Income Tax Notice: ವಿತ್ತೀಯ ವರ್ಷದಲ್ಲಿ ಆದಾಯಕ್ಕೆ ತೆರಿಗೆ ಪಾವತಿಸುವಂತೆ ಮಿತಿಗಿಂತ ಹೆಚ್ಚು ಖರ್ಚು ಮಾಡಿದರೂ ಸಹ ಆದಾಯ ತೆರಿಗೆ ನಿಮಗೆ ನೊಟೀಸ್ ಜಾರಿ ಮಾಡಬಹುದು.
Income Tax Notice: ಯಾವುದೇ ವ್ಯಕ್ತಿ ಐಟಿ ನಿಯಮಗಳನ್ನು ಉಲ್ಲಂಘಿಸಿದರೆ, ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸಿದರೆ, ಅಧಿಕ ಹಣವನ್ನು ಖರ್ಚು ಮಾಡಿದರೆ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ದೇಶವಾಸಿಗಳು ತೆರಿಗೆ ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದು ಆದಾಯ ತೆರಿಗೆ ಇಲಾಖೆಯ ಪ್ರಮುಖ ಗುರಿಯಾಗಿದೆ. ಹಾಗಾಗಿಯೇ, ಐಟಿ ಇಲಾಖೆಯು ವ್ಯಕ್ತಿಯ ಆದಾಯದ ಜೊತೆಗೆ ಅವರ ಖರ್ಚಿನ ಮೇಲೂ ಹದ್ದಿನ ಕಣ್ಣಿಟ್ಟಿರುತ್ತದೆ. ಮಿತಿಗಿಂತ ಹೆಚ್ಚು ಖರ್ಚು ಮಾಡಿದರೆ ಅಥವಾ ಅಧಿಕ ವಹಿವಾಟು ನಡೆಸಿದರೆ ಇದಕ್ಕಾಗಿ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡುತ್ತದೆ.
ಆದಾಯ ತೆರಿಗೆ ನಿಯಮಗಳು ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಹಾಗಾಗಿ, ಎಲ್ಲರೂ ತೆರಿಗೆ ನಿಯಮಗಳನ್ನು ಅನುಸರಿಸುವುದು. ತಮ್ಮ ಆದಾಯ ಮತ್ತು ವೆಚ್ಚಗಳಿಗೆ ಸರಿಯಾದ ವಿವರಣೆ ನೀಡುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುತ್ತದೆ.
ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಅಥವಾ ಯಾವುದೇ ಮಾಧ್ಯಮದ ಮೂಲಕ 10 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಹಣ ಠೇವಣಿ ಮಾಡಿದರೆ ಅಥವಾ ವಿತ್ ಡ್ರಾ ಮಾಡಿದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಬಹುದು.
ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಿದರೆ ಅಂತಹ ಸಂದರ್ಭದಲ್ಲೂ ಆದಾಯ ತೆರಿಗೆ ಇಲಾಖೆ ನಿಮ್ಮನ್ನು ವಿವರಣೆ ಕೇಳಬಹುದು.
ಈ ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗಿದೆ. ಒಂದು ಆರ್ಥಿಕ ವರ್ಷದಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಡಿಜಿಟಲ್ ಪಾವತಿ ನಡೆದರೆ ಆಗಲೂ ಐಟಿ ನೋಟಿಸ್ ಜಾರಿ ಮಾಡಬಹುದು.
ವಿದೇಶ ಪ್ರಯಾಣದ ವೇಳೆ 2 ಲಕ್ಷಕ್ಕಿಂತ ದೊಡ್ಡ ಮೊತ್ತದ ಹಣ ಖರ್ಚು ಮಾಡಿದರೆ ಅದರ ಮೂಲದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ. ಇಲ್ಲವೇ ಐಟಿ ಇಲಾಖೆ ನೋಟಿಸ್ ನೀಡಬಹುದು.
ದುಬಾರಿ ಆಸ್ತಿ ಖರೀದಿ ಮೇಲೂ ಆದಾಯ ತೆರಿಗೆ ಇಲಾಖೆ ಹದ್ದಿನ ಕಣ್ಣಿಟ್ಟಿರುತ್ತದೆ. 30 ಲಕ್ಷಕ್ಕಿಂತ ಹೆಚ್ಚಿನ ಆಸ್ತಿ ಖರೀದಿಸಿದ ಸಂದರ್ಭದಲ್ಲಿ ಹಣದ ಮೂಲ ಕಾನೂನುಬದ್ಧವಾಗಿದೆಯೇ ಇಲ್ಲವೇ ಎಂಬುದನ್ನು ಐಟಿ ಇಲಾಖೆ ಪರಿಶೀಲಿಸಬಹುದು.
ಷೇರು ಅಥವಾ ಮ್ಯೂಚುವಲ್ ಫಂಡ್ ಹೂಡಿಕೆಗಳ ಮೇಲೆ ದೊಡ್ಡ ಮೊತ್ತದ ಲಾಭ ಗಳಿಸಿದ್ದರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಅವಶ್ಯಕ. ಇಲ್ಲದಿದ್ದರೆ ಐಟಿ ಇಲಾಖೆ ನೋಟಿಸ್ ಜಾರಿಮಾಡಬಹುದು.
ಮದುವೆ ಅಥವಾ ಯಾವುದೇ ದೊಡ್ಡ ಕಾರ್ಯಕ್ರಮಗಳಿಗೆ 5 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ವೆಚ್ಚ ಮಾಡಿದರೆ ಅಂತಹ ಸಂದರ್ಭದಲ್ಲೂ ಐಟಿ ನೋಟಿಸ್ ಬರಬಹುದು.
2 ಲಕ್ಷ ರೂ.ಗಳಿಗಿಂತ ಹೆಚ್ಚಿನ ನಗದು ದೇಣಿಗೆ ನೀಡಿದರೂ, ದಾನ ಮಾಡಿದರೂ ಸಹ ಇದು ಐಟಿ ಪರಿಶೀಲನೆಗೆ ಒಳಪಡಬಹುದು.