LPG Subsidy: LPG ಮೇಲಲ್ಲ ಇದರ ಮೇಲೆ Subsidy ನೀಡಬೇಕು, ಗಡ್ಕರಿ ಉವಾಚ

LPG Subsidy: Petrol ಹಾಗೂ Dieselಗಳ ಮೇಲೆ ಜನರ ಅವಲಂಬನೆಯನ್ನು ಕಡಿಮೆ ಮಾಡಲು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ (Transport Minister Nitin Gadkari)ನಿತೀನ್ ಗಡ್ಕರಿ ಎಲೆಕ್ಟ್ರಿಕ್ ವೆಹಿಕಲ್ಸ್ (E-Vehicles)ಗಳನ್ನು ಹೆಚ್ಚಾಗಿ ಉಪಯೋಗಿಸಲು ಒತ್ತು ನೀಡಿದ್ದಾರೆ.

Written by - Nitin Tabib | Last Updated : Feb 19, 2021, 05:45 PM IST
  • 'ಸರ್ಕಾರಿ ಅಧಿಕಾರಿಗಳು ಕೇವಲ ಇ-ವೆಹಿಕಲ್ಸ್ ಗಳನ್ನು ಬಳಸಬೇಕು' ಎಂದ ಕೇಂದ್ರ ಸಚಿವ ನಿತೀನ್ ಗಡ್ಕರಿ
  • 'ಇಂಧನ ಸಚಿವಾಲಯದಿಂದ ಆರಂಭಿಸಿ, ಮತ್ತೆ ಮುಂದಕ್ಕೆ ಸಾಗೋಣ'ಎಂದು ಸಲಹೆ ನೀಡಿದ್ದಾರೆ.
  • ಇದರಿಂದ 'ಪ್ರತಿ ತಿಂಗಳು 30 ಕೋಟಿ ರೂ.ಉಳಿತಾಯವಾಗುತ್ತದೆ' ಎಂದು ಅವರು ಹೇಳಿದ್ದಾರೆ.
LPG Subsidy: LPG ಮೇಲಲ್ಲ ಇದರ ಮೇಲೆ Subsidy ನೀಡಬೇಕು, ಗಡ್ಕರಿ ಉವಾಚ title=
LPG Subsidy

ನವದೆಹಲಿ: LPG Subsidy - ಪೆಟ್ರೋಲ್-ಡೀಸೆಲ್ (Petrol-Diesel) ಮೇಲಿನ ದೇಶದ ಅವಲಂಬನೆಯನ್ನು ಕಡಿಮೆ ಮಾಡುವ ಸಲುವಾಗಿ ರಸ್ತೆ ಮತ್ತು ಸಾರಿಗೆ ಸಚಿವ (Transport Minister Nitin Gadkari) ನಿತಿನ್ ಗಡ್ಕರಿ ಎಲೆಕ್ಟ್ರಿಕ್ ವಾಹನಗಳನ್ನು  (E-Vehicles) ಹೆಚ್ಚು ಬಳಸಬೇಕೆಂದು ಸಲಹೆ ನೀಡಿದ್ದಾರೆ. ಜನರು ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಪ್ರಾರಂಭಿಸುವ ಮೊದಲು, ಸರ್ಕಾರಿ ಇಲಾಖೆಗಳಲ್ಲಿ ಇ-ವಾಹನಗಳ ಬಳಕೆ ಆರಂಭವಾಗಬೇಕು ಎಂದು ಅವರು ಒತ್ತಾಯಿಸಿದರು. ಅಲ್ಲದೆ, ಮುಂಬರುವ ಸಮಯದಲ್ಲಿ, LPG  ಗ್ಯಾಸ್ ಸಿಲಿಂಡರ್ಗಳ ಬದಲಿಗೆ, ಇಂಡಕ್ಷನ್ ಅಡುಗೆಗೆ ಸರ್ಕಾರ ನಿಮಗೆ ಸಹಾಯಧನವನ್ನು ನೀಡಬಹುದು ಎಂದಿದ್ದು. ಇದನ್ನು ಪರಿಗಣಿಸುವಂತೆ ಅವರು ಸರ್ಕಾರವನ್ನು ಕೋರಿದ್ದಾರೆ.

'ಸರ್ಕಾರಿ ಅಧಿಕಾರಿಗಳು ಕೇವಲ ಇ-ವೆಹಿಕಲ್ಸ್ ಗಳನ್ನು ಬಳಸಬೇಕು'
ಈ ಕುರಿತು ಪ್ರಸ್ತಾನವೇ ನೀಡಿರುವ ನಿತೀನ್ ಗಡ್ಕರಿ, ಎಲ್ಲ ಸಚಿವಾಲಯಗಳು ಹಾಗೂ ವಿಭಾಗಗಳ ಸರ್ಕಾರಿ ಅಧಿಕಾರಿಗಳಿಗೆ ಇ-ವೆಹಿಕಲ್ ಗಳ ಬಳಕೆ ಕಡ್ಡಾಯಗೊಳಿಸಬೇಕು ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಮನೆಯಲ್ಲಿ ಬಳಕೆಯಾಗುವ ಅಡುಗೆ ಅನಿಲಕ್ಕೆ ನೀಡಲಾಗುವ ಸಬ್ಸಿಡಿಯನ್ನು ಇಲೆಕ್ಟ್ರಿಕ್ ಕುಕ್ಕಿಂಗ್ ಅಪ್ಲೈನ್ಸೆಸ್ ಖರೀದಿಯ ಮೇಲೆ ನೀಡಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

