LIC Update - LIC ಗ್ರಾಹಕರಿಗೆ ಒಂದು ಉಪಯುಕ್ತ ಮಾಹಿತಿ ಪ್ರಕಟವಾಗಿದೆ. ಭಾರತೀಯ ಜೀವ ವಿಮಾ ನಿಗಮ (Life Insurance Coroporation Of India) ತನ್ನ ಎರಡು ವಿಮಾ ಪಾಲಿಸಿಗಳಲ್ಲಿ ಬದಲಾವಣೆ ಮಾಡಿದೆ. LIC ಜೀವನ್ ಅಕ್ಷಯ್ VII (Jeevan Akshay VII) ಮತ್ತು ಹೊಸ ಜೀವನ ಶಾಂತಿ (New Jeevan Shanti) ಪಾಲಸಿಗಳಲ್ಲಿ ತಿದ್ದುಪಡಿಗಳನ್ನು ಪ್ರಕಟಿಸಿದೆ. ವಾಸ್ತವದಲ್ಲಿ, LIC ತನ್ನ ವರ್ಷಾಶನ ಯೋಜನೆಗಳ ವರ್ಷಾಶನ ದರಗಳನ್ನು ಬದಲಾಯಿಸಿದೆ - ಜೀವನ್ ಅಕ್ಷಯ್ VII (ಯೋಜನೆ 857) ಮತ್ತು LIC ಯ ಹೊಸ ಜೀವನ್ ಶಾಂತಿ (ಯೋಜನೆ 858) ವಿಮಾ ಯೋಜನೆಗಳ ಪರಿಷ್ಕೃತ ವರ್ಷಾಶನ ದರಗಳು ಫೆಬ್ರವರಿ 1 ರಿಂದ ಮಾರಾಟಕ್ಕೆ ಲಭ್ಯವಿರುತ್ತವೆ.


COMMERCIAL BREAK
SCROLL TO CONTINUE READING

ಮಾಹಿತಿ ನೀಡಿದ LIC
LIC ಪ್ರಕಾರ, ಹೊಸ ಜೀವನ್ ಶಾಂತಿಯ ಎರಡೂ ವರ್ಷಾಶನ ಆಯ್ಕೆಗಳ ಅಡಿಯಲ್ಲಿ ವರ್ಷಾಶನ ಮೊತ್ತವನ್ನು LIC ಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಕ್ಯಾಲ್ಕುಲೇಟರ್ ಮತ್ತು ವಿವಿಧ LIC ಅಪ್ಲಿಕೇಶನ್‌ಗಳ ಮೂಲಕ ಲೆಕ್ಕಹಾಕಬಹುದು. ಈ ವಿಮಾ ಯೋಜನೆಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿದೆ. ಗ್ರಾಹಕರು LIC ಇಂಡಿಯಾದ ವೆಬ್‌ಸೈಟ್‌ಗೆ  ಭೇಟಿ ನೀಡುವ ಮೂಲಕ ಅಥವಾ ಬ್ರಾಂಚ್ ಚಾನೆಲ್ ಗೆ ಭೇಟಿ ನೀಡುವ ಮೂಲಕ ಆಫ್‌ಲೈನ್ ಯೋಜನೆಗಳನ್ನು ಖರೀದಿಸಬಹುದು.


LIC ಒದಗಿಸಿದ ಮಾಹಿತಿಯ ಪ್ರಕಾರ, ವರ್ಷಾಶನ ದರಗಳಲ್ಲಿನ ಪರಿಷ್ಕರಣೆಯ ಹೊರತಾಗಿ, LIC ಯ ಜೀವನ್ ಅಕ್ಷಯ್ VII (ಯೋಜನೆ ಸಂಖ್ಯೆ. 857) ಅನ್ನು ಹೊಸ ವಿತರಣಾ ಚಾನಲ್ ಜೊತೆಗೆ ಅಸ್ತಿತ್ವದಲ್ಲಿರುವ ಇತರ ವಿತರಣಾ ಚಾನಲ್‌ ಆಗಿರುವ ಸಾಮಾನ್ಯ ಸಾರ್ವಜನಿಕ ಸೇವಾ ಕೇಂದ್ರದಿಂದ (CPSC-SPV)  ಖರೀದಿಸಬಹುದು.


ಹೊಸ ಜೀವನ ಅಕ್ಷಯ್ ಪಾಲಸಿ (Business News)
ಹೊಸದಾಗಿ ಪರಿಚಯಿಸಲಾದ ಜೀವನ್ ಅಕ್ಷಯ್ VII ಯೋಜನೆಯು ಇದೀಗ LIC ಯ ತಕ್ಷಣದ ವರ್ಷಾಶನ ಯೋಜನೆಯಾಗಿದೆ (Immediate Annuity Plan) . ಅದೇ ವೇಳೆ, ಜೀವನ್ ಶಾಂತಿಯು ಮುಂದೂಡಲ್ಪಟ್ಟ ವರ್ಷಾಶನ (Deferred annuity plan) ಯೋಜನೆಯಾಗಿದೆ. ಇದಕ್ಕಾಗಿ, ಜೀವನ್ ಅಕ್ಷಯ್ ಜೊತೆಗಿನ ಯಾವುದೇ ರೀತಿಯ ನಕಲು ತಪ್ಪಿಸಲು ಜೀವನ್ ಶಾಂತಿ ಯೋಜನೆಯನ್ನೂ ಮಾರ್ಪಡಿಸಲಾಗಿದೆ.


