PM Kisan ಫಲಾನುಭವಿಗಳಿಗೆ ಬಿಗ್ ಶಾಕ್ : 2 ಕೋಟಿ ರೈತರಿಗೆ ಸಿಗಲ್ಲ ಹಣ!

PM Kisan Yojana 13th Installment : ದೇಶದಾದ್ಯಂತ ರೈತರು ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಈ ಕುರಿತು ಹೊಸ ಅಪ್‌ಡೇಟ್‌ ಒಂದು ಹೊರಬಿದ್ದಿದೆ. ನಕಲಿ ರೈತರನ್ನು ಕಂಡು ಹಿಡಿಯಲು ಕೇಂದ್ರ ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿದೆ.

Written by - Channabasava A Kashinakunti | Last Updated : Dec 8, 2022, 07:29 PM IST
  • ರೈತರು ಪಿಎಂ ಕಿಸಾನ್ 13 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ
  • ಈ ರೈತರ ಹೆಸರನ್ನು ಕೈಬಿಡಲಾಗಿದೆ!
PM Kisan ಫಲಾನುಭವಿಗಳಿಗೆ ಬಿಗ್ ಶಾಕ್ : 2 ಕೋಟಿ ರೈತರಿಗೆ ಸಿಗಲ್ಲ ಹಣ! title=

PM Kisan Yojana 13th Installment : ದೇಶದಾದ್ಯಂತ ರೈತರು ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಈ ಕುರಿತು ಹೊಸ ಅಪ್‌ಡೇಟ್‌ ಒಂದು ಹೊರಬಿದ್ದಿದೆ. ನಕಲಿ ರೈತರನ್ನು ಕಂಡು ಹಿಡಿಯಲು ಕೇಂದ್ರ ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿದೆ. ಇದರ ಅಡಿಯಲ್ಲಿ, ಪಿಎಂ ಕಿಸಾನ್ ಯೋಜನೆಯ ಪಟ್ಟಿಯಿಂದ 2 ಕೋಟಿ ರೈತರ ಹೆಸರನ್ನು ತೆಗೆದುಹಾಕಲಾಗಿದೆ, ಅಂದರೆ, ಈ ರೈತರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಈ ರೈತರ ಹೆಸರನ್ನು ಕೈಬಿಡಲಾಗಿದೆ!

ಕೇಂದ್ರ ಸರ್ಕಾರದ ಈ ಯೋಜನೆಯಡಿ ಹಲವು ರಾಜ್ಯಗಳ ರೈತರ ಹೆಸರುಗಳನ್ನು ಕಡಿತಗೊಳಿಸಲಾಗಿದೆ. ವಿವಿಧ ರಾಜ್ಯಗಳಿಂದ ರೈತರ ಹೆಸರನ್ನು ಈ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಯೋಜನೆಯಡಿ ವಂಚನೆ ತಡೆಯಲು ಆಧಾರ್ ಲಿಂಕ್ ಇರುವ ಫಿಲ್ಟರ್ ಅಳವಡಿಸಲಾಗಿದ್ದು, ಆ ಮೂಲಕ ರೈತರನ್ನು ಗುರುತಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಈ ಕಾರಣದಿಂದ ರೈತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಹೀಗಾಗಿ, ನೀವು ಸಹ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ ಮತ್ತು ಇನ್ನೂ ಆಧಾರ್ ಅನ್ನು ಲಿಂಕ್ ಮಾಡಿಲ್ಲದಿದ್ದರೆ KYC (E-KYC) ಅನ್ನು ತಕ್ಷಣವೇ ಮಾಡಿ, ಇಲ್ಲದಿದ್ದರೆ ನಿಮಗೆ 13 ನೇ ಕಂತಿನ ಹಣ ಸಿಗುವುದಿಲ್ಲ.

ಇದನ್ನೂ ಓದಿ : Sukanya Samriddhi Yojana : ಸುಕನ್ಯಾ ಸಮೃದ್ಧಿಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಹೊಸ ಗುಡ್ ನ್ಯೂಸ್!

ಅನರ್ಹ ರೈತರ ಹೆಸರುಗಳಿಗೆ ಕತ್ತರಿಸಿ

ಗಮನಾರ್ಹವೆಂದರೆ ಈ ಯೋಜನೆಯಡಿ ಹಲವು ರೈತರು ಮೋಸದಿಂದ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಯೋಜನೆಯ ಲಾಭವನ್ನು ಪಡೆಯುತ್ತಿದ್ದ ಅನರ್ಹ ರೈತರನ್ನು ಗುರುತಿಸುವಲ್ಲಿ ಸರ್ಕಾರ ನಿರಂತರವಾಗಿ ತೊಡಗಿಸಿಕೊಂಡಿದೆ. ಈ ರೈತರಿಗೆ ಈ ಯೋಜನೆಯ ಲಾಭ ಪಡೆಯುವುದನ್ನು ತಡೆಯಲು, ಸರ್ಕಾರವು ನಾಲ್ಕು ಫಿಲ್ಟರ್‌ಗಳನ್ನು ಅಳವಡಿಸಿದೆ, ಇದರಿಂದ ಅವರನ್ನು ಸುಲಭವಾಗಿ ಗುರುತಿಸಲಾಗಿದೆ.

ಈ ರಾಜ್ಯಗಳಿಂದ ರೈತರ ಹೆಸರು ಕಟ್

ಪಿಎಂ ಕಿಸಾನ್ ಯೋಜನೆಯಡಿ ದೇಶಾದ್ಯಂತ ಸುಮಾರು 58 ಲಕ್ಷ ರೈತರ ಹೆಸರನ್ನು ತೆಗೆದುಹಾಕಲಾಗಿದೆ. ಸರ್ಕಾರದ ಈ ಕ್ರಮದ ನಂತರ, ಪಂಜಾಬ್‌ನ 17 ಲಕ್ಷ ರೈತರಲ್ಲಿ 15 ಲಕ್ಷ ರೈತರ ಹೆಸರನ್ನು ಹೊಡೆದು ಹಾಕಲಾಗಿದೆ ಮತ್ತು ಈಗ ಅವರ ಸಂಖ್ಯೆ 2 ಲಕ್ಷಕ್ಕೆ ಇಳಿದಿದೆ. ಕೇರಳ ಮತ್ತು ರಾಜಸ್ಥಾನದಿಂದ ಸುಮಾರು 14 ಲಕ್ಷ ರೈತರ ಹೆಸರುಗಳನ್ನು ತೆಗೆದು ಹಾಕಲಾಗಿದೆ.

ಇದನ್ನೂ ಓದಿ : Pension Scheme : ಸರ್ಕಾರದಿಂದ ಮದುವೆಯಾದ ಜೋಡಿಗೆ ಸಿಗಲಿದೆ ಪ್ರತಿ ತಿಂಗಳು ₹18500 : ಹೇಗೆ? ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News