PMAY: ಹೋಂ ಲೋನ್ ಮೇಲೆ ಸರ್ಕಾರ ನೀಡುತ್ತಿದೆ 2.67 ಲಕ್ಷ ರೂ.ಗಳ ಲಾಭ

ನೀವು ಮನೆ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ನೀವು ಈ ಸುದ್ದಿಯನ್ನು ಎಚ್ಚರಿಕೆಯಿಂದ ಓದಬೇಕು. ಮಧ್ಯಮ ವರ್ಗದ ಜನರು ಒಂದು ಮನೆ ಕಟ್ಟಲು ತಮ್ಮ ಇಡೀ ಜೀವನ ಕಷ್ಟಪಡುತ್ತಾರೆ.

Last Updated : Dec 3, 2020, 10:46 AM IST
  • ಪಿಎಂಎವೈ ಅಡಿಯಲ್ಲಿ 2022ರ ವೇಳೆಗೆ ಎಲ್ಲರಿಗೂ ಸೂರು ಕಲ್ಪಿಸುವುದು ಸರ್ಕಾರದ ಉದ್ದೇಶ
  • ನೀವು ಈ ಯೋಜನೆಯ ನಿಯಮಗಳಿಗೆ ಒಳಪಟ್ಟರೆ ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಬಹುದು.
  • ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (ಸಿಎಲ್ಎಸ್ಎಸ್) ಅಡಿಯಲ್ಲಿ ಸಾಲದ ಬಡ್ಡಿಯನ್ನು ಮೂರು ವಿಭಾಗಗಳಲ್ಲಿ ಮನ್ನಾ ಮಾಡಲಾಗುತ್ತದೆ.
PMAY: ಹೋಂ ಲೋನ್ ಮೇಲೆ ಸರ್ಕಾರ ನೀಡುತ್ತಿದೆ 2.67 ಲಕ್ಷ ರೂ.ಗಳ ಲಾಭ title=

ಬೆಂಗಳೂರು: ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಜೀವನದ ಕನಸು. ಮಧ್ಯಮ ವರ್ಗದ ಜನ ಒಂದು ಮನೆ ಕಟ್ಟಲು ತಮ್ಮ ಜೀವನವಿಡೀ ಕಷ್ಟಪಡುತ್ತಾರೆ. ನೀವು ಮನೆ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ನೀವು ಈ ಸುದ್ದಿಯನ್ನು ಎಚ್ಚರಿಕೆಯಿಂದ ಓದಿ. ಪಿಎಂಎವೈ (PMAY) ಯೋಜನೆಯಡಿ ಮನೆ ಖರೀದಿಸಿದರೆ ಸರ್ಕಾರ 2.67 ಲಕ್ಷ ರೂ.ಗಳ ಪ್ರಯೋಜನವನ್ನು ನೀಡಲಿದೆ. ಸರ್ಕಾರದಿಂದ ಸಿಗುವ ಈ ಪ್ರಯೋಜನವನ್ನು ಹೇಗೆ ಪಡೆಯುವುದು ಎಂದು ತಿಳಿಯಿರಿ.

PMAY ಯೋಜನೆ ಎಂದರೇನು?
ಪ್ರಧಾನ್ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojane) ಅಡಿಯಲ್ಲಿ 2022ರ ವೇಳೆಗೆ ಎಲ್ಲರಿಗೂ ಮನೆಗಳನ್ನು ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ನೀವು ಈ ಯೋಜನೆಯ ನಿಯಮಗಳಿಗೆ ಒಳಪಟ್ಟರೆ ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಬಹುದು.
ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (ಸಿಎಲ್ಎಸ್ಎಸ್) ಅಡಿಯಲ್ಲಿ ಸಾಲದ ಬಡ್ಡಿಯನ್ನು ಮೂರು ವಿಭಾಗಗಳಲ್ಲಿ ಮನ್ನಾ ಮಾಡಲಾಗುತ್ತದೆ.

1. ಇಡಬ್ಲ್ಯೂಎಸ್ (EWS) ಅಂದರೆ ಆರ್ಥಿಕವಾಗಿ ದುರ್ಬಲ ವಿಭಾಗ - ಅವರ ವಾರ್ಷಿಕ ಆದಾಯ 3 ಲಕ್ಷ ಅಥವಾ ಅದಕ್ಕಿಂತ ಕಡಿಮೆ.
2. ಎಲ್ಐಜಿ (LIG) ಎಂದರೆ ಕಡಿಮೆ ಆದಾಯದ ಗುಂಪು - ಅವರ ವಾರ್ಷಿಕ ಆದಾಯ 3 ಲಕ್ಷದಿಂದ 6 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.
3. ಎಂಐಜಿ (MIG) ಅಂದರೆ ಮಧ್ಯಮ ಆದಾಯ ಗುಂಪು - ಎಂಐಜಿ 1- ವಾರ್ಷಿಕ ಆದಾಯವು 6 ಲಕ್ಷದಿಂದ 12 ಲಕ್ಷದವರೆಗೆ ಇರುತ್ತದೆ. ಎಂಐಜಿ 2- ವಾರ್ಷಿಕ ಆದಾಯ 12 ಲಕ್ಷದಿಂದ 18 ಲಕ್ಷದವರೆಗೆ ಇರುತ್ತದೆ.

