Gold Price Today: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ .! 4,235 ರೂ. ಅಗ್ಗವಾಯಿತು ಬಂಗಾರ
ಗಮನಾರ್ಹವೆಂದರೆ ಕೇವಲ 15 ದಿನಗಳಲ್ಲಿ ಚಿನ್ನದ ಬೆಲೆ 4,235 ರೂ.ಯಷ್ಟು ಇಳಿಕೆಯಾಗಿದೆ. ಮಾರ್ಚ್ ಎರಡನೇ ವಾರದಲ್ಲಿ, MCX ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,600 ರೂ.ಗೆ ತಲುಪಿದೆ .
ಬೆಂಗಳೂರು : Gold Price Today: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತದ ನಡುವೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಇಳಿಕೆ ಕಾಣುತ್ತಿದೆ (Gold price). ಮಲ್ಟಿಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ( MCX) ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಪ್ರಸ್ತುತ, MCX ನಲ್ಲಿ ಚಿನ್ನದ ಫ್ಯೂಚರ್ ಟ್ರೇಡಿಂಗ್ ನಲ್ಲಿ 14 ರೂ ಇಳಿಕೆ ಕಂಡಿದ್ದು, 10 ಗ್ರಾಂ ಚಿನ್ನದ ಬೆಲೆ 51,365 ಯಾಗಿದೆ. ಬೆಳ್ಳಿಯ ಬೆಲೆಯು ಎಂಸಿಎಕ್ಸ್‌ನಲ್ಲಿ 78 ರೂಪಾಯಿಗಳಷ್ಟಇಳಿಕೆಯಾದ್ದ ುಫ್ಯೂಚರ್ ಟ್ರೇಡಿಂಗ್ ನಲ್ಲಿ , ಪ್ರತಿ ಕೆಜಿ ಬೆಳ್ಳಿಗೆ 67,614 ರೂಪಾಯಿಯಷ್ಟಾಗಿದೆ.
ಗಮನಾರ್ಹವೆಂದರೆ ಕೇವಲ 15 ದಿನಗಳಲ್ಲಿ ಚಿನ್ನದ ಬೆಲೆ 4,235 ರೂ.ಯಷ್ಟು ಇಳಿಕೆಯಾಗಿದೆ (Gold price today) . ಮಾರ್ಚ್ ಎರಡನೇ ವಾರದಲ್ಲಿ, MCX ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,600 ರೂ.ಗೆ ತಲುಪಿದೆ .
ಇದನ್ನೂ ಓದಿ : Bike: ಇದು ಬೈಕ್ ಅಲ್ಲ ದ್ವಿಚಕ್ರ ಕಾರ್!
ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆ :
ಭಾರತೀಯ ಫ್ಯೂಚರ್ ಟ್ರೇಡಿಂಗ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ (Gold price). ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನವು 0.031 ಪ್ರತಿಶತದಷ್ಟು ಏರಿಕೆ ಕಂಡಿದ್ದು, 1,922.28 ಡಾಲರ್ ನಂತೆ ಮಾರಾಟವಾಗುತ್ತಿದೆ. ಅದೇ ಸಮಯದಲ್ಲಿ, ಬೆಳ್ಳಿಯ ಬೆಲೆಗಳು 0.16 ಪ್ರತಿಶತದಷ್ಟು ಹೆಚ್ಚಾಗಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ರಷ್ಯಾ ಮತ್ತು ಉಕ್ರೇನ್ (Russia Ukraine war) ನಡುವೆ ನಡೆಯುತ್ತಿರುವ ಯುದ್ಧದ ಅಂತ್ಯದ ನಂತರ, ಚಿನ್ನದ ಬೆಲೆಗಳು ತೀವ್ರವಾಗಿ ಕುಸಿಯಬಹುದು. ರಷ್ಯಾ (Russia)ಕೂಡ ದೊಡ್ಡ ಪ್ರಮಾಣದ ಚಿನ್ನವನ್ನು ಹೊಂದಿದ್ದು, ಅದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತಯಾರಿ ನಡೆಸುತ್ತಿದೆ. ಈ ಚಿನ್ನದ ದಾಸ್ತಾನು ಮಾರುಕಟ್ಟೆಗೆ ಬಂದರೆ, ಮಾರುಕಟ್ಟೆಯಲ್ಲಿ ಅದರ ಪೂರೈಕೆ ಹೆಚ್ಚಾಗುತ್ತದೆ ಮತ್ತು ಬೆಲೆಯಲ್ಲಿ ದೊಡ್ಡ ಮಟ್ಟದ ಕುಸಿತ ಕಂಡು ಬರಬಹುದು.
ಇದನ್ನೂ ಓದಿ : Indian Railways: ಚಾರ್ಟ್ ಸಿದ್ಧಪಡಿಸಿದ ನಂತರವೂ ಕ್ಯಾನ್ಸಲ್ ಮಾಡಿದ ಟಿಕೆಟ್‌ಗಳಿಗೆ ಆಗಲಿದೆ ರೀ ಫಂಡ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.