Home loan : ಹೀಗೆ ಮಾಡಿದರೆ ಗೃಹ ಸಾಲದ ಇಎಂಐ ಕಡಿಮೆಯಾಗಬಹುದು

ಗೃಹ ಸಾಲದ ಇಎಂಐ ಕಟ್ಟಿ ಬೇಸತ್ತಿದ್ದರೆ, ಇಎಂಐ ಕಡಿಮೆ ಮಾಡುವ ಪರಿ ಹೇಗೆ ಎಂಬ ಯೋಚನೆ ನಿಮ್ಮನ್ನು ಕಾಡುತ್ತಿದ್ದರೆ ಇನ್ನು ಆ ಯೋಚನೆ ಬಿಟ್ಟು ಬಿಡಿ.   ಗೃಹಸಾಲವನ್ನು ಬೇರೆ ಬ್ಯಾಂಕಿಗೆ ಶಿಫ್ಟ್ ಮಾಡಿದರೆ ಇಎಂಐ ಹೊರೆಯನ್ನು ಕಡಿಮೆ ಮಾಡಬಹುದು. 

Written by - Zee Kannada News Desk | Last Updated : Dec 25, 2020, 03:49 PM IST
  • ಗೃಹ ಸಾಲದ ಇಎಂಐ ಕಡಿಮೆಮಾಡಿಕೊಳ್ಳುವ ಸುಲಭ ಉಪಾಯ
  • ಸಾಲ ವರ್ಗಾವಣೆಯಿಂದ 6 ಲಕ್ಷದಷ್ಟು ಹಣ ಉಳಿಸಬಹುದು
  • ಸೂಕ್ತ ಸಮಯದಲ್ಲಿ ವರ್ಗಾವಣೆ ಮಾಡಿದರೆ ನೆಮ್ಮದಿಯ ಬದುಕು
Home loan : ಹೀಗೆ ಮಾಡಿದರೆ ಗೃಹ ಸಾಲದ ಇಎಂಐ ಕಡಿಮೆಯಾಗಬಹುದು  title=
ಅಧಿಕ ಬಡ್ಡಿದರದಿಂದ ಮುಕ್ತಿ ಪಡೆಯುವುದು ಈಗ ಸಾಧ್ಯ (file photoe)

ನವದೆಹಲಿ : ಗೃಹ ಸಾಲದ ಇಎಂಐ ಕಟ್ಟಿ ಬೇಸತ್ತಿದ್ದರೆ, ಇಎಂಐ ಕಡಿಮೆ ಮಾಡುವ ಪರಿ ಹೇಗೆ ಎಂಬ ಯೋಚನೆ ನಿಮ್ಮನ್ನು ಕಾಡುತ್ತಿದ್ದರೆ ಇನ್ನು ಆ ಯೋಚನೆ ಬಿಟ್ಟು ಬಿಡಿ. ಕೆಲವು ಸಮಯದ ಹಿಂದೆ ಬ್ಯಾಂಕುಗಳು ಗೃಹಸಾಲದ ಮೇಲಿನ 8 ರಿಂದ 9 ಶೇ ಬಡ್ಡಿ ವಿಧಿಸುತ್ತಿತ್ತು. ಈಗ ಬಹುತೇಕ ಎಲ್ಲಾ ಬ್ಯಾಂಕುಗಳು 7 ಪರ್ಸೆಂಟ್ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತಿದೆ. ಹಾಗಾಗಿ ನೀವು ನಿಮ್ಮ ಗೃಹಸಾಲವನ್ನು (Home Loan) ಬೇರೆ ಬ್ಯಾಂಕಿಗೆ ಶಿಫ್ಟ್ ಮಾಡಿದರೆ ಇಎಂಐ (EMI) ಹೊರೆಯನ್ನು ಕಡಿಮೆ ಮಾಡಬಹುದು. 

