Tata Group : ನಂಬಿಕೆಗೆ ಮತ್ತೊಂದು ಹೆಸರೇ ಟಾಟಾ ಗ್ರೂಪ್. ಉಪ್ಪಿನಿಂದ ಹಿಡಿದು ವಿಮಾನದವರೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಟಾಟಾ ತನ್ನ ಛಾಪು ಮೂಡಿಸಿದೆ. ಇಂದು ಟಾಟಾ ಗ್ರೂಪ್ ಈ ಹಣತಕ್ಕೆ ಬೆಳೆದಿರುವ ಹಿಂದೆ ಇರುವುದು ಜೆಆರ್ ಡಿ ಟಾಟಾ ಮತ್ತು ರತನ್ ಟಾಟಾ ಅವರ ವರ್ಷಗಳ ಪರಿಶ್ರಮ.ವಯಸ್ಸಿನ ಕಾರಣದಿಂದಾಗಿ ಇನ್ನು ಮುಂದೆ ರತನ್ ಟಾಟಾ ಈ ಸಂಸ್ಥೆಯನ್ನು ಮುನ್ನಡೆಸುವುದು ಕಷ್ಟ. ಹಾಗಾಗಿ ಈ ಬೃಹತ್ ಸಾಮ್ರಾಜ್ಯದ ಜವಾಬ್ದಾರಿಯನ್ನು ಯಾರಿಗಾದರೂ ವಹಿಸಲೇ ಬೇಕು. 34 ವರ್ಷದ ಮಾಯಾ ಟಾಟಾ ದೇಶದ ಅತ್ಯಂತ ಪ್ರಭಾವಶಾಲಿ ವ್ಯಾಪಾರ ಸಾಮ್ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಹೊರಲಿದ್ದಾರೆ. 


COMMERCIAL BREAK
SCROLL TO CONTINUE READING

ಯಾರು ಈ ಮಾಯಾ ಟಾಟಾ ? :
ಮಾಯಾ ಟಾಟಾ ಅವರು ಟಾಟಾ ಗ್ರೂಪಿಗೆ ಸಂಬಂಧಿಸಿದ ಪ್ರಮುಖ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದಾರೆ.ಮಾಯಾ, ರತನ್ ಟಾಟಾ ಅವರ ಸಹೋದರನ ಮಗಳು. ಮಾಯಾ ಟಾಟಾ ಅವರು ನೋಯೆಲ್ ಟಾಟಾ ಮತ್ತು ಆಲೂ ಮಿಸ್ತ್ರಿ ದಂಪತಿಯ ಪುತ್ರಿ. ನೋಯೆಲ್ ಟಾಟಾ, ರತನ್ ಟಾಟಾ ಅವರ ಮಲ ಸಹೋದರ.ಅವರ ತಾಯಿ,ಅಲ್ಲು ಮಿಸ್ತ್ರಿ, ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ದಿವಂಗತ ಸೈರಸ್ ಮಿಸ್ತ್ರಿ ಅವರ ಸಹೋದರಿ.ಮಿಸ್ತ್ರಿ ಕುಟುಂಬವು ಸೈರಸ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಮತ್ತು ಸ್ಟರ್ಲಿಂಗ್ ಇನ್ವೆಸ್ಟ್‌ಮೆಂಟ್ ಗ್ರೂಪ್ ಮೂಲಕ ಟಾಟಾ ಸನ್ಸ್‌ನಲ್ಲಿ 18.4% ಪಾಲನ್ನು ಹೊಂದಿದೆ.ಟಾಟಾ ಸನ್ಸ್‌ನಲ್ಲಿ ಅವರ ಪಾಲನ್ನು ಪರಿಗಣಿಸಿ, ಭವಿಷ್ಯದಲ್ಲಿ ಅವರೇ ಟಾಟಾ ಗ್ರೂಪ್ ಅನ್ನು ಮುನ್ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ.


