ನವದೆಹಲಿ: LPG Gas Cylinder Price Today: ಎಲ್‌ಪಿಜಿ ಸಿಲಿಂಡರ್ (LPG) ಬೆಲೆ ಮತ್ತೆ ಹೆಚ್ಚಾಗಿದೆ. ಐಒಸಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಫೆಬ್ರವರಿಯಲ್ಲಿ ಮೂರನೇ ಬಾರಿಗೆ ಹೆಚ್ಚಿಸಿದೆ. ಈ ಮೊದಲು ಫೆಬ್ರವರಿ 4 ಮತ್ತು ಫೆಬ್ರವರಿ 14 ರಂದು ಬೆಲೆಗಳನ್ನು ಹೆಚ್ಚಿಸಲಾಗಿತ್ತು.


COMMERCIAL BREAK
SCROLL TO CONTINUE READING

ಫೆಬ್ರವರಿಯಲ್ಲಿ ಮೂರನೇ ಬಾರಿಗೆ ಬೆಲೆಗಳು ಹೆಚ್ಚಾಗಿದೆ :
ಡಿಸೆಂಬರ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ (LPG Cylinder) ಬೆಲೆಯನ್ನು ಎರಡು ಬಾರಿ ಹೆಚ್ಚಿಸಲಾಯಿತು. ಡಿಸೆಂಬರ್ 1 ರಂದು ಅದರ ದರವನ್ನು 594 ರೂ.ಗಳಿಂದ 644 ರೂ.ಗೆ ಹೆಚ್ಚಿಸಲಾಯಿತು ಮತ್ತು ನಂತರ ಡಿಸೆಂಬರ್ 15 ರಂದು ಮತ್ತೆ ಅದರ ಬೆಲೆಯನ್ನು 694 ರೂ.ಗೆ ಹೆಚ್ಚಿಸಲಾಯಿತು. ಅಂದರೆ, ಒಂದು ತಿಂಗಳಲ್ಲಿ 100 ರೂಪಾಯಿಗಳನ್ನು ಹೆಚ್ಚಿಸಲಾಗಿದೆ. ಆದರೆ ಜನವರಿಯಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿಲ್ಲ. ಜನವರಿಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ (14.2 ಕೆಜಿ) ಬೆಲೆ 694 ರೂ. ಆಗಿತ್ತು. ಫೆಬ್ರವರಿ ಆರಂಭದಲ್ಲಿ, ದೇಶೀಯ ಅನಿಲದ ಬೆಲೆಯನ್ನು ಹೆಚ್ಚಿಸಲಾಗಿಲ್ಲ ಮತ್ತು ಅದರ ಹಳೆಯ ಬೆಲೆ ಅಂದರೆ 694 ರೂ.ಗಳಲ್ಲಿ ಮಾತ್ರ ಲಭ್ಯವಾಗುತ್ತಿದೆ.


ಇದನ್ನೂ ಓದಿ - LPG Subsidy: LPG ಮೇಲಲ್ಲ ಇದರ ಮೇಲೆ Subsidy ನೀಡಬೇಕು, ಗಡ್ಕರಿ ಉವಾಚ


ಫೆಬ್ರವರಿ 1 ರಂದು ಬೆಲೆಗಳಲ್ಲಿ ಯಾವುದೇ ಹೆಚ್ಚಳ ಕಂಡುಬಂದಿರಲಿಲ್ಲ, ಆದರೆ ಫೆಬ್ರವರಿ 4 ರಂದು ಅದರ ದರವನ್ನು ಮತ್ತೆ 719 ರೂ.ಗಳಿಗೆ ಹೆಚ್ಚಿಸಲಾಯಿತು. ಅಂದರೆ, 25 ರೂಪಾಯಿಗಳ ಹೆಚ್ಚಳ ಕಂಡುಬಂದಿದೆ. ಮತ್ತು ಮತ್ತೊಮ್ಮೆ, ಎಲ್‌ಪಿಜಿಯ (LPG) ಬೆಲೆಯನ್ನು 10 ದಿನಗಳಲ್ಲಿ 50 ರೂ.ಗೆ ಹೆಚ್ಚಿಸಲಾಗಿದೆ. ಇಂದು ಮತ್ತೊಮ್ಮೆ ಅದರ ಬೆಲೆಯನ್ನು 769 ರೂ.ಗಳಿಂದ 794 ರೂ.ಗೆ ಹೆಚ್ಚಿಸಲಾಗಿದೆ.


ಇಂದಿನಿಂದ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು 794 ರೂ.ಗೆ ಹೆಚ್ಚಿಸಲಾಗಿದೆ. ಅಂದರೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಫೆಬ್ರವರಿಯಲ್ಲಿ 100 ರೂ. ಹೆಚ್ಚಳವಾಗಿದೆ. ಭಾರತದಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟುತ್ತಿರುವ ಸಮಯದಲ್ಲಿ ಎಲ್‌ಪಿಜಿ ಬೆಲೆ ಹೆಚ್ಚಾಗಿದೆ.


ಇದನ್ನೂ ಓದಿ - Ujjwala Yojana : ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ.! ಗ್ಯಾಸ್ ಜೊತೆಗೆ ಸಿಗುತ್ತೆ 1600 ರೂ. ಕ್ಯಾಶ್


ಈ ರೀತಿಯ ಎಲ್‌ಪಿಜಿ ಬೆಲೆಯನ್ನು ಪರಿಶೀಲಿಸಿ :
ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪರಿಶೀಲಿಸಲು, ನೀವು ಸರ್ಕಾರಿ ತೈಲ ಕಂಪನಿಯ ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ. ಇಲ್ಲಿನ ಕಂಪನಿಗಳು ಪ್ರತಿ ತಿಂಗಳು ಹೊಸ ದರಗಳನ್ನು ನೀಡುತ್ತವೆ. https://iocl.com/Products/IndaneGas.aspx ಈ ಲಿಂಕ್‌ನಲ್ಲಿ, ನಿಮ್ಮ ನಗರ ಅನಿಲ ಸಿಲಿಂಡರ್‌ನ ಬೆಲೆಯನ್ನು ನೀವು ಪರಿಶೀಲಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.