ತು. ನಂತರ ಅದನ್ನು ಡಿಸಂಬರ್ 31ಕ್ಕೆ ವಿಸ್ತರಣೆ ಮಾಡಲಾಗಿತ್ತು. ಹೆಚ್ಚುವರಿ ಸಮಯಾವಕಾಶ ಕೊಟ್ಟರೂ ಕೆಲವರು ಆದಾಯ ತೆರೆಗೆ ರಿಟರ್ನ್ಸ್ (ITR) ಫೈಲ್ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿಗಧಿತ ಸಮಯಕ್ಕೆ ಸರಿಯಾಗಿ ಆದಾಯ ತೆರೆಗೆ ರಿಟರ್ನ್ಸ್ (ITR) ಫೈಲ್ ಮಾಡದವರಿಗೆ ದಂಡ ವಿಧಿಸಲು ನಿರ್ಧರಿಸಿದೆ.


ಇದನ್ನೂ ಓದಿ- Income Tax Notice: ಎಚ್ಚರ! ಈ ಮಿತಿಗಿಂತ ಹೆಚ್ಚು ಖರ್ಚು ಮಾಡಿದ್ರೂ ಬರುತ್ತೆ 'ಐಟಿ ನೋಟಿಸ್'


ಡಿಸಂಬರ್ 31ಕ್ಕೆ ಆದಾಯ ತೆರೆಗೆ ರಿಟರ್ನ್ಸ್ (ITR) ಫೈಲ್ ಮಾಡದಿದ್ದರೆ ಆದಾಯ ತೆರಿಗೆ ಕಾಯಿದೆ ಸೆಕ್ಷನ್ 139(1) ಪ್ರಕಾರ 5,000 ರೂಪಾಯಿಗಳನ್ನು ವಿಳಂಬ ಶುಲ್ಕ ಕಟ್ಟಬೇಕಾಗಿತ್ತು. ಆದರೀಗ ನಿಗದಿತ ಸಮಯವನ್ನು ಮೀರಿ ಮಾಡುವ ಆದಾಯ ತೆರೆಗೆ ರಿಟರ್ನ್ಸ್ (ITR) ಫೈಲ್ ಗಳನ್ನು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 234F ವ್ಯಾಪ್ತಿಗೆ ಸೇರಿಸಲಾಗಿದೆ. ಇದರಿಂದ ನೀವು ಕಟ್ಟಬೇಕಾಗುವ ದಂಡದ ಪ್ರಮಾಣ ದುಪ್ಪಟ್ಟಾಗಲಿದೆ.


ಒಂದೊಮ್ಮೆ ನಿಮ್ಮ ವಾರ್ಷಿಕ ಆದಾಯ 5 ಲಕ್ಷ ರೂಪಾಯಿಗಳಿಂಗಿಂತಲೂ ಹೆಚ್ಚಾಗಿದ್ದು ನೀವು ತಡವಾಗಿ ಆದಾಯ ತೆರೆಗೆ ರಿಟರ್ನ್ಸ್ (ITR) ಫೈಲ್ ಮಾಡಿದರೆ ಆಗ 10,000 ರೂಪಾಯಿಗಳ ದಂಡ ಕಟ್ಟಬೇಕಾಗುತ್ತದೆ. ಆದುದರಿಂದ ತಕ್ಷಣವೇ ಆದಾಯ ತೆರೆಗೆ ರಿಟರ್ನ್ಸ್ (ITR) ಫೈಲ್ ಮಾಡಿ. ಐ‌ಟಿ‌ಆರ್ ಫೈಲ್ ಮಾಡಲು ಇಲ್ಲಿದೆ ಸುಲಭ ಪ್ರಕ್ರಿಯೆ... 
 
ಇದನ್ನೂ ಓದಿ- Income Tax ಸ್ಲ್ಯಾಬ್‌ನಲ್ಲಿ ಬರದವರೂ ಐ‌ಟಿ‌ಆರ್ ಫೈಲ್ ಮಾಡಬಹುದು, ಸಿಗುತ್ತೆ ಈ 10 ಪ್ರಯೋಜನ


ಐ‌ಟಿ‌ಆರ್ ಫೈಲ್ ಮಾಡಲು ಹಂತ-ಹಂತದ ಪ್ರಕ್ರಿಯೆ:- 
ಹಂತ-1: ಮೊದಲು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ಗೆ ಹೋಗಿ.
ಹಂತ-2: ನಿಮ್ಮ ಪ್ಯಾನ್ ನಂಬರ್ ಬಳಸಿ ಲಾಗಿನ್ ಆಗಿ.
ಹಂತ-3: ಆದಾಯದ ಮೂಲಗಳಿಗೆ ಅನುಗುಣಕ್ಕೆ ತಕ್ಕಂಥ ಐಟಿಆರ್ ಫಾರ್ಮ್ ಆಯ್ಕೆ ಮಾಡಿ. 
ಹಂತ-4: ಮೌಲ್ಯಮಾಪನ 2024-25 ಎಂಬುದನ್ನು ಆಯ್ಕೆ ಮಾಡಿ. 
ಹಂತ-5: ಆದಾಯ ತೆರಿಗೆ ವಿನಾಯಿತಿ ಮತ್ತು ತೆರಿಗೆ ಹೊಣೆಗಾರಿಕೆ ಭರ್ತಿ ಮಾಡಿ.
ಹಂತ-6: ಆಧಾರ್ OTP, ನೆಟ್ ಬ್ಯಾಂಕಿಂಗ್ ಅಥವಾ ಭೌತಿಕ ಪರಿಶೀಲನೆ ನಂತರ ರಿಟರ್ನ್ ಫೈಲ್ ಮಾಡಿ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.