ಬಡ್ಡಿದರ ಕಡಿತಗೊಳಿಸಿದ ದೇಶದ ದೊಡ್ಡ ಬ್ಯಾಂಕ್: ಹೋಂ, Car ಖರೀದಿ ಇನ್ನು ಅಗ್ಗ

ದೇಶದ ಎರಡನೇ ಅತಿದೊಡ್ಡ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತನ್ನ ಬಡ್ಡಿದರಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗ್ರಾಹಕರಿಗೆ ಗೃಹ ಸಾಲ ಮತ್ತು ವಾಹನ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಒದಗಿಸುತ್ತದೆ.

Last Updated : Jun 2, 2020, 10:22 AM IST
ಬಡ್ಡಿದರ ಕಡಿತಗೊಳಿಸಿದ ದೇಶದ ದೊಡ್ಡ ಬ್ಯಾಂಕ್: ಹೋಂ, Car ಖರೀದಿ ಇನ್ನು ಅಗ್ಗ title=

ನವದೆಹಲಿ: ಲಾಕ್‌ಡೌನ್ (Lockdown) 5 ರ ಆರಂಭವಾಗುತ್ತಿದ್ದಂತೆ ನಿಮಗಾಗಿ ಕೆಲವು ಒಳ್ಳೆಯ ಸುದ್ದಿಗಳು ಬರಲಾರಂಭಿಸಿವೆ. ಎರಡು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು ಇತ್ತೀಚೆಗೆ ಬಡ್ಡಿದರಗಳನ್ನು ಕಡಿತಗೊಳಿಸಿದ ನಂತರ, ಈಗ ದೇಶದ ಎರಡನೇ ಅತಿದೊಡ್ಡ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ಬಡ್ಡಿದರಗಳಲ್ಲಿ ಕಡಿತವನ್ನು ಘೋಷಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗ್ರಾಹಕರಿಗೆ ಗೃಹ ಸಾಲ ಮತ್ತು ವಾಹನ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಒದಗಿಸುತ್ತದೆ.

ಬಹಳ ಕಡಿಮೆ ಬಡ್ಡಿದರ:
ಎರಡನೇ ಪ್ರಮುಖ ಸರ್ಕಾರಿ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಜೂನ್ 1ರಂದು ಸಾಲಗಳ ಮೇಲಿನ ರೆಪೊ ದರದಲ್ಲಿ ಶೇ 0.40 ರಷ್ಟು ರಿಯಾಯಿತಿ ಪ್ರಕಟಿಸಿದೆ. ಈಗ ಈ ಬಡ್ಡಿದರವನ್ನು 7.05 ಪ್ರತಿಶತದಿಂದ 6.65ಕ್ಕೆ ಇಳಿಸಲಾಗುವುದು.

ಮನೆ ಅಥವಾ ಕಾರು ಖರೀದಿಸಲು ಯೋಜಿಸುವ ಜನರಿಗೆ ಈ ದರ ತುಂಬಾ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗ ಗ್ರಾಹಕರು ಸಾಲದ ಮೇಲಿನ ಕಡಿಮೆ ಬಡ್ಡಿದರದ ನೇರ ಲಾಭವನ್ನು ಪಡೆಯಲಿದ್ದಾರೆ. ಇದಲ್ಲದೆ ಎಲ್ಲಾ ಮೆಚ್ಯೂರಿಟಿ ಸಾಲಗಳಿಗೆ ಕನಿಷ್ಠ ವೆಚ್ಚ ಆಧಾರಿತ ಬಡ್ಡಿದರವನ್ನು (ಎಂಸಿಎಲ್ಆರ್) ಶೇಕಡಾ 0.15 ರಷ್ಟು ಕಡಿಮೆ ಮಾಡಲಾಗಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಉಳಿತಾಯ ಖಾತೆಗಳ ಬಡ್ಡಿದರವನ್ನು 0.50 ಪ್ರತಿಶತದಿಂದ 3.25ಕ್ಕೆ ಬ್ಯಾಂಕ್ ಕಡಿಮೆ ಮಾಡಿದೆ. ಪರಿಷ್ಕೃತ ದರಗಳು ಜುಲೈ 1ರಿಂದ ಜಾರಿಗೆ ಬರಲಿವೆ ಎಂದು ಬ್ಯಾಂಕ್ ತಿಳಿಸಿದೆ.

ಈ ವಾರದ ಆರಂಭದಲ್ಲಿ ಬ್ಯಾಂಕ್ ಆಫ್ ಬರೋಡಾ (Bank of Baroda) ಮತ್ತು ಯುಕೋ ಬ್ಯಾಂಕ್ ಕೂಡ ಬಡ್ಡಿದರಗಳನ್ನು ಕಡಿತಗೊಳಿಸಿದ್ದವು ಎಂಬುದು ಗಮನಾರ್ಹ.

Trending News