Illegal Lending Apps: ಅಕ್ರಮ ಡಿಜಿಟಲ್ ಸಾಲ ನೀಡುವ ಆಪ್ ಕಡಿವಾಣಕ್ಕೆ ಸಿದ್ಧತೆ, ಸರ್ಕಾರ ಗೂಗಲ್ ಗೆ ಹೇಳಿದ್ದೇನು?

Illegal Digital Lending Apps: ಅಕ್ರಮ ಡಿಜಿಟಲ್ ಸಾಲ ನೀಡುವ ಆಪ್ ಗಳನ್ನು ಭಾರತದಲ್ಲಿ ಕಾರ್ಯನಿರ್ವಹಿಸದಂತೆ ತಡೆಯಲು ಅವುಗಳಿಗೆ ಕಡಿವಾಣ ಹಾಕಲು ಭಾರತ ಸರ್ಕಾರ ಗೂಗಲ್ ಅನ್ನು ಕೇಳಿಕೊಂಡಿದೆ.  

Written by - Nitin Tabib | Last Updated : Sep 19, 2022, 10:37 PM IST
  • ಜನಸಾಮಾನ್ಯರು ಅಕ್ರಮ ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್‌ನಿಂದ ಹೊರಬರಲು,
  • ಕೇಂದ್ರ ಸರ್ಕಾರವು ಕಟ್ಟುನಿಟ್ಟಾದ ತಪಾಸಣೆಗೆ ನಿಬಂಧನೆಗಳನ್ನು ರೂಪಿಸುವಂತೆ ಗೂಗಲ್‌ಗೆ ಮನವಿ ಮಾಡಿದೆ.
  • ಇಂತಹ ಅಕ್ರಮ ಆ್ಯಪ್‌ಗಳು ಭಾರತದಲ್ಲಿ ಕಾರ್ಯನಿರ್ವಹಿಸದಂತೆ ತಡೆಯಲು ಸರ್ಕಾರವು ಗೂಗಲ್‌ಗೆ ಕಡಿವಾಣ ಹಾಕುವಂತೆ ಸೂಚಿಸಿದೆ.
Illegal Lending Apps: ಅಕ್ರಮ ಡಿಜಿಟಲ್ ಸಾಲ ನೀಡುವ ಆಪ್ ಕಡಿವಾಣಕ್ಕೆ ಸಿದ್ಧತೆ, ಸರ್ಕಾರ ಗೂಗಲ್ ಗೆ ಹೇಳಿದ್ದೇನು? title=
Insta Money Lending Apps

Illegal Lending Apps: ಜನಸಾಮಾನ್ಯರು ಅಕ್ರಮ ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್‌ನಿಂದ ಹೊರಬರಲು, ಕೇಂದ್ರ ಸರ್ಕಾರವು ಕಟ್ಟುನಿಟ್ಟಾದ ತಪಾಸಣೆಗೆ ನಿಬಂಧನೆಗಳನ್ನು ರೂಪಿಸುವಂತೆ ಗೂಗಲ್‌ಗೆ ಮನವಿ ಮಾಡಿದೆ. ಇಂತಹ ಅಕ್ರಮ ಆ್ಯಪ್‌ಗಳು ಭಾರತದಲ್ಲಿ ಕಾರ್ಯನಿರ್ವಹಿಸದಂತೆ ತಡೆಯಲು ಸರ್ಕಾರವು ಗೂಗಲ್‌ಗೆ ಕಡಿವಾಣ ಹಾಕುವಂತೆ ಸೂಚಿಸಿದೆ. ಗೂಗಲ್ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವ್ಯಾಪ್ತಿಗೆ ಬರದಿದ್ದರೂ, ಕಳೆದ ಕೆಲವು ತಿಂಗಳುಗಳಲ್ಲಿ, ಆರ್‌ಬಿಐ ಮತ್ತು ಭಾರತ ಸರ್ಕಾರವು ಕಟ್ಟುನಿಟ್ಟಾದ ನಿಬಂಧನೆಗಳನ್ನು ಮಾಡುವಂತೆ ಒತ್ತಾಯಿಸಿ ಹಲವಾರು ಬಾರಿ ತನ್ನ ಸಭೆಗಳಲ್ಲಿ ಗೂಗಲ್‌ಗೆ ಕರೆ ನೀಡಿದೆ. ಇದರಿಂದ ಅಂತಹ ಆಪ್‌ಗಳ ಕಾರ್ಯನಿರ್ವಹಿಸುವಿಕೆಯನ್ನು ತಡೆಗಟ್ಟಬಹುದು.