ಇದನ್ನೂ ಓದಿ-Viral Video: ಪೇಂಟಿಂಗ್ ಮಾಡುವ ಆನೆಯನ್ನು ಎಲ್ಲಾದರೂ ನೋಡಿರುವಿರಾ? ಇಲ್ಲಿದೆ ನೋಡಿ


ಎಲ್‌ಐಸಿಯ ಜೀವನ್ ಅಕ್ಷಯ್ ಪಾಲಿಸಿಯಲ್ಲಿ, ಒಮ್ಮೆ ಪ್ರೀಮಿಯಂ ಪಾವತಿಸುವ ಮೂಲಕ ನೀವು ಪ್ರತಿ ತಿಂಗಳು 20 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು. LIC ಯ ಜೀವನ್ ಅಕ್ಷಯ್ ಯೋಜನೆಯಲ್ಲಿ, ಒಂದು ದೊಡ್ಡ ಮೊತ್ತದ ಪಾವತಿಯ ಮೇಲೆ, ಹೂಡಿಕೆದಾರರು ಲಭ್ಯವಿರುವ 10 ವರ್ಷಾಶನ ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಲು ಫ್ಲೆಕ್ಸಿಬಿಲಿಟಿ ಹೊಂದಿರುತ್ತಾರೆ. ಅಂದರೆ, ಜೀವನ್ ಶಾಂತಿ ಬದಲಿಗೆ, A to J ಆಯ್ಕೆಗಳು ಎಲ್ಐಸಿಯ ಜೀವನ್ ಅಕ್ಷಯ್ ಯೋಜನೆಯಲ್ಲಿ ಮಾತ್ರ ಲಭ್ಯವಿರಲಿವೆ.


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.34ಕ್ಕೆ ಏರಿಕೆಯಾಗುವುದು ಖಚಿತ!


ಹೊಸ ಜೀವನ ಶಾಂತಿ ಸ್ಕೀಮ್ ನಲ್ಲೇನಿದೆ? (LIC Jeevan Shanti Scheme)
ಹೊಸ ಜೀವನ್ ಶಾಂತಿ ಪಾಲಿಸಿಯು ಎಲ್ಐಸಿಯ ಹಳೆಯ ಯೋಜನೆಯಾದ ಜೀವನ್ ಅಕ್ಷಯ್ ಯೋಜನೆಯನ್ನು ಹೋಲುತ್ತದೆ. ಜೀವನ್ ಶಾಂತಿ ಪಾಲಸಿಯಲ್ಲಿ ನಿಮಗೆ ಎರಡು ಆಯ್ಕೆಗಳಿವೆ. ಮೊದಲನೆಯದು ತಕ್ಷಣದ ವರ್ಷಾಶನ ಮತ್ತು ಎರಡನೆಯದು ಮುಂದೂಡಲ್ಪಟ್ಟ ವರ್ಷಾಶನ. ಇದು ಒಂದೇ ಪ್ರೀಮಿಯಂ ಯೋಜನೆಯಾಗಿದೆ. ಮೊದಲ ಯೋಜನೆ  ಅಂದರೆ ತಕ್ಷಣದ ವರ್ಷಾಶನದ ಅಡಿಯಲ್ಲಿ, ಪಾಲಿಸಿಯನ್ನು ತೆಗೆದುಕೊಂಡ ತಕ್ಷಣ ಪಿಂಚಣಿ ಸೌಲಭ್ಯವು ಲಭ್ಯವಿರುತ್ತದೆ. ಮತ್ತೊಂದೆಡೆ, ಮುಂದೂಡಲ್ಪಟ್ಟ ವರ್ಷಾಶನದ ಆಯ್ಕೆಯಲ್ಲಿ, ಪಾಲಿಸಿಯನ್ನು ತೆಗೆದುಕೊಂಡ 5, 10, 15 ಅಥವಾ 20 ವರ್ಷಗಳ ನಂತರ ಪಿಂಚಣಿ ಸೌಲಭ್ಯ ಲಭ್ಯವಿರುತ್ತದೆ. ಇಲ್ಲಿ ಮಹತ್ವದ ವಿಷಯವೆಂದರೆ ನೀವು ಬಯಸಿದರೆ, ನಿಮ್ಮ ಪಿಂಚಣಿಯನ್ನು ನೀವು ತಕ್ಷಣವೇ ಪ್ರಾರಂಭಿಸಬಹುದು.


ಇದನ್ನೂ ಓದಿ-Viral Trend: ಇನ್ಸ್ಟಾಗ್ರಾಮ್ ನಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದ 'That's Not My Name'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.