ಆದರೆ ಸಾಲವನ್ನು ಬೇರೆ ಬ್ಯಾಂಕ್ ಗೆ (Bank) ಯಾವಾಗ ವರ್ಗಾವಣೆ ಮಾಡಬೇಕು ಎನ್ನುವುದರ ಬಗ್ಗೆ ಸ್ಪಲ್ಪ ಪ್ಲಾನಿಂಗ್ ಮಾಡಿಕೊಳ್ಳಬೇಕಾಗುತ್ತದೆ. ನೀವು 4 ವರ್ಷದ ಹಿಂದೆ ಅಂದರೆ 2016ರಲ್ಲಿ ಗೃಹ ಸಾಲ ಪಡೆದುಕೊಂಡಿದ್ದೀರಿ ಅಂದುಕೊಳ್ಳೋಣ. ಆಗ ಗೃಹ ಸಾಲದ (Home Loan) ಮೇಲೆ 9.25 ಪರ್ಸೆಂಟ್ ಬಡ್ಡಿ ಇತ್ತು. ಈಗ ನೀವು ನಿಮ್ಮ ಸಾಲವನ್ನು ಬೇರೆ ಬ್ಯಾಂಕಿಗೆ ವರ್ಗಾವಣೆ ಮಾಡಿದರೆ ನಿಮ್ಮ ಇಎಂಐಯಲ್ಲಿ ಎಷ್ಟು ವ್ಯತ್ಯಾಸವಾಗುತ್ತದೆ ನೋಡೋಣ.

ALSO READ : ಈಗ ಈ ಬ್ಯಾಂಕ್ ಕೂಡ ತನ್ನ ಗ್ರಾಹಕರಿಗಾಗಿ ಪ್ರಾರಂಭಿಸಿದೆ Door Step Banking

ನೀವು 2016ರಲ್ಲಿ 9.25% ಬಡ್ಡಿದರದಂತೆ (Interest Rate) 20 ವರ್ಷಗಳ ಅವಧಿಗೆ 30 ಲಕ್ಷ ರೂ ಸಾಲ ಪಡೆದಿದ್ದರೆ ನೀವು ಬ್ಯಾಂಕ್ ಗೆ ಕಟ್ಟುವ ಇಎಂಐ ದರ 27,476ರೂ. ಈಗ ನೀವು 2020ರಲ್ಲಿ ನಿಮ್ಮ ಸಾಲವನ್ನು  ಬೇರೆ ಬ್ಯಾಂಕಿಗೆ ವರ್ಗಾಯಿಸಿಕೊಂಡರೆ, ಬಾಕಿ ಉಳಿದಿರುವ ಸಾಲದ ಮೊತ್ತ 26 ಲಕ್ಷ ರೂ.  ಈ 26 ಲಕ್ಷ ರೂಗಳಿಗೆ ಶೇ.6.90 ಬಡ್ಡಿದರದಂತೆ16 ವರ್ಷಗಳ ಅವಧಿಗೆ ನೀವು ಕಟ್ಟಬೇಕಾಗಿರುವ ಇಎಂಐ 22,400 ರೂಪಾಯಿಗಳು. 

ಅಂದರೆನಿಮ್ಮ ತಿಂಗಳ ಇಎಂಐಯಲ್ಲಿ 5 ಸಾವಿರ ರೂಪಾಯಿಗಳ ಉಳಿತಾಯವಾಗಲಿದೆ. 16 ವರ್ಷಗಳ ಅವಧಿಯಲ್ಲಿ ಹೊಸ ಬ್ಯಾಂಕ್ ನಲ್ಲಿ (Bank) ನಿಮಗೆ ಬೀಳುವ ಬಡ್ಡಿ 17,00,820 ರೂಪಾಯಿಗಳು. ಹಳೆ ಬ್ಯಾಂಕ್ ನಲ್ಲೇ ನೀವು ಸಾಲ ಮುಂದುವರೆಸಿದರೆ 16 ವರ್ಷಗಳಿಗೆ ನೀವು ಕಟ್ಟುವ ಬಡ್ಡಿಯ ಮೊತ್ತ 23,90,488 ರೂಪಾಯಿಗಳು. ಅಂದರೆ ಸರಿಸುಮಾರು 6.89 ಲಕ್ಷದಷ್ಟು ಬಡ್ಡಿ ಹಣವನ್ನು ನೀವು ಕಡಿಮೆ ಮಾಡಿಕೊಳ್ಳಬಹುದು.

ALSO READ : ಎಸ್​ಬಿಐ ಉಳಿತಾಯ ಖಾತೆಯ ಈ ನಿಯಮದಲ್ಲಿ ಬದಲಾವಣೆ, ಮೇ 1 ರಿಂದ ಜಾರಿ!
 
