ನವದೆಹಲಿ : ಪ್ರತಿಕೂಲ ಹವಾಮಾನದಿಂದಾಗಿ ಸಂಭವಿಸುವ ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ, ವಾಹನಗಳಿಗೆ ಪ್ರತಿಫಲಿತ ಟೇಪ್‌ಗಳನ್ನು (Reflective Tapes) ಅಳವಡಿಸುವ ಅಭಿಯಾನವನ್ನು ಆರಂಭಿಸಲಾಗಿದೆ. ಉತ್ತರ ಪ್ರದೇಶ ಪೊಲೀಸರು (UP Police) ನೋಯ್ಡಾದಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.  ಗೌತಮ್ ನಗರ ಜಿಲ್ಲೆಯ ಟ್ರಾಫಿಕ್ ಪೊಲೀಸರು (Traffic rules) ರಸ್ತೆಯುದ್ದಕ್ಕೂ ಇರುವ ಬ್ಯಾರಿಕೇಡ್‌ಗಳು ಮತ್ತು ಪಿಲ್ಲರ್‌ಗಳಿಗೆ ಪ್ರಕಾಶಮಾನವಾದ ಟೇಪ್‌ಗಳನ್ನು ಹಾಕಿದ್ದಾರೆ. ಇದರಿಂದ ಮುಂಭಾಗದಲ್ಲಿರುವ ವಸ್ತುವು ರಾತ್ರಿಯಲ್ಲಿ ಮತ್ತು ದಟ್ಟ ಮಂಜು ಆವರಿಸಿರುವ  ಸಮಯದಲ್ಲಿಯೂ ಸ್ಪಷ್ಟವಾಗಿ ಗೋಚರಿಸುತ್ತದೆ. ಸಂಚಾರಿ ಪೊಲೀಸರು ಎಲ್ಲಾ ವಾಹನಗಳಿಗೆ ಈ ಟೇಪ್‌ಗಳನ್ನು ಕಡ್ಡಾಯಗೊಳಿಸಿದ್ದಾರೆ.


COMMERCIAL BREAK
SCROLL TO CONTINUE READING

ನಿಯಮಗಳನ್ನು ಉಲ್ಲಂಘಿಸಿದರೆ ಬೀಳಲಿದೆ 10,000 ರೂ. ಗಳ ದಂಡ : 
 ಡಿಎನ್‌ಡಿ ಟೋಲ್ ಪ್ಲಾಜಾದಲ್ಲಿ ಹೊಳೆಯುವ ಟೇಪ್ ಗಳನ್ನೂ (Reflective Tapes) ಹಾಕಲಾಗಿದೆ. ಕತ್ತಲಾಗುತ್ತಿದ್ದಂತೆಯೇ, ಅಥವಾ ದಟ್ಟ ಮಂಜು ಆವರಿಸಿರುವ ಸಂದರ್ಭದಲ್ಲಿ, ಎದುರಿಗೆ ಬರುವ ವಾಹನಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಈ ಕಾರಣದಿಂದಾಗಿ ಅದೆಷ್ಟೋ ವಾಹನಗಳು ಡಿವೈಡರ್ ಗೆ ಡಿಕ್ಕಿ ಹೊಡೆಯುವ ಸಂಭವ ಇರುತ್ತವೆ.   ಇವುಗಳನ್ನು ತಡೆಯಳು ಈ ಟೇಪ್ ಗಳು ಸಹಾಯ ಮಾಡುತ್ತವೆ.   ಅಲ್ಲದೆ, ಈ ಸ್ಟಿಕ್ಕರ್‌ಗಳನ್ನು ಟ್ರ್ಯಾಕ್ಟರ್‌ಗಳು, ಟ್ರಕ್‌ಗಳು ಮತ್ತು ಇತರ ವಾಹನಗಳ ಮೇಲೆ ಅಂಟಿಸಲಾಗಿದೆ ಎಂದು ಪೊಲೀಸರು ((Police) ತಿಳಿಸಿದ್ದಾರೆ. ಈ ನಿಯಮವನ್ನು ಅನುಸರಿಸಲು ವಿಫಲವಾದರೆ, ಅಂತಹ ವಾಹನದ (Traffic rules) ಚಾಲಕನಿಗೆ 10,000 ರೂ.ಗಳ ದಂಡವನ್ನು ವಿಧಿಸಲಾಗುವುದು. 


ಇದನ್ನೂ ಓದಿ : ಹೊಸ ಸೇವೆ ಆರಂಭಿಸಿದ SBI, ಎಲ್ಲಾ ಗ್ರಾಹಕರಿಗೂ ಸಿಗಲಿದೆ ಭರ್ಜರಿ ಲಾಭ


ಕತ್ತಲೆ ಅಥವಾ ಮಂಜಿನಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ : 
ಈ ಪ್ರಜ್ವಲಿಸುವ ಟೇಪ್‌ಗಳು (Glowing Tapes) ಕತ್ತಲೆಯಲ್ಲಿ ಅಥವಾ ದಟ್ಟ ಮಂಜಿನಲ್ಲೂ ಬಹಳ ದೂರದಿಂದಲೇ ಸ್ಪಷ್ಟವಾಗಿ ಗೋಚರಿಸುತ್ತದೆ. ಇದಲ್ಲದೇ, ವಾಹನದಲ್ಲಿ ಈ ಸ್ಟಿಕ್ಕರ್‌ಗಳನ್ನು ಅಳವಡಿಸುವ ಪ್ರಯೋಜನವೆಂದರೆ,  ಹಿಂದಿನ ವಾಹನಕ್ಕೆ ಬ್ಯಾಕ್‌ಲೈಟ್ ಸರಿಯಾಗಿ ಗೋಚರಿಸದಿದ್ದರೆ, ಈ ಪ್ರತಿಫಲಕಗಳು  (Glowing Tapes on vehicle) ಕಾಣಿಸುತ್ತದೆ.  ಇದು ವಾಹನವು ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿದೆ ಎನ್ನುವುದನ್ನು ಖಚಿತಪಡಿಸುತ್ತದೆ. 


ಇದನ್ನೂ ಓದಿ : ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಗ್ರಾಹಕರಿಗೆ ಸಿಗಲಿದೆ 8 ಲಕ್ಷ ರೂಪಾಯಿಗಳ ಲಾಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.