ನಿಮ್ಮ ಬಳಿಯೂ ಈ ರೀತಿಯ 5 ರೂ. ಮುಖಬೆಲೆಯ ನೋಟು ಇದ್ದರೆ, ರಾತ್ರೋ ರಾತ್ರಿ ಲಕ್ಷಾಧಿಪತಿ ಆಗಬಹುದು!
Unique 5 Rupee Note: ನಮ್ಮಲ್ಲಿ ಕೆಲವರಿಗೆ ಹಳೆಯ ಅಪರೂಪದ ನೋಟುಗಳು, ನಾಣ್ಯಗಳನ್ನು ಕಲೆ ಹಾಕುವ ಹವ್ಯಾಸ ಇರುತ್ತದೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದು, ನಿಮ್ಮ ಬಳಿಯೂ ವಿಶಿಷ್ಟವಾದ ಅಪರೂಪದ ಐದು ರೂಪಾಯಿಯ ನೋಟು ಇದ್ದರೆ ನೀವು ರಾತ್ರೋರಾತ್ರಿ ಲಕ್ಷಾಧಿಪತಿ ಆಗಬಹುದು.
Unique 5 Rupee Note: ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಹವ್ಯಾಸ ಇರುತ್ತದೆ. ಒಬ್ಬರಿಗೆ ಟ್ರಕ್ಕಿಂಗ್ ಬಗ್ಗೆ ಒಲವಿದ್ದರೆ, ಕೆಲವರಿಗೆ ಪೇಂಟಿಂಗ್ ಎಂದರೆ ಪ್ರೀತಿ ಇರುತ್ತದೆ. ಇನ್ನೂ ಕೆಲವರಿಗೆ ಓದುವುದೆಂದರೆ ಪಂಚಪ್ರಾಣ. ಹೀಗೆ ಕೆಲವು ಹಳೆಯ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದರೆ, ಕೆಲವರು ಅಪರೂಪದ ನೋಟುಗಳು, ನಾಣ್ಯಗಳನ್ನು ಕಲೆಹಾಕುವ ಹವ್ಯಾಸ ಹೊಂದಿರುತ್ತಾರೆ. ನಿಮಗೂ ವಿಶಿಷ್ಟವಾದ ನೋಟು, ನಾಣ್ಯಗಳನ್ನು ಕೂಡಿಡುವ ಹವ್ಯಾಸವಿದ್ದರೆ ಮತ್ತು ನಿಮ್ಮ ಬಳಿ ವಿಶಿಷ್ಟವಾದ 5 ರೂಪಾಯಿ ಮುಖಬೆಲೆಯ ನೋಟು ಇದ್ದರೆ ನೀವು ಮನೆಯಲ್ಲಿಯೇ ಕುಳಿತು ರಾತ್ರೋ ರಾತ್ರಿ ಲಕ್ಷಾಂತರ ರೂಪಾಯಿ ಒಡೆಯರಾಗಬಹುದು.
ವಾಸ್ತವವಾಗಿ, ಭಾರತದಲ್ಲಿ ಈ ಹಿಂದೆ ಚಲಾವಣೆಯಲ್ಲಿದ್ದ ಹಲವು ನೋಟುಗಳು, ನಾಣ್ಯಗಳು ಪ್ರಸ್ತುತ ಚಲಾವಣೆಯಲ್ಲಿಲ್ಲ. ಆದರೆ, ಅವುಗಳಲ್ಲಿ ಕೆಲವು ವಿಶಿಷ್ಟವಾದ ಅಪರೂಪದ ನೋಟು, ನಾಣ್ಯಗಳನ್ನು ಆನ್‌ಲೈನ್‌ನಲ್ಲಿ ಭಾರೀ ಬೆಲೆಗೆ ಮಾರಾಟ ಮಾಡಬಹುದು.
ಇದನ್ನೂ ಓದಿ- GPay, PhonePe, Paytm ಮೂಲಕ ದಿನಕ್ಕೆ ಇಷ್ಟೇ ವಹಿವಾಟು ಸಾಧ್ಯ .! ಗಂಟೆಯ ಮಿತಿ ಕೂಡಾ ನಿಗದಿ
5 ರೂಪಾಯಿಯ ಈ ವಿಶಿಷ್ಟ ನೋಟನ್ನು ಸೇಲ್ ಮಾಡಿ ಹಣ ಗಳಿಸಿ:
ನಿಮ್ಮ ಬಳಿ ಇರುವ ವಿಶಿಷ್ಟವಾದ ನೋಟನ್ನು ಸೇಲ್ ಮಾಡುವ ಮೂಲಕ ನೀವು ಸುಮಾರು 35 ಸಾವಿರದಿಂದ 2 ಲಕ್ಷ ರೂಪಾಯಿಗಳವರೆಗೆ ಹಣ ಗಳಿಸಬಹುದು. ಆದರೆ ಇದಕ್ಕಾಗಿ ಕೆಲವು ಷರತ್ತುಗಳನ್ನು ಪೂರ್ಣಗೊಳಿಸುವುದು ಅತ್ಯಗತ್ಯವಾಗಿದೆ.
ಇದನ್ನೂ ಓದಿ- Nitin Gadkari: ದೇಶದ ನಾಗರಿಕರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ
ನಿಮ್ ಹತ್ರಾನೂ ಈ ರೀತಿಯ ವಿಶಿಷ್ಟವಾದ 5 ರೂಪಾಯಿ ನೋಟ್ ಇದ್ರೆ ಹೊಡೆಯುತ್ತೆ ಜಾಕ್ ಪಾಟ್:
* ಈ ವಿಶಿಷ್ಟವಾದ ನೋಟು ಟ್ರಾಕ್ಟರ್‌ನ ಚಿತ್ರವನ್ನು ಹೊಂದಿರಬೇಕು.
* ಈ 5 ರೂಪಾಯಿ ಮುಖಬೆಲೆಯ ನೋಟಿನ ಮೇಲೆ 786 ಎಂಬ ಸಂಖ್ಯೆಯನ್ನು ನಮೂದಿಸಿರಬೇಕು.
ಇಂತಹ ನೋಟು ನಿಮ್ಮ ಬಳಿಯೂ ಇದ್ದರೆ, ನಿಮ್ಮ ಹಳೆಯ ನೋಟುಗಳು ಮತ್ತು ನಾಣ್ಯಗಳು ನಿಗದಿತ ಷರತ್ತುಗಳನ್ನು ಪೂರೈಸಿದರೆ ನಿಮಗೆ ಜಾಕ್ ಪಾಟ್ ಹೊಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.