ನಿಮ್ಮ ಗೃಹ ಸಾಲವನ್ನು ಬೇರೆ ಬ್ಯಾಂಕ್ ಗೆ ವರ್ಗಾಯಿಸುವ ಮೊದಲು ಎಲ್ಲಾ ಬ್ಯಾಂಕುಗಳ ಬಡ್ಡಿದರದ ಬಗ್ಗೆ ಕೂಲಂಕುಷವಾಗಿ ತಿಳಿದುಕೊಳ್ಳಿ. ನಂತರ ನೀವು ಹೆಚ್ಚು ಬಡ್ಡಿಯನ್ನು ಪಾವತಿಸುತ್ತಿದ್ದೀರಿ ಎಂದು ನಿಮಗನಿಸಿದರೆ ನಿಮ್ಮ ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುವಂತೆ ಬ್ಯಾಂಕ್ ಗೆ ಮನವಿ ಮಾಡಿ. ಬ್ಯಾಂಕ್ ನಿಮ್ಮ ಮನವಿಗೆ ಸ್ಪಂದಿಸಿದರೆ ಇದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ. 

ನಿಮ್ಮ ಬ್ಯಾಂಕ್ ನಿಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಮಂಜೂರು (Loan Sanction) ಮಾಡುವ ಸಲುವಾಗಿ ಬೇರೊಂದು ಬ್ಯಾಂಕನ್ನು ಸಂಪರ್ಕಿಸಿ. ಈ ಬಗ್ಗೆ ಬೇರೆ ಬ್ಯಾಂಕ್ ಗೆ ನೀವು ಒಂದು ಅಪ್ಲಿಕೇಶನ್ ನೀಡಬೇಕಾಗುತ್ತದೆ. ಅಪ್ಲಿಕೇಶನ್ ಜೊತೆ ಬ್ಯಾಂಕ್ ಗೆ ಅಗತ್ಯವಿರುವ ಎಲ್ಲಾ ದಾಖಲೆ ಪತ್ರಗಳನ್ನು ಒದಗಿಸಬೇಕು. ಹೊಸ ಬ್ಯಾಂಕ್ ನಿಂದ ನಿಮಗೆ ಸಾಲ ಮಂಜೂರಾತಿಯ ಪತ್ರ ಸಿಕ್ಕಿದರೆ ನಿಮ್ಮ ಕೆಲಸ ಆದಂತೆ. ಈ ಸಾಲ ಮಂಜೂರಾತಿ ಪತ್ರವನ್ನು ಹಳೆಯ ಬ್ಯಾಂಕ್ ಗೆ ಸಲ್ಲಿಸಿ. ಹಳೆಯ ಬ್ಯಾಂಕ್ ನಿಂದ ಬಾಕಿ ಉಳಿದಿರುವ ಸಾಲದ ಮೊತ್ತದ ಬಗ್ಗೆ ದಾಖಲೆ ಪಡೆದುಕೊಳ್ಳಿ. ನಿಮ್ಮ ಆಸ್ತಿಯ ಅಸಲಿ ದಾಖಲೆಗಳನ್ನು ಪಡೆದುಕೊಳ್ಳಿ. 

ಹಳೆ ಬ್ಯಾಂಕ್ ನಿಂದ ಪಡೆದ ಎಲ್ಲಾ ದಾಖಲೆಗಳನ್ನು ಹೊಸ ಬ್ಯಾಂಕ್ ಗೆ ಸಲ್ಲಿಸಿ ಸಾಲ ವರ್ಗಾವಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು. ಈ  ಸಂದರ್ಭದಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. 

