ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಗ್ರಾಹಕರಿಗೆ ಸಿಗಲಿದೆ 8 ಲಕ್ಷ ರೂಪಾಯಿಗಳ ಲಾಭ

 PNB Update : ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿಯೊಂದಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.

Written by - Ranjitha R K | Last Updated : Jan 24, 2022, 10:59 AM IST
  • PNB ಗ್ರಾಹಕರಿಗೆ ನೀಡುತ್ತಿದೆ ವಿಶೇಷ ಸೌಲಭ್ಯ
  • ಕೇವಲ ಮೊಬೈಲ್ ಸಂಖ್ಯೆಯಿಂದ ಸಾಲ ಪಡೆಯಬಹುದು
  • ಟ್ವೀಟ್ ಮೂಲಕ ಮಾಹಿತಿ ನೀಡಿದ ಬ್ಯಾಂಕ್
ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಗ್ರಾಹಕರಿಗೆ ಸಿಗಲಿದೆ  8 ಲಕ್ಷ ರೂಪಾಯಿಗಳ ಲಾಭ  title=
PNB ಗ್ರಾಹಕರಿಗೆ ನೀಡುತ್ತಿದೆ ವಿಶೇಷ ಸೌಲಭ್ಯ (file photo)

ನವದೆಹಲಿ : PNB Update : ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಗ್ರಾಹಕರಿಗೆ ಸಿಹಿ ಸುದ್ದಿಯೊಂದಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ (PNB Offer) ನೀಡಿದೆ. ಪಿಎನ್‌ಬಿ ಬ್ಯಾಂಕ್‌ನ ಗ್ರಾಹಕರಿಗೆ ತುರ್ತು ಪರಿಸ್ಥಿತಿಯಲ್ಲಿ ಹಣದ ಅವಶ್ಯಕತೆ ಇದ್ದರೆ, ಚಿಂತಿಸಬೇಕಾಗಿಲ್ಲ. ಬ್ಯಾಂಕ್ (Bank) ಗ್ರಾಹಕರಿಗಾಗಿ, ವಿಶೇಷ ಸೌಲಭ್ಯವನ್ನು ತಂದಿದೆ. ಈ ವಿಶೇಷ ಸೌಲಭ್ಯದ ಅಡಿಯಲ್ಲಿ ಈಗ ಬ್ಯಾಂಕ್ ತನ್ನ ಗ್ರಾಹಕರಿಗೆ ಸುಲಭವಾಗಿ 8 ಲಕ್ಷ ರೂಪಾಯಿ ಸೌಲಭ್ಯವನ್ನು  ನೀಡುತ್ತಿದೆ. 

ಮೊಬೈಲ್ ಸಂಖ್ಯೆಯಿಂದಲೇ  ಸಾಲ ಪಡೆಯುವುದು ಸಾಧ್ಯ : 
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ಗ್ರಾಹಕರಿಗೆ Insta ಲೋನ್ ಮೂಲಕ  8 ಲಕ್ಷದವರೆಗೆ ಪ್ರಯೋಜನಗಳನ್ನು ನೀಡುತ್ತಿದೆ. ಈ ಸೌಲಭ್ಯದ ಅಡಿಯಲ್ಲಿ ವೈಯಕ್ತಿಕ ಸಾಲವನ್ನು (Personal loan) ಪಡೆಯಲು ಬಯಸಿದರೆ, ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿದರೆ ಸಾಕು. ಬ್ಯಾಂಕ್ ನಿಂದ ಸಾಲ ಪಡೆಯುವುದು ಸಾಧ್ಯವಾಗುತ್ತದೆ.  ಬ್ಯಾಂಕ್  ಟ್ವೀಟ್ ಮೂಲಕ ಇದರ ಪ್ರಕ್ರೀಯೆಯನ್ನು ವಿವರಿಸಿದೆ. 

ಇದನ್ನೂ ಓದಿ : Oben Electric Motorcycle: ಒಂದು ಬಾರಿ ಫುಲ್ ಚಾರ್ಜ್‌ನಲ್ಲಿ 200KM ವರೆಗೆ ಕ್ರಮಿಸುತ್ತಂತೆ ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್

ಟ್ವೀಟ್  ಮೂಲಕ ಮಾಹಿತಿ ನೀಡಿದ ಪಿಎನ್‌ಬಿ :
 'ಈಗ ಬ್ಯಾಂಕ್ ನಿಂದ (Bank loan) ಸಾಲ ಪಡೆಯುವುದು ಆಹಾರಕ್ಕೆ ಆರ್ಡರ್ ಮಾಡಿದಷ್ಟೇ ಸುಲಭ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಟ್ವೀಟ್ ನಲ್ಲಿ, ಹೇಳಿದೆ. ಕಡಿಮೆ ಬಡ್ಡಿ ದರಗಳೊಂದಿಗೆ ವೈಯಕ್ತಿಕ ಸಾಲ ಪಡೆಯಲು ಬಯಸಿದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ Insta ಲೋನ್‌ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ, tinyurl.com/t3u6dcnd ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಯಾರು ಪಡೆಯಬಹುದು ಈ ಯೋಜನೆಯ ಲಾಭ :
- PNBಯ ಈ ಯೋಜನೆಯ ಲಾಭವನ್ನು ಪಡೆಯಲು, ಗ್ರಾಹಕರು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ PSU ಉದ್ಯೋಗಿಯಾಗಿರಬೇಕು.
- ಈ ಸಾಲವನ್ನು ಕೇವಲ ನಿಮಿಷಗಳಲ್ಲಿ ವಿತರಿಸಲಾಗುತ್ತದೆ.
- ಈ ಸಾಲದ ಸೌಲಭ್ಯವು 24*7 ಲಭ್ಯವಿದೆ.
- ಇದರ ಅಡಿಯಲ್ಲಿ, ಗ್ರಾಹಕರು 8 ಲಕ್ಷದವರೆಗೆ ಸಾಲವನ್ನು ಪಡೆಯುತ್ತಾರೆ
- ಇದರಲ್ಲಿ ಪ್ರೊಸೆಸಿಂಗ್ ಚಾರ್ಜ್ ಶೂನ್ಯವಾಗಿರುತ್ತದೆ. 

ಇದನ್ನೂ ಓದಿ :  Yamaha EMF: ಮನಮೋಹಕ ಲುಕ್ ಜೊತೆಗೆ ಬಿಡುಗಡೆಯಾಗಿದೆ ಯಮಹಾದ ಇಎಮ್‌ಎಫ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News