ಕೇವಲ 3.5 ಲಕ್ಷ ರೂ.ಗಳಿಗೆ ಸಿಗಲಿದೆ ಮನೆ, ಈ ನಗರಗಳಲ್ಲಿ ಬುಕಿಂಗ್ ಆರಂಭ

ವಿವಾಹಿತರಿಗೆ ಪಿಎಂಎವೈ ಯೋಜನೆ :
ನೀವು ವಿವಾಹಿತರಾಗಿದ್ದರೆ ನೀವು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಗಾಗಿ ದಂಪತಿಗಳಲ್ಲಿ ಯಾರಾದರೂ ಅರ್ಜಿ ಸಲ್ಲಿಸಬಹುದು ಅಥವಾ ಇಬ್ಬರೂ ಜಂಟಿಯಾಗಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಲಾಭ ಪಡೆಯಲು ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವಂತಿಲ್ಲ. ಗಂಡ ಮತ್ತು ಹೆಂಡತಿ ಇಬ್ಬರನ್ನೂ ಸಂಪಾದಿಸುತ್ತಿದ್ದರೆ ಅವರಿಬ್ಬರ ಆದಾಯವು ವರ್ಗಕ್ಕೆ ಅನುಗುಣವಾಗಿ ಯೋಜನೆಯ ಲಾಭ ಪಡೆಯುತ್ತದೆ. ಗಂಡ ಮತ್ತು ಹೆಂಡತಿಯನ್ನು ಒಂದೇ ಘಟಕವೆಂದು ಪರಿಗಣಿಸಲಾಗುತ್ತದೆ.

ಈ ಯೋಜನೆಯ ಮೂಲಕ ಯಾವುದೇ ವ್ಯಕ್ತಿಯು 2.67 ಲಕ್ಷ ರೂ.ಗಳವರೆಗೆ ಸಹಾಯಧನವನ್ನು ಪಡೆಯಬಹುದು. ಗಂಡ ಮತ್ತು ಹೆಂಡತಿ ಒಟ್ಟಿಗೆ ಸಾಲ ತೆಗೆದುಕೊಂಡರೆ, ಅವರ ಮೇಲೆ ಇಎಂಐ ಹೊರೆ ಕಡಿಮೆಯಾಗುತ್ತದೆ ಮತ್ತು ಪ್ರಯೋಜನವೂ ಹೆಚ್ಚಾಗುತ್ತದೆ.

ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಪ್ರಕ್ರಿಯೆ ಅನುಸರಿಸಿ

PMAY ಲಾಭವನ್ನು ಪಡೆಯಲು ಇರುವ ಮಾನದಂಡಗಳು:
1. ಅರ್ಜಿದಾರರ ವಯಸ್ಸು 21 ರಿಂದ 55 ವರ್ಷಗಳು ಆಗಿರಬೇಕು
2. ದೇಶದಲ್ಲಿ ಎಲ್ಲಿಯೂ ಅರ್ಜಿದಾರರ ಹೆಸರಿನಲ್ಲಿ ಯಾವುದೇ ಶಾಶ್ವತ ಮನೆ ಇರಬಾರದು.
3. ಬೇರೆ ಯಾವುದೇ ಕೇಂದ್ರ ವಸತಿ ಯೋಜನೆಯ ಲಾಭ ಪಡೆದಿರಬಾರದು
4. ಕುಟುಂಬದಲ್ಲಿ ಯಾವುದೇ ಅವಿವಾಹಿತ ವ್ಯಕ್ತಿಯನ್ನು ಪ್ರತ್ಯೇಕ ಅರ್ಜಿದಾರರಾಗಿ ನೋಡಲಾಗುತ್ತದೆ, ಅಂದರೆ ಅವನು ಈ ಯೋಜನೆಗೆ ಅರ್ಹನಾಗಿರುತ್ತಾನೆ.
5. ಇಡಬ್ಲ್ಯೂಎಸ್, ಎಲ್ಐಜಿ ವರ್ಗಕ್ಕೆ ಮಹಿಳೆ ಮಾಲೀಕರು ಅಥವಾ ಸಹ-ಮಾಲೀಕರಾಗಿರುವುದು ಕಡ್ಡಾಯವಾಗಿದೆ.

ಪಿಎಂಎವೈಗೆ ಹೇಗೆ ಅರ್ಜಿ ಸಲ್ಲಿಸಬೇಕು?
1. ನೀವು ಅಧಿಕೃತ ವೆಬ್‌ಸೈಟ್ http://pmaymis.gov.in/ ಗೆ ಹೋಗಬೇಕು
2. ಆಧಾರ್ (Aadhaar) ಸಂಖ್ಯೆ, ಆದಾಯದ ಮಾಹಿತಿ ಮುಂತಾದ ಎಲ್ಲಾ ಪ್ರಮುಖ ಮಾಹಿತಿಯನ್ನು ಸಹ ಇಲ್ಲಿ ನೀಡಬೇಕಾಗುತ್ತದೆ.
3. ಡೌನ್‌ಲೋಡ್ ಮಾಡಿದ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನಿಮ್ಮ ಬ್ಯಾಂಕಿನಲ್ಲಿ ಅಗತ್ಯವಿರುವ ಎಲ್ಲಾ ಪತ್ರಿಕೆಗಳೊಂದಿಗೆ ಸಲ್ಲಿಸಿ
4. ಪಿಎಂಎವೈ ಅಡಿಯಲ್ಲಿ ಪಟ್ಟಿ ಮಾಡಲಾದ ಯಾವುದೇ ಬ್ಯಾಂಕಿನಿಂದ ನೀವು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
5. ಬ್ಯಾಂಕ್ ನಿಮ್ಮ ಅರ್ಜಿಯನ್ನು ಸೆಂಟ್ರಲ್ ನೋಡಲ್ ಏಜೆನ್ಸಿಗೆ ವಿಸ್ತರಿಸುತ್ತದೆ, ಇದರಿಂದ ನಿಮಗೆ ಸಹಾಯಧನ ಸಿಗುತ್ತದೆ

Trending News