Home Loan Discount - ನವದೆಹಲಿ: ರಿಯಲ್ ಎಸ್ಟೇಟ್ ಉದ್ಯಮದ  ಕಂಪನಿ  Mahindra Lifespace Developers ಮಂಗಳವಾರ ಎಸ್‌ಬಿಐ ಜೊತೆ ಕೈಜೋಡಿಸಿದ್ದು, ಇದರಿಂದ ಗ್ರಾಹಕರು ಸುಲಭವಾಗಿ ಗೃಹ ಸಾಲ ಪಡೆಯಬಹುದು. ಈ ಕುರಿತಾದ ಒಡಂಬಡಿಕೆಗೆ ಕಂಪನಿ ಹಸ್ತಾಕ್ಷರ ಕೂಡ ಮಾಡಿದೆ. ಕಂಪನಿಯ ಈ ಒಪ್ಪಂದದ ಮೇರೆಗೆ ನೌಕರರು ಮತ್ತು ಗ್ರಾಹಕರಿಗೆ ವಿಶೇಷ ರಿಯಾಯಿತಿಯೊಂದಿಗೆ  ಗೃಹ ಸಾಲ (Home Loan)  ಸೌಲಭ್ಯ ಪಡೆಯಬಹುದು. ಮಹೀಂದ್ರಾ ಲೈಫ್‌ಸ್ಪೇಸ್ ಮತ್ತು ಎಸ್‌ಬಿಐ ದೇಶಾದ್ಯಂತ ಗೃಹ ಖರೀದಿದಾರರಿಗೆ ಉತ್ತಮ ಅನುಭವವನ್ನು ನೀಡುವ ಒಪ್ಪಂದಕ್ಕೆ ಸಹಿ ಹಾಕಿದೆ.


COMMERCIAL BREAK
SCROLL TO CONTINUE READING

ಕಂಪನಿ ಹಾಗೂ ಬ್ಯಾಂಕ್ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಇದರಲ್ಲಿ ಕೋ-ಪ್ರಮೋಶನಲ್ ಚಟುವಟಿಕೆ ಹಾಗೂ ಔಟ್ ರೀಚ್ ಇನಿಶಿಯೇಟಿವ್ ಶಾಮೀಲಾಗಿವೆ. ಇದರಿಂದ ಗ್ರಾಹಕರಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಕಂಪನಿಯ ವತಿಯಿಂದ ವಿಶೇಷ ಡಿಸ್ಕೌಂಟ್ ಸೌಲಭ್ಯ ನೀಡಲಾಗುತ್ತಿದೆ.


ಮಾಹಿತಿ ನೀಡಿದ CEO
ಈ ಕುರಿತು ಮಾಹಿತಿ ನೀಡಿರುವ ಮಹೀಂದ್ರಾ ಲೈಫ್‌ಪೇಸ್ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅರವಿಂದ್ ಸುಬ್ರಮಣಿಯನ್ , ಎರಡೂ ಕಂಪನಿಗಳ ಗ್ರಾಹಕರಿಗೆ ಹಾಗೂ ನೌಕರರಿಗೆ  ಮಹಿಂದ್ರಾ ಮನೆಗಳನ್ನು ಸುಲಭವಾಗಿ ದೊರಕಿಸಿಕೊಡಲು ತಮ್ಮ ಕಂಪನಿ, ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.


ಇದನ್ನು ಓದಿ- SBIನ ಅಗ್ಗದ Home Loan ಜೊತೆಗೆ ಪಡೆಯಿರಿ ದುಪ್ಪಟ್ಟು ಲಾಭ


ಇನ್ನೊಂದೆಡೆ ಒಪ್ಪಂದದ ಕುರಿತು ಹೇಳಿಕೆ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಜನರಲ್ ಮ್ಯಾನೇಜರ್ ಮತ್ತು ರಿಯಲ್ ಎಸ್ಟೇಟ್ ವರ್ಟಿಕಲ್  ಮುಖ್ಯಸ್ಥ ಶ್ರೀಕಾಂತ್, 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಬೆಂಗಳೂರು, ಪುಣೆ, ಚೆನ್ನೈ ಮತ್ತು ನಾಗ್ಪುರದ  ಮಹೀಂದ್ರಾ ಲೈಫ್ಸ್ಪೇಸ್ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಸಹಭಾಗಿತ್ವದೊಂದಿಗೆ,  ಟಿಐಆರ್ ಹಾಗೂ ವ್ಯಾಲ್ಯೂಯೇಶನ್ ಮೇಲಾಗುವ ವೆಚ್ಚಗಳನ್ನು ಉಳಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನು ಓದಿ- Home loan : ಹೀಗೆ ಮಾಡಿದರೆ ಗೃಹ ಸಾಲದ ಇಎಂಐ ಕಡಿಮೆಯಾಗಬಹುದು


1994 ರಲ್ಲಿ ಮಹೀಂದ್ರಾ ಲೈಫ್‌ಪೇಸ್ ಡೆವಲಪರ್‌ಗಳನ್ನು ಸ್ಥಾಪಿಸಲಾಯಿತು. ಕಂಪನಿಯು ಪ್ರಸ್ತುತ 19.4 ಬಿಲಿಯನ್ USD ಮೌಲ್ಯದ ಮಹೀಂದ್ರಾ ಗ್ರೂಪ್ನ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ವ್ಯವಹಾರವನ್ನು ಹೊಂದಿದೆ. ಕಂಪನಿಯ ಅಭಿವೃದ್ಧಿ ಹೆಜ್ಜೆಗುರುತು ಏಳು ಭಾರತೀಯ ನಗರಗಳಲ್ಲಿ ಮತ್ತು ಮುಂಬರುವ ವಸತಿ ಯೋಜನೆಗಳಲ್ಲಿ 25.1 ಮಿಲಿಯನ್ ಚದರ ಅಡಿವರೆಗೆ ವಿಸ್ತರಿಸಿವೆ.


ಇದನ್ನು ಓದಿ-PMAY: ಹೋಂ ಲೋನ್ ಮೇಲೆ ಸರ್ಕಾರ ನೀಡುತ್ತಿದೆ 2.67 ಲಕ್ಷ ರೂ.ಗಳ ಲಾಭ


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.