ಇದನ್ನೂ ಓದಿ: ಅಂಬಾನಿಯ ಆಂಟಿಲಿಯಾ 27 ಮಹಡಿಯ ಮನೆಯಾದರೂ ನೀತಾ-ಮುಖೇಶ್ ಈ ಫ್ಲೋರ್ ಗಷ್ಟೇ ಹೋಗುವುದು! ಇದರ ಹಿಂದಿದೆ ಈ ರಹಸ್ಯ


34ರ ಹರೆಯದ ಮಾಯಾ ಟಾಟಾ ಗ್ರೂಪ್‌ನಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.ಅವರು ವಾರ್ವಿಕ್ ವಿಶ್ವವಿದ್ಯಾನಿಲಯ ಮತ್ತು UK ಯ ಬೇಯೆಸ್ ಬಿಸಿನೆಸ್ ಸ್ಕೂಲ್ ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ಟಾಟಾ ಕ್ಯಾಪಿಟಲ್‌ನ ಪ್ರಮುಖ ಖಾಸಗಿ ಇಕ್ವಿಟಿ ಫಂಡ್ ಟಾಟಾ ಆಪರ್ಚುನಿಟೀಸ್ ಫಂಡ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿ ಅವರು ಬಂಡವಾಳ ನಿರ್ವಹಣೆ ಮತ್ತು ಹೂಡಿಕೆದಾರರ ಸಂಬಂಧಗಳಲ್ಲಿ ಉತ್ತಮ ಸಾಧನೆ ಮಾಡಿದರು.


ಟಾಟಾ ಹೊಸ ಆಪ್ ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ :
ಇದಷ್ಟೇ ಅಲ್ಲ, ಟಾಟಾ ಡಿಜಿಟಲ್ ನಲ್ಲಿ ಕೆಲಸ ಮಾಡುತ್ತಿರುವಾಗ ಟಾಟಾ ನ್ಯೂ ಆಪ್ ಬಿಡುಗಡೆ ಮಾಡುವಲ್ಲಿ ಮಾಯಾ ಪ್ರಮುಖ ಪಾತ್ರ ವಹಿಸಿದ್ದಾರೆ.ಇದು ಗ್ರೂಪಿನ  ದೊಡ್ಡ ಸಾಧನೆಯಾಗಿತ್ತು. ಪ್ರಸ್ತುತ ಅವರು ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್‌ನ ಆರು ಮಂಡಳಿಯ ಸದಸ್ಯರಲ್ಲಿ ಒಬ್ಬರು.ಇದು ಕೋಲ್ಕತ್ತಾದಲ್ಲಿರುವ ಕ್ಯಾನ್ಸರ್ ಆಸ್ಪತ್ರೆಯಾಗಿದ್ದು,ಇದನ್ನು 2011 ರಲ್ಲಿ ರತನ್ ಟಾಟಾ ಉದ್ಘಾಟಿಸಿದ್ದರು. 


ಇದನ್ನೂ ಓದಿ : PMGKAY: ಉಚಿತ ಪಡಿತರ ವಿತರಣೆಗೆ ಯಾವುದೇ ತೊಂದರೆ ಇಲ್ಲ: ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಬಗ್ಗೆ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದೇನು?


 ಮೂಲಗಳ ಪ್ರಕಾರ ಟಾಟಾ ಗ್ರೂಪ್‌ನಲ್ಲಿ ಮಾಯಾ ಪ್ರಭಾವ ದಿನೇ ದಿನೇ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಹಂತ ಹಂತವಾಗಿ ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸಲು ಇವರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.  ಟಾಟಾ ಸನ್ಸ್‌ನ ಎಜಿಎಂನಲ್ಲಿ ಮಾಯಾ ಅವರ ಪಾತ್ರವನ್ನು ನೋಡಿದ ನಂತರ, ಭವಿಷ್ಯದಲ್ಲಿ ಈ ಸಾಮ್ರಾಜ್ಯದ ಜವಾಬ್ದಾರಿ ಮಾಯಾ ಟಾಟಾ ಕೈಗೆ ಹೋದರೆ ಆಶ್ಚರ್ಯವಿಲ್ಲ ಎನ್ನಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.