Karnataka Govt DA Hike: ಇತ್ತೀಚೆಗಷ್ಟೇ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ (Modi Government ) ನೇತೃತ್ವದ ಸರ್ಕಾರ ತನ್ನ ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು(Dearness Relief) ಶೇ.4 ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿತ್ತು. ಕೇಂದ್ರದ ಘೋಷಣೆಯ ಬೆನ್ನಲ್ಲೇ ಇದೀಗ ವಿವಿಧ ರಾಜ್ಯಗಳ ರಾಜ್ಯ ಸರ್ಕಾರಗಳು ಕೂಡ ತನ್ನ ನೌಕರರ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸುತ್ತಿವೆ. ಇದರಿಂದ ಹೋಳಿ ಹಬ್ಬಕ್ಕು ಮುನ್ನವೇ ಸರ್ಕಾರಿ ನೌಕರರಿಗೆ ಭಾರಿ ಉಡುಗೊರೆ ಸಿಕ್ಕಂತಾಗಲಿದೆ. ಪ್ರಸ್ತುತ ರಾಜ್ಯ ಸರ್ಕಾರ (Karnataka Government) ಕೂಡ ತನ್ನ ಸರ್ಕಾರಿ ನೌಕರರ ತುಟ್ಟಿ ಭತ್ಯೆ (DA Hike)  ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರ ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ (Karnataka Government Employees Dearness Allowance Hike ) ನೀಡಿದ ಬಳಿಕ, ತುಟ್ಟಿಭತ್ಯೆಯಲ್ಲಿ ಶೇ. 4 ರಷ್ಟು ಹೆಚ್ಚಾದ ಬಳಿಕ, ರಾಜ್ಯ ಸರ್ಕಾರಿ ನೌಕರರು 42.5% ಡಿಎ ಪಡೆಯಲಿದ್ದಾರೆ. ಇಡುವೆರೆಗೆ ರಾಜ್ಯ ಸರ್ಕಾರ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ಶೇ. 38.75 ದರದಲ್ಲಿ ತುಟ್ಟಿಭತ್ಯೆ ನೀಡುತಿತ್ತು.  


COMMERCIAL BREAK
SCROLL TO CONTINUE READING

ರಾಜ್ಯ ಬೊಕ್ಕಸಕ್ಕೆ 1792 ಕೋಟಿ ಹೆಚ್ಚುವರಿ ಹೊರೆ
ಇದಲ್ಲದೇ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.46ರಿಂದ ಶೇ.50ಕ್ಕೆ ಹೆಚ್ಚಿಸಲಾಗುವುದು ಎನ್ನಲಾಗಿದೆ. ಈ ಹೆಚ್ಚಳದ ಬಳಿಕ  ಸರ್ಕಾರದ ಬೊಕ್ಕಸಕ್ಕೆ  ಪ್ರತಿ ವರ್ಷ 1792.71 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಮಂಗಳವಾರ ಬೆಳಗ್ಗೆ, ಅರುಣಾಚಲ ಪ್ರದೇಶ ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿತ್ತು. ಅಲ್ಲಿ ಸರ್ಕಾರ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಶೇ 4 ರಷ್ಟು ಹೆಚ್ಚಿಸಿದೆ. ಇದರಿಂದ ಅಲ್ಲಿನ ಸರ್ಕಾರಿ ನೌಕರರಿಗೆ ಶೇ 50 ರಷ್ಟು ತುಟ್ಟಿಭತ್ಯೆ ಸಿಗಲಿದೆ. ರಾಜ್ಯ ಸರ್ಕಾರ ನೀಡಿರುವ ಹೆಚ್ಚುವರಿ ಡಿಎ ಲಾಭ ಜನವರಿ 1, 2024 ರಿಂದ ಜಾರಿಗೆ ಬರಲಿದೆ.


ಇದನ್ನೂ ಓದಿ-March Deadline ಮಿಸ್ ಆಗೋದ್ರೋಳಗೆ ಈ ಕೆಲಸ ಮಾಡಿ, ಇಲ್ದಿದ್ರೆ!


