ಹೊಸ ಸೇವೆ ಆರಂಭಿಸಿದ SBI, ಎಲ್ಲಾ ಗ್ರಾಹಕರಿಗೂ ಸಿಗಲಿದೆ ಭರ್ಜರಿ ಲಾಭ

ಇದೀಗ SBI ಟೋಲ್ ಫ್ರೀ ಸಂಖ್ಯೆ 1800 1234 ಅನ್ನು ಪರಿಚಯಿಸಿದೆ. ಈ ಮೂಲಕ ಗ್ರಾಹಕರು ಕುಳಿತಲ್ಲಿಯೇ, ಬ್ಯಾಂಕಿನ ವಿವಿಧ  ಸೌಲಭ್ಯಗಳ ಲಾಭವನ್ನು ಪಡೆಯಬಹುದು.   

Written by - Ranjitha R K | Last Updated : Jan 24, 2022, 12:59 PM IST
  • ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿರುವ SBI
  • ಟೋಲ್ ಫ್ರೀ ಸಂಖ್ಯೆಯನ್ನು ಪರಿಚಯಿಸಿದೆ ಬ್ಯಾಂಕ್
  • ಕೇವಲ ಒಂದು ಸಂಖ್ಯೆಯ ಸಹಾಯದಿಂದ ಮುಗಿಸಿಬಿಡಬಹುದು ಎಲ್ಲಾ ಕಾರ್ಯ
ಹೊಸ ಸೇವೆ ಆರಂಭಿಸಿದ SBI, ಎಲ್ಲಾ ಗ್ರಾಹಕರಿಗೂ ಸಿಗಲಿದೆ ಭರ್ಜರಿ  ಲಾಭ  title=
ಟೋಲ್ ಫ್ರೀ ಸಂಖ್ಯೆಯನ್ನು ಪರಿಚಯಿಸಿದೆ ಬ್ಯಾಂಕ್ (file photo)

ನವದೆಹಲಿ : SBI Toll Free Number: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ (SBI) ತನ್ನ ಗ್ರಾಹಕರಿಗೆ ಅತ್ಯುತ್ತಮ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಾ ಬಂದಿದೆ. ತನ್ನ ಗ್ರಾಹಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಕೂಡಾ ಪರಿಚಯಿಸುತ್ತಿದೆ. ಇದೀಗ SBI ಟೋಲ್ ಫ್ರೀ ಸಂಖ್ಯೆ 1800 1234 (SBI Toll Free Number) ಅನ್ನು ಪರಿಚಯಿಸಿದೆ. ಈ ಮೂಲಕ ಗ್ರಾಹಕರು ಕುಳಿತಲ್ಲಿಯೇ, ಬ್ಯಾಂಕಿನ ವಿವಿಧ  ಸೌಲಭ್ಯಗಳ ಲಾಭವನ್ನು ಪಡೆಯಬಹುದು. 

ಕೇವಲ ಒಂದು ಸಂಖ್ಯೆಯ ಸಹಾಯದಿಂದ ಮುಗಿಸಿಬಿಡಬಹುದು ಎಲ್ಲಾ ಕಾರ್ಯ : 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ನೀಡಿರುವ ಮಾಹಿತಿಯ ಪ್ರಕಾರ, ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ,  ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಹಿಂದಿನ ವಹಿವಾಟಿನ ವಿವರಗಳನ್ನು ಪಡೆಯಬಹುದು. ಅಂದರೆ, ಈ ಒಂದು ಸಂಖ್ಯೆಯಿಂದ ನಿಮ್ಮ ಖಾತೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯುವುದು ಈಗ ಸಾಧ್ಯವಾಗುತ್ತದೆ. 

 

ಇದನ್ನೂ ಓದಿ : ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಗ್ರಾಹಕರಿಗೆ ಸಿಗಲಿದೆ 8 ಲಕ್ಷ ರೂಪಾಯಿಗಳ ಲಾಭ

ಯಾವ ಸೌಲಭ್ಯಗಳ ಪ್ರಯೋಜನ ಪಡೆಯಬಹುದು ? : 
- ನೀವು SBI ಯ ಈ ಟೋಲ್ ಫ್ರೀ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ (Bank Ballance) ಅನ್ನು ಪರಿಶೀಲಿಸಬಹುದು
- ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ, ಕೊನೆಯ ಐದು ವಹಿವಾಟುಗಳ ಮಾಹಿತಿಯನ್ನು ಪಡೆಯಬಹುದು. 
-SBI ನ ಟೋಲ್ ಫ್ರೀ ಸಂಖ್ಯೆ 1800 1234 ಗೆ ಸಂದೇಶ ಕಳುಹಿಸುವ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಕೊನೆಯ ಐದು ವಹಿವಾಟುಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
-ಈ ಟೋಲ್ ಫ್ರೀ ಸಂಖ್ಯೆಯ ಮೂಲಕ ಎಟಿಎಂ ಕಾರ್ಡ್ (ATM Card) ಅನ್ನು ಬ್ಲಾಕ್ ಮಾಡಬಹುದು. 
-ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಎಟಿಎಂ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.
-ಈ ಟೋಲ್ ಫ್ರೀ ಸಂಖ್ಯೆಯ ಸಹಾಯದಿಂದ ಗ್ರಾಹಕರು ಕುಳಿತಲ್ಲಿಯೇ ಎಟಿಎಂ ಕಾರ್ಡ್‌ನ ಪಿನ್ ಅನ್ನು ಜನರೇಟ್ ಮಾಡಬಹುದು. 

ಈ ಸೌಲಭ್ಯಗಳನ್ನು ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಸಂದೇಶ ಕಳುಹಿಸುವ ಮೂಲಕವೂ ಪಡೆಯಬಹುದು. 

ಇದನ್ನೂ ಓದಿ : 24-01-2022 Today Gold Price: ಮತ್ತೆ ಇಳಿಕೆಯಾದ ಚಿನ್ನದ ಬೆಲೆ, ಬೆಳ್ಳಿ ದರ ಎಷ್ಟಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News