ಗಗನಕ್ಕೇರಿದ ಚಿನ್ನದ ಬೆಲೆ.. ಬೆಳ್ಳಿ ದರದಲ್ಲಿ ಭಾರಿ ದೊಡ್ಡ ಬದಲಾವಣೆ.. ಇತ್ತೀಚಿನ ದರಗಳು ಹೇಗಿವೆ ತಿಳಿಯಿರಿ

Gold Price Today: ಚಿನ್ನದ ಬೆಲೆ ಸತತ ಏರುತ್ತಿದ್ದು, ಬಂಗಾರ ಖರೀದಿಗೆಂದು ಕಾಯುತ್ತಿರುವ ಗ್ರಾಹಕರಿಗೆ ಮತ್ತೊಮ್ಮೆ ಆಘಾತ ಉಂಟಾಗಲಿದೆ.. ನಿರಂತರ ಇಳಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಸತತ ಏರುತ್ತಿದೆ.. ಅದರಲ್ಲೂ ಚಿನ್ನ  70,000 ರೂ ಗಡಿ ತಲುಪಿದೆ.. ಹಾಗಾದ್ರೆ ಸದ್ಯದ ಚಿನ್ನ&ಬೆಳ್ಳಿ ಬೆಲೆ ಹೇಗಿದೆ?

Written by - Savita M B | Last Updated : Aug 2, 2024, 08:03 AM IST
  • ಚಿನ್ನಕ್ಕೆ ಯಾಕೆ ಇಷ್ಟು ಬೇಡಿಕೆ ಬಂದಿದೆ
  • ಬಂಗಾರ ಮತ್ತು ಬೆಳ್ಳಿ ಬೆಲೆ ಹೀಗಿದೆ
ಗಗನಕ್ಕೇರಿದ ಚಿನ್ನದ ಬೆಲೆ.. ಬೆಳ್ಳಿ ದರದಲ್ಲಿ ಭಾರಿ ದೊಡ್ಡ ಬದಲಾವಣೆ.. ಇತ್ತೀಚಿನ ದರಗಳು ಹೇಗಿವೆ ತಿಳಿಯಿರಿ title=

Gold rate: ಸದ್ಯ ಚಿನ್ನಕ್ಕೆ ಯಾಕೆ ಇಷ್ಟು ಬೇಡಿಕೆ ಬಂದಿದೆ ಎಂದರೇ ಯುದ್ಧ ಶುರುವಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ ಕರೆನ್ಸಿ ಕೊರತೆ ಇದೆ.. ಹೀಗಾಗಿ ಬಂಗಾದ ಮೇಲೆ ಜನರ ನಂಬಿಕೆ ಹೆಚ್ಚಾಗಿದ್ದು, ಚಿನ್ನ ಖರೀದಿಗೆ ಮುಂದಾಗಿದ್ದಾರೆ.. 

ಇರಾನ್ & ಇಸ್ರೇಲ್ ನಡುವೆ ಯುದ್ಧ ನಡೆಯುವ ಎಲ್ಲ ಸಂಭವಗಳಿದ್ದು, ಇದೇ ಕಾರಣಕ್ಕೆ ಬಂಗಾರ ಹಾಗೂ ಬೆಳ್ಳಿ ಬೆಲೆ ಭರ್ಜರಿ ಏರಿಕೆ ಕಂಡಿದೆ.. ಹಾಗಾದ್ರೆ ಇಂದಿನ ಚಿನ್ನ, ಬೆಳ್ಳಿ ಬೆಲೆ ಹೇಗಿದೆ ಎನ್ನುವುದನ್ನು ಇಲ್ಲಿ ತಿಳಿಯಿರಿ.. 

ಇದನ್ನೂ ಓದಿ-Airtel Free Offer!ಈ ಬಳಕೆದಾರರಿಗೆ ಸಿಗಲಿದೆ ಉಚಿತ ಕರೆ ಮತ್ತು ಡೇಟಾ ಸೌಲಭ್ಯ 

ಬಂಗಾರ ಮತ್ತು ಬೆಳ್ಳಿ ಬೆಲೆ ಹೀಗಿದೆ: 
ಕರ್ನಾಟಕ ಸೇರಿದಂತೆ ಬೆಂಗಳೂರಿನಲ್ಲಿಯೂ ಚಿನ್ನ ಭರ್ಜರಿ ಏರಿಕೆ ಕಂಡಿದೆ.. ಅದರಲ್ಲೂ 24 ಕ್ಯಾರೆಟ್ ಬಂಗಾರದ ಬೆಲೆ ಇನ್ನೂ ಹೆಚ್ಚಾಗಿದೆ.. ಸದ್ಯ 100 ಗ್ರಾಂಗೆ 5,400 ರೂ ಏರಿದೆ.. ಎಂದರೇ ಮತ್ತೊಮ್ಮೆ ಚಿನ್ನ 70 ಸಾವಿರ ಗಡಿ ತಲುಪಿದೆ.. ಅದರಂತೆ 22 ಕ್ಯಾರೆಟ್ ಚಿನ್ನದ ಬೆಲೆ ಕೂಡ ಏರಿದ್ದು, ಬೆಳ್ಳಿ ಬೆಲೆ 1 ಲಕ್ಷವನ್ನು ಸಮೀಪಿಸುವ ಸಾಧ್ಯತೆಗಳಿವೆ.. 

ಬೆಳ್ಳಿ ಬೆಲೆ ಹೀಗಿದೆ: 
22 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 5,000 ರೂಪಾಯಿ ಹೆಚ್ಚಾಗಿದೆ. ಎಂದರೇ 10 ಗ್ರಾಂಗೆ 500 ಏರಿಕೆ ಕಂಡಿದೆ.. ಪ್ರತಿ 10 ಗ್ರಾಂಗೆ 64,500 ರೂ ನಿಗದಿಯಾಗಿದೆ.. ಮತ್ತೊಂದೆಡೆ ಬೆಳ್ಳಿ ಬೆಲೆಯಲ್ಲಿ 1500 ರೂ ಏರಿಕೆಯಾಗಿದ್ದು 1 ಕೆಜಿ ಬೆಳ್ಳಿಗೆ 85,500 ರೂ ದರ ಫಿಕ್ಸ್‌ ಮಾಡಲಾಗಿದೆ.. ಒಟ್ಟಾರೆ ಹೇಳವುದಾದರೇ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಸತತ ಏರಿಕೆ ಕಂಡುಬರುತ್ತಿದ್ದು, ಅದರಂತೆ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಇದ್ದು, ಬೆಳ್ಳಿ ಬೆಲೆಯೂ ಒಂದು ಲಕ್ಷ ತಲುಪಿದರೂ ಆಶ್ಚರ್ಯವಿಲ್ಲ.. 

 ಇದನ್ನೂ ಓದಿ-Gold Purchase: ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿಸಬಹುದು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News