Address Proof ಇಲ್ಲದೆಯೂ ಗ್ಯಾಸ್ ಸಿಲಿಂಡರ್ ಖರೀದಿಸಬಹುದು

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್‌ನ 5 ಕೆಜಿ ಸಣ್ಣ ಗ್ಯಾಸ್ ಸಿಲಿಂಡರ್ ಆರ್ಥಿಕವಾಗಿ ದುರ್ಬಲ ಜನರ ಬಜೆಟ್‌ಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ರಾಜಧಾನಿ ದೆಹಲಿಯಲ್ಲಿ ಇದರ ಬೆಲೆ ಕೇವಲ 257 ರೂಪಾಯಿ.

Written by - Yashaswini V | Last Updated : Jan 5, 2021, 09:43 PM IST
  • ಐಒಸಿ ಸಣ್ಣ ಗ್ಯಾಸ್ ಸಿಲಿಂಡರ್ ಅನ್ನು 2020 ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿತು
  • ಇದರಿಂದಾಗಿ ಆರ್ಥಿಕವಾಗಿ ದುರ್ಬಲ ಜನರಿಗೆ ಅನುಕೂಲವಾಗಿದೆ
  • ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನ್ನು 5 ರೀತಿಯಲ್ಲಿ ಬುಕ್ ಮಾಡಬಹುದು
Address Proof ಇಲ್ಲದೆಯೂ ಗ್ಯಾಸ್ ಸಿಲಿಂಡರ್ ಖರೀದಿಸಬಹುದು title=
Small FTL Cylinder (File Photo)

ನವದೆಹಲಿ : ಇತ್ತೀಚಿಗೆ ದೇಶದ ಅತಿದೊಡ್ಡ ತೈಲ ಮಾರುಕಟ್ಟೆ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಜನಸಾಮಾನ್ಯರಿಗೆ ದೊಡ್ಡ ಪರಿಹಾರ ನೀಡಿದೆ. ಐಒಸಿಯ 5 ಕೆಜಿ ಸಣ್ಣ ಗ್ಯಾಸ್ ಸಿಲಿಂಡರ್ (Small FTL Cylinder) ಅನ್ನು ಈಗ ವಿಳಾಸ ಪುರಾವೆ ಇಲ್ಲದೆ ಖರೀದಿಸಬಹುದು. 

ಗುರುತಿನ ಚೀಟಿ ತೋರಿಸಿ ಸಿಲಿಂಡರ್ ಖರೀದಿಸಿ (Purchase Cylindeby showing identity card) :
ಜನರು ಈಗ ತಮ್ಮ ವಿಳಾಸ ಪುರಾವೆ  (Address Proof) ಬದಲಿಗೆ ತಮ್ಮ ಗುರುತಿನ ಚೀಟಿಗಳನ್ನು ತೋರಿಸುವುದರ ಮೂಲಕ ಸಣ್ಣ ಗ್ಯಾಸ್ ಸಿಲಿಂಡರ್‌ಗಳನ್ನು ಖರೀದಿಸಬಹುದು. ಐಒಸಿ ಪೆಟ್ರೋಲ್ ಪಂಪ್‌ಗಳು ಅಥವಾ ಇಂಡೇನ್ ಎಲ್‌ಪಿಜಿ (LPG) ವಿತರಕರಿಂದ ನೀವು 5 ಕೆಜಿ ಸಣ್ಣ ಗ್ಯಾಸ್ ಸಿಲಿಂಡರ್ ಖರೀದಿಸಬಹುದಾಗಿದೆ. ವಿತರಕರು ಈ ಗ್ಯಾಸ್ ಸಿಲಿಂಡರ್ ಅನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ. 

ಆರ್ಥಿಕವಾಗಿ ದುರ್ಬಲ ಜನರಿಗೆ ಅನುಕೂಲವಾಗಲೆಂದು ಐಒಸಿ ಸಣ್ಣ ಗ್ಯಾಸ್ ಸಿಲಿಂಡರ್ ಅನ್ನು 2020 ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿತು. ಇದರ ಬೆಲೆ ಸಾಮಾನ್ಯ ಜನರ ಬಜೆಟ್‌ಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದರ ಬೆಲೆ ಕೇವಲ 257 ರೂ. ಆಗಿದೆ.

ಇದನ್ನೂ ಓದಿ : ನಿಮ್ಮ LPG ಸಂಪರ್ಕವನ್ನು ಆಧಾರ್‌ಗೆ ಲಿಂಕ್ ಮಾಡಲು ಇಲ್ಲಿದೆ 5 ಸುಲಭ ವಿಧಾನ

ಬುಕಿಂಗ್ ಮಾಡಲು ಸುಲಭ ವಿಧಾನಗಳು :
ಇಂಡೇನ್‌ ಗ್ಯಾಸ್ ಸಿಲಿಂಡರ್ ಅನ್ನು ಕಾಯ್ದಿರಿಸುವ ವಿಧಾನವು ತುಂಬಾ ಸರಳವಾಗಿದೆ. ನೀವು ಮನೆಯಲ್ಲಿ ಕುಳಿತು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (GAS Cylinder) ಅನ್ನು 5 ರೀತಿಯಲ್ಲಿ ಬುಕ್ ಮಾಡಬಹುದು. ಇದನ್ನು ನೀವು ವಾಟ್ಸಾಪ್, ಮಿಸ್ಡ್ ಕಾಲ್, ಇಂಡಿಯನ್ ಆಯಿಲ್ ಆ್ಯಪ್, ಎಸ್‌ಎಂಎಸ್ ಮತ್ತು ಇಂಡಿಯನ್ ಆಯಿಲ್ ಗ್ರಾಹಕ ಪೋರ್ಟಲ್ ಮೂಲಕ ಬುಕ್ ಮಾಡಬಹುದು.

- ಇಂಡೇನ್‌ನ ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಲು ದೇಶದ  ಯಾವ ಮೂಲೆಯಲ್ಲಾದರೂ 8454955555 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ.
- ವಾಟ್ಸಾಪ್ (Whatsapp) ಮೂಲಕ ಬುಕ್ ಮಾಡಲು 'REFILL' ಎಂದು ಟೈಪ್ ಮಾಡಿ ಮತ್ತು ಅದನ್ನು 7588888824 ಸಂಖ್ಯೆಗೆ ಕಳುಹಿಸಿ.
- ನೀವು 7718955555 ಸಂಖ್ಯೆಗೆ ಎಸ್ಎಂಎಸ್ ಕಲಿಸುವ ಮೂಲಕ ಕೂಡ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು.

ಇದನ್ನೂ ಓದಿ : LPG Price Update: ಹೊಸ ವರ್ಷದಂದೇ ಗ್ರಾಹಕರಿಗೆ ಎಲ್ಪಿಜಿ ಬೆಲೆ ಏರಿಕೆ ಬಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News