ಇಂತಹ ಅಕ್ರಮ ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್‌ಗಳು ಕೊವಿಡ್ ಸಾಂಕ್ರಾಮಿಕ ಸಮಯದಲ್ಲಿ ಸಾಕಷ್ಟು ಜನಪ್ರೀಯತೆಯನ್ನು ಗಳಿಸಿವೆ. ಅಕ್ರಮ ಸಾಲ ನೀಡುವ ಆಪ್‌ಗಳ ವಿರುದ್ಧ ತನಿಖೆ ನಡೆಸುವಂತೆ ಸರ್ಕಾರದ ವತಿಯಿಂದ ಆರ್‌ಬಿಐಗೆ ಸೂಚಿಸಲಾಗಿದೆ. ಈ ಅಕ್ರಮ ಡಿಜಿಟಲ್ ಲೆಂಡಿಂಗ್ ಅಪ್ಲಿಕೇಶನ್‌ಗಳು ಜನರಿಗೆ ಹೆಚ್ಚಿನ ಬಡ್ಡಿದರದಲ್ಲಿ ಸಾಲವನ್ನು ಒದಗಿಸುತ್ತವೆ. ಮತ್ತು ಸಕಾಲದಲ್ಲಿ ಸಾಲ ಮರುಪಾವತಿ ಮಾಡದವರಿಗೆ ಕಿರುಕುಳ ನೀಡುವುದರ ಜೊತೆಗೆ ಅಕ್ರಮ ಮಾರ್ಗ ಅನುಸರಿಸಿ ಬೆದರಿಕೆಯ ವಸೂಲಿ ಮಾಡುತ್ತಿವೆ.

ಇದನ್ನೂ ಓದಿ-Big News: ಮುಂದಿನ ಕಾಂಗ್ರೆಸ್ ಅಧ್ಯಕ್ಷ ಗಾಂಧಿ ಕುಟುಂಬ ಸದಸ್ಯನಾಗಿರುವುದಿಲ್ಲ! ಸೋನಿಯಾ ಘೋಷಣೆ!

Google ಕಳೆದ ವರ್ಷ ಹಣಕಾಸು ಸೇವೆಗಳ ಅಪ್ಲಿಕೇಶನ್‌ಗಳಿಗಾಗಿ ತನ್ನ Play Store ಡೆವಲಪರ್ ಪ್ರೋಗ್ರಾಂ ನೀತಿಯನ್ನು ಪರಿಷ್ಕರಿಸಿದೆ. ಸೆಪ್ಟೆಂಬರ್ 2021 ರಿಂದ ಜಾರಿಗೆ ಬರುವಂತೆ ಭಾರತದಲ್ಲಿ ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳಿಗೆ ಹೆಚ್ಚುವರಿ ಮಾಹಿತಿಯನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಭಾರತಕ್ಕೆ ಸಂಬಂಧಿಸಿದ 2,000 ಕ್ಕೂ ಹೆಚ್ಚು ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ.

ಇದನ್ನೂ ಓದಿ-CBI-ED ವಿರುದ್ಧ ಪ.ಬಂಗಾಳ ವಿಧಾನ ಸಭೆಯಲ್ಲಿ ಪ್ರಸ್ತಾಪ ಮಂಡನೆ, ಮಮತಾ ಬ್ಯಾನರ್ಜಿ ಹೇಳಿದ್ದೇನು?

ಆಪ್ ಸ್ಟೋರ್‌ನಲ್ಲಿರುವ ಎಲ್ಲಾ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ನಿಯಂತ್ರಿತ ಏಜೆನ್ಸಿಗಳು ಗುರುತಿಸಬೇಕು ಎಂದು RBI ಬಯಸುತ್ತಿದೆ. ವೆಬ್‌ಸೈಟ್‌ಗಳು ಮತ್ತು ಇತರ ಡೌನ್‌ಲೋಡ್ ವಿಧಾನಗಳಂತಹ ವಿತರಣಾ ಚಾನೆಲ್‌ಗಳ ಮೂಲಕ ಇಂತಹ ಅಪ್ಲಿಕೇಶನ್‌ಗಳ ಪ್ರಸರಣವನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವಂತೆ Google ಅನ್ನು ಕೋರಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News