GPay, PhonePe, Paytm ಮೂಲಕ ದಿನಕ್ಕೆ ಇಷ್ಟೇ ವಹಿವಾಟು ಸಾಧ್ಯ .! ಗಂಟೆಯ ಮಿತಿ ಕೂಡಾ ನಿಗದಿ

ಗೂಗಲ್ ಪೆ, ಫೋನ್ ಪೇ, ಅಮೆಜಾನ್ ಪೇ, ಪೇಟಿಎಂ ನಂತಹ ಎಲ್ಲಾ ಕಂಪನಿಗಳು ಪ್ರತಿದಿನ ವಹಿವಾಟು ಮಾಡುವ ಮಿತಿಯನ್ನು ನಿಗದಿಪಡಿಸಿವೆ.  ಇದು ದೇಶದ ಕೋಟಿಗಟ್ಟಲೆ UPI ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ.

Written by - Ranjitha R K | Last Updated : Dec 9, 2022, 09:03 AM IST
  • UPI ಬಳಕೆದಾರರು ಗಮನಿಸಲೇ ಬೇಕಾದ ಸುದ್ದಿ ಇದು
  • ಯುಪಿಐ ಮೂಲಕ ಪ್ರತಿದಿನ ಇಷ್ಟೇ ವಹಿವಾಟು ಮಾಡಬಹುದು
  • ಮಿತಿಯನ್ನು ದಾಟುವುದು ಸಾಧ್ಯವಾಗುವುದಿಲ್ಲ
GPay, PhonePe, Paytm ಮೂಲಕ ದಿನಕ್ಕೆ ಇಷ್ಟೇ ವಹಿವಾಟು ಸಾಧ್ಯ .! ಗಂಟೆಯ ಮಿತಿ ಕೂಡಾ ನಿಗದಿ  title=
UPI Transaction Limit

ಬೆಂಗಳೂರು : ಈಗ ಹಣಕಾಸಿನ ವ್ಯವಹಾರಕ್ಕೆ ಬ್ಯಾಂಕ್ ಗೆ ಹೋಗಬೇಕೆಂದಿಲ್ಲ. ಆನ್ ಲೈನ್ ಮೂಲಕ ವಹಿವಾಟು ನಡೆಸಬಹುದು. ಇದಕ್ಕಾಗಿ ಬಹುತೇಕ ಎಲ್ಲರೂ ಯುಪಿಐ ಬಳಸುತ್ತಿದ್ದಾರೆ. ಯುಪಿಐ ಮೂಲಕ ಪಾವತಿ ಮಾಡುವುದಾದರೆ ನೀವು ಗಮನಿಸಲೇಬೇಕಾದ ಮಾಹಿತಿಯೊಂದು ಹೊರ ಬಿದ್ದಿದೆ.  ಗೂಗಲ್ ಪೆ, ಫೋನ್ ಪೇ, ಅಮೆಜಾನ್ ಪೇ, ಪೇಟಿಎಂ ನಂತಹ ಎಲ್ಲಾ ಕಂಪನಿಗಳು ಪ್ರತಿದಿನ ವಹಿವಾಟು ಮಾಡುವ ಮಿತಿಯನ್ನು ನಿಗದಿಪಡಿಸಿವೆ.  ಇದು ದೇಶದ ಕೋಟಿಗಟ್ಟಲೆ UPI ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ. ಎನ್‌ಪಿಸಿಐನಿಂದ ಈ ಕುರಿತು ಅಧಿಸೂಚನೆ ಹೊರಡಿಸಿ ಮಾಹಿತಿ ನೀಡಲಾಗಿದೆ. 

ಯುಪಿಐ ಮೂಲಕ ಪ್ರತಿದಿನ ಎಷ್ಟು ವಹಿವಾಟು ಮಾಡಬಹುದು ? 
ನ್ಯಾಷನಲ್ ಪೇಮೆಂಟ್ ಕಾರ್ಪೋರಶನ್ ಮಾರ್ಗಸೂಚಿಗಳ ಪ್ರಕಾರ, ಈಗ  UPI ಮೂಲಕ ದಿನಕ್ಕೆ 1 ಲಕ್ಷದವರೆಗೆ ಮಾತ್ರ ನಡೆಸುವುದು ಸಾಧ್ಯವಾಗುತ್ತದೆ. ಇನ್ನು ಕೆಲವು ಸಣ್ಣ ಬ್ಯಾಂಕುಗಳು ಈ ಮಿತಿಯನ್ನು 25,000 ವರೆಗೆ ನಿಗದಿಪಡಿಸಿವೆ. ಹಾಗಿದ್ದರೆ ಯಾವ ಆಪ್ ಮೂಲಕ ಪ್ರತಿದಿನ ಎಷ್ಟು ವಹಿವಾಟು ಮಾಡಬಹುದು  ನೋಡೋಣ. 

