ಸೆಕೆಂಡ್ ಹ್ಯಾಂಡ್ Car ಖರೀದಿಗೂ ಸಿಗುತ್ತೆ ಸಾಲ, ಈ 7 ಬ್ಯಾಂಕ್ ಗಳಲ್ಲಿ ಅಂತ್ಯಂತ ಕಡಿಮೆ ಬಡ್ಡಿದರ

ಪ್ರಸ್ತುತ ಕೋವಿಡ್ ಯುಗದಲ್ಲಿ ಸಾಮಾಜಿಕ ದೂರವನ್ನು ಗಮನದಲ್ಲಿಟ್ಟುಕೊಂಡು, ಅನೇಕ ಜನರು ಸಾರ್ವಜನಿಕ ವಾಹನಗಳಿಂದ ಚಲಿಸುವ ಬದಲು ತಮ್ಮ ಸ್ವಂತ ವಾಹನಗಳಿಂದ ಪ್ರಯಾಣ ಬೆಳೆಸಲು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

Last Updated : Dec 1, 2020, 01:49 PM IST
  • ಕೊವಿಡ್ 19 ಕಾಲಾವಧಿಯಲ್ಲಿ ಜನರು ತಮ್ಮ ಸ್ವಂತ ವಾಹನದಿಂದ ಪ್ರಯಾಣ ಬೆಳೆಸಲು ಆದ್ಯತೆ ನೀಡುತ್ತಿದ್ದಾರೆ.
  • ಅನೇಕರು ತಮ್ಮದೇ ಆದ ಕಾರನ್ನು ಖರೀದಿಸಿದ್ದಾರೆ ಅಥವಾ ಖರೀದಿಸಲು ಯೋಜಿಸುತ್ತಿದ್ದಾರೆ.
  • ಯಾವ ಯಾವ ಬ್ಯಾಂಕ್ ಗಳು ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಸಾಲ ನೀಡುತ್ತವೆ ಮತ್ತು ಬಡ್ಡಿ ಎಷ್ಟು?
ಸೆಕೆಂಡ್ ಹ್ಯಾಂಡ್ Car ಖರೀದಿಗೂ ಸಿಗುತ್ತೆ ಸಾಲ, ಈ 7 ಬ್ಯಾಂಕ್ ಗಳಲ್ಲಿ ಅಂತ್ಯಂತ ಕಡಿಮೆ ಬಡ್ಡಿದರ title=

ನವದೆಹಲಿ: ಪ್ರಸ್ತುತ ಕೋವಿಡ್ ಯುಗದಲ್ಲಿ (Covid Pandemic) ಸಾಮಾಜಿಕ ದೂರವನ್ನು ಗಮನದಲ್ಲಿಟ್ಟುಕೊಂಡು, ಅನೇಕ ಜನರು ಸಾರ್ವಜನಿಕ ವಾಹನಗಳಿಂದ ಚಲಿಸುವ ಬದಲು ತಮ್ಮ ಸ್ವಂತ ವಾಹನಗಳಿಂದ ಪ್ರಯಾಣ ಬೆಳೆಸಲು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಕಾರಣದಿಂದಾಗಿ, ಅನೇಕರು ತಮ್ಮದೇ ಆದ ಕಾರನ್ನು ಖರೀದಿಸಿದ್ದಾರೆ ಅಥವಾ ಖರೀದಿಸಲು ಯೋಜಿಸುತ್ತಿದ್ದಾರೆ. ಹೊಸ ದುಬಾರಿ ಕಾರುಗಳನ್ನು ಖರೀದಿಸಲು ಸಾಧ್ಯವಾಗದ ಅಥವಾ ಚಾಲನೆಯ ವಿಷಯದಲ್ಲಿ ಹೊಸತಾಗಿರುವ ಜನರು ಉಪಯೋಗಿಸಿದ ಕಾರುಗಳತ್ತ ತಿರುಗುತ್ತಿದ್ದಾರೆ, ಅಂದರೆ ಸೆಕೆಂಡ್ ಹ್ಯಾಂಡ್ ಕಾರುಗಳು. ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸಲು ಜನರಿಗೆ ಸಹಾಯ ಮಾಡಲು ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಅನೇಕ ಬ್ಯಾಂಕುಗಳು ಉಪಯೋಗಿಸಿದ ಕಾರು ಸಾಲದ ಸೌಲಭ್ಯವನ್ನು ಹೊಂದಿವೆ. ಕೆಲವು ಬ್ಯಾಂಕುಗಳಲ್ಲಿ ಬಡ್ಡಿದರವೂ ಕಡಿಮೆ. ಉಪಯೋಗಿಸಿದ ಕಾರುಗಳಿಗೆ ಸಾಲದ ಮೇಲೆ ಯಾವ ಯಾವ ಬ್ಯಾಂಕ್ ಗಳು ಕಡಿಮೆ ಬಡ್ಡಿದರ ವಿಧಿಸುತ್ತವೆ ಎಂಬುದನ್ನೊಮ್ಮೆ ತಿಳಿಯೋಣ ಬನ್ನಿ.

