Indian Economy : ಪ್ರಸಕ್ತ ದಶಕದಲ್ಲಿ, ಭಾರತೀಯ ಆರ್ಥಿಕತೆಯು ವಾರ್ಷಿಕವಾಗಿ ಶೇ. 7ರ ದರದಲ್ಲಿ ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಲಿದೆ. ಇದೇ ವೇಳೆ ಪ್ರಸಕ್ತ ಹಣಕಾಸು ವರ್ಷ 2022-23 ರಲ್ಲಿ, ಆರ್ಥಿಕ ಬೆಳವಣಿಗೆ ದರವು ಶೇ.7 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ದೇಶದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ್ ನಾಗೇಶ್ವರನ್ ಈ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ದುಷ್ಪರಿಣಾಮಗಳು ಮತ್ತು ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ ಉದ್ಭವಿಸಿರುವ ಪರಿಸ್ಥಿತಿಯೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿರುವ ಮುಖ್ಯ ಆರ್ಥಿಕ ಸಲಹೆಗಾರರು, ಭಾರತವು ಇತ್ತೀಚೆಗಷ್ಟೇ ಯುಕೆಯನ್ನು ಹಿಂದಿಕ್ಕಿ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಇದು ದೊಡ್ಡ ಸಾಧನೆ ಆದರೆ ಈ ಸಾಧನೆಗೆ ಆಶ್ಚರ್ಯಪಡುವ ಅವಶ್ಯಕತೆ ಇಲ್ಲ.  ನಾವು 2023 ಕ್ಕೆ ಪ್ರವೇಶಿಸಲಿದ್ದೇವೆ, ನಂತರ ಈ ದಶಕದಲ್ಲಿ, ಭಾರತದ ಆರ್ಥಿಕತೆಯು ಶೇಕಡಾ 7 ರ ದರದಲ್ಲಿ ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಲಿದೆ ಎಂದು ಅವರು ಹೇಳಿದ್ದಾರೆ. ವಾಸ್ತವದಲ್ಲಿ, ಈ ವರ್ಷ ಪ್ರಸ್ತುತಪಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ, 2022-23ರಲ್ಲಿ ಆರ್ಥಿಕ ಬೆಳವಣಿಗೆ ದರವು ಶೇ.8 ರಿಂದ ಶೇ. 8.5 ರಷ್ಟು ಉಳಿಯುವ ಅಂದಾಜು ವ್ಯಕ್ತಪಡಿಸಲಾಗಿತ್ತು.


ಇದನ್ನೂ ಓದಿ-Stock Market: ಸೆನ್ಸೆಕ್ಸ್ ಸೂಚ್ಯಂಕದಲ್ಲಿ 578 ಅಂಕಗಳ ಜಿಗಿತ, 17,800 ಗಡಿ ದಾಟಿದ ನಿಫ್ಟಿ, ಟಾಪ್ ಗೆನರ್ ಯಾರು?


ಇನ್ನೊಂದೆಡೆ ಆರ್‌ಬಿಐ ಕೂಡ 2022-23ರಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.7.2 ರಷ್ಟು ಇರಲಿದೆ ಎಂದು ಅಂದಾಜಿಸಿರುವುದು ಇಲ್ಲಿ ಉಲ್ಲೇಖನೀಯ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 13.5 ರಷ್ಟಿದೆ, ಇದು ಆರ್‌ಬಿಐನ ಈ ಮೊದಲಿನ ಅಂದಾಜು ಶೇ. 16.2ಕ್ಕಿಂತ ಕಡಿಮೆಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ 2021-22 ರಲ್ಲಿ, ಜಿಡಿಪಿ ಬೆಳವಣಿಗೆ ದರವು ಶೇ.8.7 ರಷ್ಟಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.


ಇದನ್ನೂ ಓದಿ-Illegal Lending Apps: ಅಕ್ರಮ ಡಿಜಿಟಲ್ ಸಾಲ ನೀಡುವ ಆಪ್ ಕಡಿವಾಣಕ್ಕೆ ಸಿದ್ಧತೆ, ಸರ್ಕಾರ ಗೂಗಲ್ ಗೆ ಹೇಳಿದ್ದೇನು?
 
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿರುವ ವಿ.ಅನಂತ್ ನಾಗೇಶ್ವರ್, ಸರ್ಕಾರ ಇದೀಗ ಆರ್ಥಿಕ ಸೇರ್ಪಡೆಯಿಂದ ಆರ್ಥಿಕ ಸಬಲೀಕರಣದತ್ತ ತನ್ನ ಸಂಪೂರ್ಣ ಗಮನವನ್ನು ಹರಿಸುತ್ತಿದೆ ಮತ್ತು ಪ್ರಸಕ್ತ ದಶಕದಲ್ಲಿ ಜನರಿಗೆ ಸಾಲ ಮತ್ತು ವಿಮೆಯಂತಹ ಹಣಕಾಸು ಸೇವೆಗಳ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಒತ್ತು ನೀಡುತ್ತಿದೆ ಎಂದು ಹೇಳಿದ್ದಾರೆ. ರೆಮಿಟೆನ್ಸ್ ಮೇಲೆ ವಿಧಿಸಲಾಗುತಿದ್ದ  ಶುಲ್ಕವನ್ನು ಬಹುತೇಕ ಶೂನ್ಯಕ್ಕೆ ಇಳಿಸುವ ಉದ್ದೇಶದಿಂದ ಸರ್ಕಾರವು ಸಿಂಗಾಪುರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಹೇಳಿದ್ದಾರೆ. ಈ ಕ್ರಮದಿಂದ ವಿದೇಶದಲ್ಲಿರುವ ಭಾರತೀಯರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.