‘ನೌಕರರ ಸಂತೋಷ ನಮಗೆ ಮುಖ್ಯ’
ರಾಜ್ಯ ಸರ್ಕಾರಿ ನೌಕರರ ಡಿಎ ಹೆಚ್ಚಳದ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ X ಮೇಲೆ ಬರೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddharamaiah) ಅವರು, ರಾಜ್ಯ ಸರ್ಕಾರಿ ನೌಕರರಿಗೆ ಡಿಎಯನ್ನು 38.75% ರಿಂದ 42.5% ಕ್ಕೆ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದ ವೇತನ ಶ್ರೇಣಿಯನ್ನು ಪಡೆಯುವ ನೌಕರರು ಇದೀಗ  ಡಿಎಯನ್ನು 46% ರಿಂದ 50% ಕ್ಕೆ ಪಡೆಯಲಿದ್ದಾರೆ ಎಂದಿದ್ದಾರೆ. ಈ ಬದಲಾವಣೆಯು ನೌಕರರ ಮೇಲಿನ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 1792.71 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಆದರೆ ಇದಕ್ಕೂ ಮಿಗಿಲಾಗಿ 'ನಮಗೆ ನಮ್ಮ ಉದ್ಯೋಗಿಗಳ ಸಂತೋಷ ಮುಖ್ಯ' ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-PM Surya Ghar Scheme: 300 ಯೂನಿಟ್ ಉಚಿತ ವಿದ್ಯುತ್ ಬಳಿಕ, ಮೋದಿ ಸರ್ಕಾರದ ಮುಂದಿನ ಮಹತ್ವದ ಪ್ಲಾನ್ ಏನು ಗೊತ್ತಾ?


ಕೇಂದ್ರ ಸರ್ಕಾರದಂತೆ  ರಾಜ್ಯ ಸರ್ಕಾರಿ ನೌಕರರಿಗೂ ಮಾರ್ಚ್ ತಿಂಗಳ ವೇತನದ ಜತೆಗೆ ಎರಡು ತಿಂಗಳ ಬಾಕಿ ಡಿಎ ಸಿಗಲಿದೆ ಪ್ರಸ್ತುತ ಬಹುತೇಕ ರಾಜ್ಯಗಳಲ್ಲಿ ಡಿಎ ಶೇ 50ಕ್ಕೆ ಏರಿಕೆಯಾಗಿದೆ. ಅರುಣಾಚಲ ಸರ್ಕಾರದ ನಿರ್ಧಾರದಿಂದ 68,818 ಉದ್ಯೋಗಿಗಳು ಮತ್ತು 33,200 ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಇದರಿಂದ ರಾಜ್ಯ ಸರ್ಕಾರ ವಾರ್ಷಿಕ 124.20 ಕೋಟಿ ರೂ.ಹೆಚ್ಚುವರಿ ಹಣ ವೆಚ್ಚಮಾಡಲಿದೆ.  ಈ ಹಿಂದೆ ಕೇಂದ್ರ ಸರ್ಕಾರ ಮತ್ತು ಯುಪಿಯ ಯೋಗಿ ಸರ್ಕಾರ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿದ್ದವು. ಉತ್ತರ ಪ್ರದೇಶದಲ್ಲೂ ತುಟ್ಟಿ ಭತ್ಯೆ ಶೇ.4 ರಷ್ಟು ಹೆಚ್ಚಾಗಿ, ಶೇ.50ಕ್ಕೆ ತಲುಪಿದೆ. ಸಿಎಂ ಯೋಗಿ ನಿರ್ಧಾರದಿಂದ ರಾಜ್ಯದ 28 ಲಕ್ಷ ನೌಕರರು ಮತ್ತು ಪಿಂಚಣಿದಾರರು ಡಿಎ ಹೆಚ್ಚಳದ ಲಾಭ ಸಿಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