ಇದನ್ನು ಓದಿ- ದೇಶದಲಿಯೇ ಅತ್ಯಂತ ಅಗ್ಗದ ಬಡ್ಡಿದರದಲ್ಲಿ Home Loan ನೀಡಲಿದೆ ಈ ಕಂಪನಿ

- ಕೊಟಕ್ ಮಹಿಂದ್ರಾ: ಈ ಬ್ಯಾಂಕ್ ನಲ್ಲಿ ಹೊಸ ಮತ್ತು ಉಪಯೋಗಿಸಿದ ಎರಡೂ ಕಾರುಗಳಿಗೆ ಸಾಲಗಳಿವೆ. ಬ್ಯಾಂಕಿನ ವೆಬ್‌ಸೈಟ್ ಪ್ರಕಾರ, ಪ್ರಸ್ತುತ  ಕಾರು ಸಾಲದ ವಾರ್ಷಿಕ ಬಡ್ಡಿದರವು 6.50% ರಿಂದ 20% ವರೆಗೆ ಇರುತ್ತದೆ.

- ಕೆನರಾ ಬ್ಯಾಂಕ್: ಕೆನರಾ ಬ್ಯಾಂಕ್ ವಾರ್ಷಿಕವಾಗಿ ಶೇ.7.30 ರಿಂದ ಶೇ.9.90ರವರೆಗೆ ಬಡ್ಡಿ ಪಡೆಯುತ್ತದೆ.

- ಬ್ಯಾಂಕ್ ಆಫ್ ಇಂಡಿಯಾ: ವಿವಿಧ ಕ್ರೆಡಿಟ್ ಸ್ಕೋರ್ ಆಧರಿಸಿ ಶೇ.7.35 ರಿಂದ ಶೇ.7.95 ರಷ್ಟು ವಾರ್ಷಿಕ ಬಡ್ಡಿ ವಿಧಿಸುತ್ತದೆ.

ಇದನ್ನು ಓದಿ- Home Loan ಪಡೆಯಲು ಇದು ಸರಿಯಾದ ಸಮಯ, HDFC ಸೇರಿದಂತೆ ಹಲವು ಬ್ಯಾಂಕ್ ಗಳ ಬಡ್ಡಿದರದಲ್ಲಿ ಮತ್ತೆ ಇಳಿಕೆ

- ಪಂಜಾಬ್ ನ್ಯಾಷನಲ್ ಬ್ಯಾಂಕ್:  ಫ್ಲೋಟಿಂಗ್ ರೇಟ್  ಆಯ್ಕೆಯಡಿ ಮಹಿಳೆಯರು, ಪಿಎನ್‌ಬಿ ರೈಡ್ ಮತ್ತು ಕಾರ್ಪೊರೇಟ್‌ಗಳಿಗೆ ವಾರ್ಷಿಕ 8.55%, ವಿಭಿನ್ನ ಕ್ರೆಡಿಟ್ ಸ್ಕೋರ್‌ಗಳ ಆಧಾರದ ಮೇಲೆ ವಿವಿಧ ಗ್ರಾಹಕರಿಗೆ ವಾರ್ಷಿಕ 8.55 ರಿಂದ 8.80 ರವರೆಗೆ ಬಡ್ಡಿ ವಿಧಿಸಲಾಗುತ್ತದೆ. ಫಿಕ್ಸೆಡ್ ರೇಟ್ ಆಯ್ಕೆಯ ಅಡಿ ಎಲ್ಲ ಗ್ರಾಹಕರಿಗೆ ವಾರ್ಷಿಕವಾಗಿ ಶೇ.9.30 ರಷ್ಟು ಬಡ್ಡಿ ವಸೂಲಿ ಮಾಡಲಾಗುತ್ತದೆ.

- ಎಸ್.ಬಿ.ಐ: ವಿವಿಧ ಕ್ರೆಡಿಟ್ ಸ್ಕೋರ್ ಆಧರಿಸಿ ವಾರ್ಷಿಕವಾಗಿ ಶೇ.9.50 ರಿಂದ ಶೇ.10.50ರಷ್ಟು ಬಡ್ಡಿ ವಿಧಿಸುತ್ತದೆ.

ಇದನ್ನು ಓದಿ- Home Loan ಇಎಂಐನಲ್ಲಿ ನಿಮಗೆ ಪರಿಹಾರ ಸಿಗುತ್ತದೆಯೇ?

- ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ: ವಿವಿಧ ಕ್ರೆಡಿಟ್ ಸ್ಕೋರ್ ಆಧರಿಸಿ ವಾರ್ಷಿಕವಾಗಿ ಶೇ.10.40 ರಿಂದ ಶೇ.10.50ರಷ್ಟು ಬಡ್ಡಿ ವಿಧಿಸಲಾಗುತ್ತದೆ.

- ICICI ಬ್ಯಾಂಕ್: ವಾರ್ಷಿಕವಾಗಿ ಶೇ.12.00 ಯಿಂದ ಶೇ.14.50 ರಷ್ಟು ಬಡ್ಡಿ ವಿಧಿಸುತ್ತದೆ.

Trending News