ಇದನ್ನೂ ಓದಿ : Nitin Gadkari: ದೇಶದ ನಾಗರಿಕರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

Amazon Pay ಮಿತಿ ಏನು?
Amazon Pay UPI ಮೂಲಕ ಗರಿಷ್ಠ 1,00,000 ರೂ.ಗಳವರೆಗೆ ವಹಿವಾಟು ನಡೆಸಬಹುದು.  Amazon Pay UPI ನಲ್ಲಿ ನೋಂದಾಯಿಸಿದ ನಂತರ, ಬಳಕೆದಾರರು ಮೊದಲ 24 ಗಂಟೆಗಳಲ್ಲಿ 5000 ರೂಪಾಯಿಗಳವರೆಗೆ ಮಾತ್ರ ವಹಿವಾಟು ಮಾಡಬಹುದು. ನಂತರ  ಬ್ಯಾಂಕ್ ಮಿತಿ ಆಧಾರದ ಮೇಲೆ, ಪ್ರತಿ ದಿನ 20 ವಹಿವಾಟುಗಳನ್ನು ನಡೆಸಬಹುದು.  

Paytm  ಮಿತಿ ಎಷ್ಟು ? :
Paytm UPI ಕೂಡಾ ಬಳಕೆದಾರರಿಗೆ 1 ಲಕ್ಷದವರೆಗಿನ ಮಿತಿಯನ್ನು ನಿಗದಿಪಡಿಸಿದೆ. ಇದರೊಂದಿಗೆ, ಗಂಟೆಗೆ ಎಷ್ಟು  ಹಣವನ್ನು ವರ್ಗಾವಣೆ ಮಾಡಬಹುದು ಎನ್ನುವ ಮಿತಿಯನ್ನು ಕೂಡಾ ನಿಗದಿಪಡಿಸಲಾಗಿದೆ. Paytm UPI ಮೂಲಕ  ಪ್ರತಿ ಗಂಟೆಗೆ ಕೇವಲ 20,000 ರೂಪಾಯಿ ಮಾತ್ರ ವಹಿವಾಟು ಮಾಡಬಹುದು ಎಂದು Paytm ಹೇಳಿದೆ. ಇದಲ್ಲದೇ ಗಂಟೆಗೆ 5 ವಹಿವಾಟು ಮಾತ್ರ ನಡೆಸುವುದು ಸಾಧ್ಯವಾಗುತ್ತದೆ. ಒಂದು ದಿನದಲ್ಲಿ ಕೇವಲ 20 ವಹಿವಾಟು ನಡೆಸಬಹುದಾಗಿದೆ. 

ಇದನ್ನೂ ಓದಿ : PM Kisan ಫಲಾನುಭವಿಗಳಿಗೆ ಬಿಗ್ ಶಾಕ್ : 2 ಕೋಟಿ ರೈತರಿಗೆ ಸಿಗಲ್ಲ ಹಣ!

PhonePe ಮಿತಿ ಎಷ್ಟು ? :
PhonePeಯಲ್ಲಿ 1,00,000 ರೂ. ವರೆಗೆ ವಹಿವಾಟು ನಡೆಸಬಹುದು.  ಇಲ್ಲಿ ಒಬ್ಬ ವ್ಯಕ್ತಿಯು ದಿನಕ್ಕೆ ಗರಿಷ್ಠ 10 ಅಥವಾ 20 ವಹಿವಾಟುಗಳನ್ನು PhonePe UPI ಮೂಲಕ ಮಾಡಬಹುದು. ಇದು ಬ್ಯಾಂಕ್‌ನ ಮಾರ್ಗಸೂಚಿಗಳನ್ನು ಕೂಡಾ ಅವಲಂಬಿಸಿರುತ್ತದೆ.

Google Pay 10 ವಹಿವಾಟುಗಳನ್ನು ಮಾತ್ರ ಮಾಡಬಹುದು: 
Google Pay ಅಥವಾ GPay ದಿನಕ್ಕೆ 10 ವಹಿವಾಟುಗಳ ಮಿತಿಯನ್ನು ನಿಗದಿಪಡಿಸಿದೆ. ಅಂದರೆ ಗೂಗಲ್ ಪೇ ಮೂಲಕ ದಿನಕ್ಕೆ ಕೇವಲ 10 ವಹಿವಾಟುಗಳನ್ನು ಮಾತ್ರ ಮಾಡಲು ಸಾಧ್ಯವಾಗುತ್ತದೆ.  ಆದರೆ ದಿನಕ್ಕೆ ಒಂದು ಲಕ್ಷ ರೂಪಾಯಿಗಳವರೆಗೆ ವಹಿವಾಟುಗಳನ್ನು  ನಡೆಸಬಹುದು. 

ಇದನ್ನೂ ಓದಿ : RBI Rules: ಬ್ಯಾಂಕ್ ಗ್ರಾಹಕರೇ ಗಮನಿಸಿ, ಕೆವೈಸಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ RBI ಗವರ್ನರ್

ಈ ಅಪ್ಲಿಕೇಶನ್‌ಗಳಲ್ಲಿ ಗಂಟೆಯ ಮಿತಿಯಿಲ್ಲ :
Google Pay ಮತ್ತು Phone Pay ನಲ್ಲಿ ಯಾವುದೇ ಗಂಟೆಯ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಇನ್ನೊಂದು ಮುಖ್ಯ ವಿಷವೆಂದರೆ ಈ ಅಪ್ಲಿಕೇಶನ್ ಮೂಲಕ ಯಾವುದೇ ವ್ಯಕ್ತಿ 2000 ರೂ.ಗಿಂತ ಹೆಚ್ಚಿನ ಹಣದ ರಿಕ್ವೆಸ್ಟ್ ಕಳುಹಿಸಿದರೆ ಈ ಅಪ್ಲಿಕೇಶನ್ ಅದನ್ನು ಹೋಲ್ಡ್ ಮಾಡುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News