'LPG ಜಾಗದಲ್ಲಿ ಇಲೆಕ್ಟ್ರಿಕ್ ಕುಕ್ಕಿಂಗ್ ಗೆ ಸಬ್ಸಿಡಿ ಸಿಗಬೇಕು'
Go Electric ಅಭಿಯಾನದ ಅಡಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಎಲೆಕ್ಟ್ರಿಕ್ ಅಡುಗೆ ಉಪಕರಣಗಳನ್ನು ಖರೀದಿಸಲು ನಾವು ಯಾಕೆ ಸಬ್ಸಿಡಿ ನೀಡಬಾರದು. ಅಡುಗೆ ಅನಿಲಕ್ಕೆ ನಾವು ಸಹಾಯಧನ ನೀಡುತ್ತಿದ್ದೇವೆ' ಎಂದಿದ್ದಾರೆ. ಅಡುಗೆ ಅನಿಲ ಆಮದಿನ ಮೇಲೆ ದೇಶದ ಅವಲಂಬನೆ ಕಡಿಮೆಯಾಗಬೇಕು ಮತ್ತು  ಹಾಗೆಯೇ ವಿದ್ಯುತ್ ಅಡುಗೆಯಿಂದ ಮಾಲಿನ್ಯದ ಅಪಾಯವೂ ಕಡಿಮೆಯಾಗುತ್ತದೆ ಎಂಬುದು ನಿತೀನ್ ಗಡ್ಕರಿ ಅವರ ಸಲಹೆಯ ಹಿಂದಿನ ಉದ್ದೇಶವಾಗಿದೆ.

ಇದನ್ನೂ ಓದಿ- ಈ ಸಾಲಿನಲ್ಲಿ ರಾಜ್ಯಕ್ಕೆ 2000 ಕಿ.ಮೀ.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ತಾತ್ವಿಕ ಒಪ್ಪಿಗೆ'

'ಇಂಧನ ಸಚಿವಾಲಯದಿಂದ ಆರಂಭಿಸಿ, ಮತ್ತೆ ಮುಂದಕ್ಕೆ ಸಾಗೋಣ'
ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ವೆಚ್ಚದಿಂದ ಸಾರ್ವಜನಿಕರು ತೊಂದರೆಗೀಡಾಗಿದ್ದಾರೆ, ಅದರ ಹೊರೆ ಸರ್ಕಾರದ ಮೇಲೂ ಬೀಳುತ್ತಿದೆ. ಆದ್ದರಿಂದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಗಡ್ಕರಿ (Nitin Gadkari) ಸೂಚಿಸಿದ್ದಾರೆ. ತಮ್ಮ ಇಲಾಖೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವಂತೆ ಅವರು ಇಂಧನ ಸಚಿವ ಆರ್.ಕೆ.ಸಿಂಗ್ ಅವರಿಗೆ ಮನವಿ ಮಾಡಿದರು, ನಂತರ ಅದನ್ನು ಇತರ ಇಲಾಖೆಗಳಿಗೂ ಕೂಡ ಮುಂದುವರೆಸಬೇಕು ಎಂದು ಗಡ್ಕರಿ ಹೇಳಿದ್ದಾರೆ .

ಇದನ್ನೂ ಓದಿ-ಉತ್ತರ ಕರ್ನಾಟಕದ ಮೊಟ್ಟ ಮೊದಲ ಅತ್ಯಾಧುನಿಕ ಫ್ಲೈಓವರ್ ಗೆ ಶಿಲಾನ್ಯಾಸ

'ಪ್ರತಿ ತಿಂಗಳು 30 ಕೋಟಿ ರೂ.ಉಳಿತಾಯವಾಗುತ್ತದೆ'
ಕೇವಲ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ 10 ಸಾವಿರ ಇಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಪ್ರತಿತಿಂಗಳು ರೂ.30 ಕೋಟಿ ಉಳಿತಾಯವಾಗಲಿದೆ ಎಂದು ಅವರು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಇಂಧನ ಸಚಿವ ಆರ್. ಕೆ. ಸಿಂಗ್ ಅವರು  ಫ್ಯುಯೆಲ್ ಸೆಲ್ ಬಸ್ ಸರ್ವಿಸ್ ಆರಂಭಿಸುವುದಾಗಿ ಘೋಷಣೆ ಕೂಡ ಮಾಡಿದ್ದಾರೆ.  ಇದು ದೆಹಲಿ ಯಿಂದ ಆಗ್ರಾ ಹಾಗೂ ದೆಹಲಿಯಿಂದ ಜೈಪುರ್ ಮಧ್ಯೆ ಸಂಚರಿಸಲಿದೆ. ಆದರೆ ಇದುವರೆಗೆ ಈ ಸೇವೆ ಆರಂಭದ ದಿನಾಂಕ ಘೋಶಿಸಲಾಗಿಲ್ಲ. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ.101 ದಾಟಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ.90 ಆಗಿದೆ. ಕಳೆದ ಸುಮಾರು 11 ದಿನಗಳಿಂದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ.

ಇದನ್ನೂ ಓದಿ-Petrol-Diesel ಬಗ್ಗೆ ಮಹತ್ವದ ಸೂಚನೆ ನೀಡಿದ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News