Bank Strike 2023: ಜನವರಿ ಕೊನೆಯ ವಾರದಲ್ಲಿ ಬ್ಯಾಂಕ್‌ಗೆ ಭೇಟಿ ನೀಡುವ ಗ್ರಾಹಕರಿಗೆ ಭಾರಿ ತೊಂದರೆ ಎದುರಾಗುವ ಸಾಧ್ಯತೆ ಇದೆ. ಜನವರಿ 28 ರಿಂದ ಜನವರಿ 31 ರವರೆಗೆ ಬ್ಯಾಂಕಿನ ಸೇವೆಗಳು ಸ್ಥಗಿತಗೊಳ್ಳಬಹುದು. 2 ದಿನಗಳ ಕಾಲ ಮುಷ್ಕರ ನಡೆಸಲು ಬ್ಯಾಂಕ್ ಯೂನಿಯನ್ ನಿರ್ಧರಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಬ್ಯಾಂಕ್ ಮುಷ್ಕರದಿಂದಾಗಿ, ಎಟಿಎಂಗಳಿಂದ ನಗದು ಹಿಂಪಡೆಯುವಿಕೆಯಿಂದ ಹಿಡಿದು ಅನೇಕ ಸೇವೆಗಳು ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

4 ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ
ಬ್ಯಾಂಕ್ ಯೂನಿಯನ್ ಜನವರಿ 30 ಮತ್ತು 31 ರಂದು ಬ್ಯಾಂಕ್ ಮುಷ್ಕರವನ್ನು ಘೋಷಿಸಿದೆ. ಇದರೊಂದಿಗೆ ಜನವರಿ 28 ನಾಲ್ಕನೇ ಶನಿವಾರವಾಗಿದ್ದು, ಈ ಕಾರಣದಿಂದಾಗಿ ಬ್ಯಾಂಕ್‌ಗಳು ಬಂದ್ ಇರಲಿವೆ. ಮತ್ತೊಂದೆಡೆ, ಜನವರಿ 29 ರಂದು, ಭಾನುವಾರದ ರಜೆಯ ಕಾರಣ, ಬ್ಯಾಂಕ್‌ಗಳು ಬಂದ್ ಇರಲಿವೆ, ಹೀಗಾಗಿ ನೀವು ನಿಮ್ಮ ಪ್ರಮುಖ ಕೆಲಸವನ್ನು ಶುಕ್ರವಾರ ಮುಗಿಸಬಹುದು ಅಥವಾ ಫೆಬ್ರವರಿ 1 ರಂದು ನಿಮ್ಮ ಕೆಲಸವನ್ನು ಮುಗಿಸಬಹುದು.


ಮುಷ್ಕರ ಏಕೆ ನಡೆಯುತ್ತಿದೆ?
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್‌ಬಿಯು) ಸಭೆ ಮುಂಬೈನಲ್ಲಿ ನಡೆದಿದ್ದು, ಎರಡು ದಿನಗಳ ಕಾಲ ಮುಷ್ಕರ ನಡೆಸಲು ಬ್ಯಾಂಕ್ ಒಕ್ಕೂಟಗಳು ನಿರ್ಧರಿಸಿವೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಬ್ಯಾಂಕ್ ಒಕ್ಕೂಟಗಳು ಮುಷ್ಕರ ನಡೆಸುತ್ತಿವೆ.


ಇದನ್ನೂ ಓದಿ-ರೈತ ಬಾಂಧವರಿಗೊಂದು ಭಾರಿ ಸಂತಸದ ಸುದ್ದಿ, ಪಿಎಂ ಕಿಸಾನ್ ಅಡಿ ಇನ್ಮುಂದೆ ವಾರ್ಷಿಕವಾಗಿ ಇಷ್ಟು ಹಣ ವರ್ಗಾವಣೆ!


ವಾರದ 5 ದಿನಗಳಲ್ಲಿ ಮಾತ್ರ ಕೆಲಸ
ಈ ಕುರಿತು ಮಾಹಿತಿ ನೀಡಿದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ, ಯುನೈಟೆಡ್ ಫೋರಂನ ಸಭೆ ನಡೆಸಲಾಗಿದ್ದು, 2 ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ವಾರದಲ್ಲಿ 5 ದಿನಗಳ ಬ್ಯಾಂಕಿಂಗ್ ಕೆಲಸ ಮಾಡಬೇಕು ಎಂಬುದು ಬ್ಯಾಂಕ್ ಒಕ್ಕೂಟಗಳ ಪ್ರಮುಖ ಬೇಡಿಕೆಯಾಗಿದೆ ಎಂದು ತಿಳಿಸಿದ್ದು. ಇದರೊಂದಿಗೆ ಪಿಂಚಣಿಯನ್ನೂ ನವೀಕರಿಸಬೇಕು ಎಂದಿದ್ದಾರೆ.


ಇದನ್ನೂ ಓದಿ-ಈ ಖಾತೆ ಹೊಂದಿದವರ ಬ್ಯಾಂಕ್ ಖಾತೆಗೆ 10 ಸಾವಿರ ವರ್ಗಾವಣೆಯಾಗುತ್ತಿದೆ! ತಕ್ಷಣ ಅಪ್ಲೈ ಮಾಡಿ


ವೇತನ ಹೆಚ್ಚಳಕ್ಕೆ ಆಗ್ರಹ
ಇದರೊಂದಿಗೆ ಎನ್ ಪಿಎಸ್ ರದ್ದುಪಡಿಸಿ ವೇತನ ಹೆಚ್ಚಳಕ್ಕೆ ಮಾತುಕತೆ ನಡೆಸಬೇಕು ಎಂಬುದು ನೌಕರರ ಆಗ್ರಹವಾಗಿದೆ. ಇದೆಲ್ಲದರ ಹೊರತಾಗಿ ಎಲ್ಲ ಕೇಡರ್ ಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲು ಸಂಘ ನಿರ್ಧರಿಸಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.