ALSO READ : ಎಸ್‌ಬಿಐನ ಈ ಖಾತೆಯ ಮೂಲಕ ವ್ಯವಹಾರ ಆಗಲಿದೆ ಸುಲಭ

ಗೃಹ ಸಾಲ ವರ್ಗಾವಣೆಗೆ ತಗಲುವ ವೆಚ್ಚ:
ಕಡಿಮೆ ಬಡ್ಡಿದರದ ಹಿನ್ನೆಲೆಯಲ್ಲಿ ಸಾಲ ವರ್ಗಾವಣೆ ಮಾಡಿದರೆ ನಿಮಗೆ ಲಾಭವಾಗುವುದಂತೂ ಖಂಡಿತಾ. ಆದರೆ ನಿಮ್ಮ ಬ್ಯಾಂಕ್ ನಿಮ್ಮಿಂದ ಲೋನ್ ಪ್ರೀಪೇಮೆಂಟ್ ಚಾರ್ಜ್ ಪಡೆಯಬಹುದು. ಇದು 0.50 % ದಷ್ಟಿರುತ್ತದೆ. ಒಂದು ವೇಳೆ ನೀವು ಹೌಸಿಂಗ್ ಫೆನಾನ್ಸ್ ಕಂಪನಿಯಿಂದ ಫ್ಲೊಟಿಂಗ್ ದರದನ್ವಯ ಸಾಲ ಪಡೆದಿದ್ದರೆ, ಈ ಪ್ರೀಪೇಮೆಂಟ್ ಚಾರ್ಜ್ ನಿಂದ ಬಚಾವಾಗಬಹುದು. ಒಂದು ವೇಳೆ ಫಿಕ್ಸ್  ಡ್ ದರದನ್ವಯ ಸಾಲ ಪಡೆದಿದ್ದರೆ ಹೌಸಿಂಗ್ ಫೆನಾನ್ಸ್ ಕಂಪನಿ ಪ್ರೀಪೇಮೆಂಟ್ ಚಾರ್ಜ್ ಪಡೆದುಕೊಳ್ಳಬಹುದು. 

ಹೊಸ ಬ್ಯಾಂಕ್ ಕೂಡಾ ನಿಮ್ಮಿಂದ ಲೋನ್ ಪ್ರೊಸೆಸಿಂಗ್ ದರವನ್ನು ಪಡೆದುಕೊಳ್ಳುತ್ತದೆ. ಈ ದರ 0.50% ನಿಂದ 1.5% ದಷ್ಟಿರುತ್ತದೆ. ಕೆಲ ಬ್ಯಾಂಕುಗಳು ಲೋನ್ ಪ್ರೊಸೆಸಿಂಗ್ ದರವನ್ನು   ಬಿಟ್ಟುಬಿಡಬಹುದು.  ನಿಮ್ಮ ಸಾಲ ಮರುಪಾವತಿಯ ರೆಕಾರ್ಡ್ ಆಧಾರದ ಮೇಲೂ ಬ್ಯಾಂಕ್ ಈ ದರವನ್ನು ಬಿಟ್ಟುಬಿಡಬಹುದು. ಆದರೆ ಇದಕ್ಕಾಗಿ ನೀವು ಬ್ಯಾಂಕ್ ಗೆ ಮನವಿ ಮಾಡಬೇಕಾಗುತ್ತದೆ. 

ಸಾಲ ವರ್ಗಾವಣೆ ಯಾವಾಗ ಮಾಡಬೇಕು:
ನಿಮ್ಮ ಸಾಲದ ಮರುಪಾವತಿ ಅವಧಿ 15ರಿಂದ 18 ವರ್ಷಗಳಷ್ಟಿದ್ದರೆ ಮಾತ್ರ ಸಾಲ ವರ್ಗಾಯಿಸಿ
ನಿಮ್ಮ ಸಾಲದ ಮೊತ್ತ ಕೂಡಾ ಅಧಿಕವಾಗಿದ್ದರೆ ಮಾತ್ರ ನಿಮಗೆ ಸಾಲ ವರ್ಗಾವಣೆ ಲಾಭವಾಗಲಿದೆ
ಹೊಸ ಬ್ಯಾಂಕ್ ಪ್ರಸ್ತುತ ದರಕ್ಕಿಂತ ಕಡಿಮೆ ಬಡ್ಡಿದರಕ್ಕೆ ಸಾಲ ನೀಡಲು ಒಪ್ಪಿದರೆ ಮಾತ್ರ ಸಾಲ ವರ್ಗಾವಣೆ ಉತ್ತಮ ಆಯ್ಕೆ
ಸಾಲ ವರ್ಗ ಮಾಡುವ ಮುನ್ನ ಹೊಸ ಬ್ಯಾಂಕ್ ನ ಎಲ್ಲಾ ಷರತ್ತು, ಚಾರ್ಜ್ ಗಳ ಬಗ್ಗೆ ಮೊದಲೇ ತಿಳಿದುಕೊಳ್ಳಿ
ಎಲ್ಲವೂ ನಿಮಗೆ ಸ್ಪಷ್ಟವಾದ ನಂತರವೇ ಪ್ರಕ್ರಿಯೆ ಶುರು ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
=======================================

Trending News