ನವದೆಹಲಿ: Maruti Suzuki ತನ್ನ ಜನಪ್ರೀಯ ಕಾರ್ ಆಗಿರುವ Celerio ನ ಹೊಸ ಅವತಾರ ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಿದೆ. ಹೊಸ 2021 Maruti Suzuki Celerio ಪವರ್ ಫುಲ್ ಇಂಜಿನ್ ಹೊಂದಿದೆ. ಇಂಜಿನ್ ಜೊತೆಗೆ ಇದರ ಇಂಟೀರಿಯರ್ ಹಾಗೂ ಎಕ್ಸ್ಟೀರಿಯರ್ ನಲ್ಲಿಯೂ ಕೂಡ ನೀವು ಹಲವು ಬದಲಾವಣೆಗಳನ್ನು ಗಮನಿಸಬಹುದು.


COMMERCIAL BREAK
SCROLL TO CONTINUE READING

ನಮ್ಮ ಅಂಗಸಂಸ್ಥೆ Zee Newsನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಹ್ಯಾಚ್ ಬ್ಯಾಕ್ ಕಾರ್ ಸೆಗ್ಮೆಂಟ್ ನಲ್ಲಿ ಅಬ್ಬರಿಸಲು Maruti Suzuki 2021 Celerio ನ ಹೊಸ ಅವತಾರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಹೊಸ ಅವತಾರದಲ್ಲಿ ಎರಡು ಇಂಜಿನ್ ಆಯ್ಕೆಗಳು ಸಿಗುವ ಸಾಧ್ಯತೆ ಇದೆ . ಮೊದಲ ಆಯ್ಕೆಯಲ್ಲಿ 1 ಲೀಟರ್, 3 ಸಿಲಿಂಡರ್ ಪೆಟ್ರೋಲ ಇಂಜಿನ್ ಇರಲಿದ್ದು, ಇದು 68 bhp ಶಕ್ತಿ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ. ಎರಡನೇ ಆಯ್ಕೆಯಲ್ಲಿ 1.2 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಇಂಜಿನ್ ಹೊಂದಿರಲಿದ್ದು, ಇದು 83 bhp ಪವರ್ ಜನರೇಟ್ ಮಾಡಲಿದೆ. ನೂತನ 2021  Celerio 5 ಸ್ಪೀಡ್ ಮ್ಯಾನುಯೆಲ್ ಗಿಯರ್ ಬಾಕ್ಸ್ ಜೊತೆಗೆ ಬರಲಿದ್ದು, ಇದರಲ್ಲಿ AMT ಗಿಯರ್ ಬಾಕ್ಸ್ ಆಯ್ಕೆ ನೀಡಲಾಗುವ ಸಾಧ್ಯತೆ ಕೂಡ ಇದೆ.


2021ರ ಮಾರುತಿ ಸುಜುಕಿ ಸೇಲೆರಿಯೋನಿಂದ ಹಳೆ ಪ್ಲಾಟ್ ಫಾರ್ಮ್ ಅನ್ನು ತೆಗೆದುಹಾಕಲಾಗಿದೆ. ಇದರಲ್ಲಿ ಹೊಸ ಹಾರ್ಟೆಕ್ಟ್ ಪ್ಲಾಟ್ ಫಾರ್ಮ್ ಆರ್ಕಿಟೆಕ್ಚರ್ ಬಳಸಲಾಗಿದೆ. ಕಂಪನಿ ಈಗಾಗಲೇ ತನ್ನ ಈ ಹೊಸ ಪ್ಲಾಟ್ ಫಾರ್ಮ್ ಅನ್ನು ಇತರೆ ಕಾರುಗಳಲ್ಲಿಯೂ ಕೂಡ ಅಳವಡಿಸುತ್ತಿದೆ. Maruti Suzuki Celerio 2021ಗೆ 'YMC' ಕೋಡ್ ವರ್ಡ್ ನೀಡಲಾಗಿದೆ.


ಇದನ್ನೂ ಓದಿ-ತನ್ನ ಗ್ರಾಹಕರಿಗಾಗಿ ಅಗ್ಗದ Car Loan ಆಫರ್ ನೀಡಿದ SBI


2021 ಸೇಲೆರಿಯೋ ಇಂಟೀರೀಯರ್ ಕುರಿತು ಹೇಳುವುದಾದರೆ, ಇದರಲ್ಲಿ 7 ಇಂಚಿನ ಸ್ಮಾರ್ಟ್ ಪ್ಲೇ ಸ್ಟುಡಿಯೋ ಇನ್ಫೋಟೆನ್ಮೆಂಟ್ ಸಿಸ್ಟಂ ಸಿಗಲಿದೆ. ಇದು ಆಪಲ್ ಕಾರ್ ಪ್ಲೇ ಹಾಗೂ ಅಂಡ್ರಾಯಿಡ್ ಕಾರ್ ಪ್ಲೇ ಎರಡಕ್ಕೂ ಸಪೋರ್ಟ್ ಮಾಡಲಿದೆ. ಇದಲ್ಲದೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಈ ಕಾರಣ ಹಳೆ ಆವೃತ್ತಿಯಲ್ಲಿ ಬಳಸಲಾಗಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆನ್ ಇದರಲ್ಲಿ ಬಳಸಲಾಗಿದೆ. ಇದರ ಜೊತೆಗೆ ಕಾರ್ ನ ಡ್ಯಾಶ್ ಬೋರ್ಡ್, ಸ್ಟೀರಿಂಗ್ ವೀಲ್ ಹಾಗೂ ಸೆಂಟರ್ ಕನ್ಸೋಲ್ ಅನ್ನೂ ಕೂಡ ಅಪ್ಗ್ರೇಡ್ ಮಾಡಲಾಗುತ್ತಿದೆ.


ಇದನ್ನೂ ಓದಿ- ಸೆಕೆಂಡ್ ಹ್ಯಾಂಡ್ Car ಖರೀದಿಗೂ ಸಿಗುತ್ತೆ ಸಾಲ, ಈ 7 ಬ್ಯಾಂಕ್ ಗಳಲ್ಲಿ ಅಂತ್ಯಂತ ಕಡಿಮೆ ಬಡ್ಡಿದರ


ಈ ಕಾರಿನ ಬೆಲೆ ಕುರಿತು ಹೇಳುವುದಾದರೆ 2021 ಸೆಲೆರಿಯೋ ಎಕ್ಸ್ ಷೋರೂಮ್ ಬೆಲೆ ಸದ್ಯ 4.41 ಲಕ್ಷ ರೂ. ನಿಂದ 5.68 ಲಕ್ಷ ರೂ. ಆಗಿರುವ ಸಾಧ್ಯತಇದೆ. ಆದರೆ, ಹೊಸ ಇಂಜಿನ್ ಹಾಗೂ ಹೊಸ ವೈಶಿಷ್ಟ್ಯಗಳ ಹಿನ್ನೆಲೆ ಇದು ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ವರ್ತಿಸಲಾಗುತ್ತಿದೆ.


ಇದನ್ನೂ ಓದಿ-ಬಡ್ಡಿದರ ಕಡಿತಗೊಳಿಸಿದ ದೇಶದ ದೊಡ್ಡ ಬ್ಯಾಂಕ್: ಹೋಂ, Car ಖರೀದಿ ಇನ್ನು ಅಗ್ಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.