Gruha Lakshmi Scheme: ಆಗಸ್ಟ್‌ ತಿಂಗಳ ಈ ವಾರದಲ್ಲಿ ಬರುತ್ತೆ ಗೃಹಲಕ್ಷ್ಮಿ ಯೋಜನೆಯ ₹4,000 ಹಣ!

Gruha Lakshmi Scheme: ಈಗಾಗಲೇ ನೇರ ಲಾಭ ವರ್ಗಾವಣೆ(DBT) ಮೂಲಕ ಅರ್ಹ ಫಲಾನುಭವಿಗಳಿಗೆ 10 ಕಂತುಗಳ ಹಣವನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಒಟ್ಟು 20 ಸಾವಿರ ರೂ.ವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ.

Written by - Puttaraj K Alur | Last Updated : Aug 1, 2024, 06:07 PM IST
  • ಮೇ ತಿಂಗಳಿನವರೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಯಾಗಿದೆ
  • ಕಾರಣಾಂತರಗಳಿಂದ ಜೂನ್‌ & ಜುಲೈ ತಿಂಗಳ ಹಣ ಪಾವತಿಯಾಗಿಲ್ಲ
  • ಆಗಸ್ಟ್‌ ಮೊದಲ ವಾರದಲ್ಲಿ 2 ತಿಂಗಳ ಒಟ್ಟು ₹4,000 ಹಣ ಬರಲಿದೆ
Gruha Lakshmi Scheme: ಆಗಸ್ಟ್‌ ತಿಂಗಳ ಈ ವಾರದಲ್ಲಿ ಬರುತ್ತೆ ಗೃಹಲಕ್ಷ್ಮಿ ಯೋಜನೆಯ ₹4,000 ಹಣ! title=
ಗೃಹಲಕ್ಷ್ಮಿ ಯೋಜನೆ

Gruha Lakshmi Scheme: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಗೃಹಲಕ್ಷ್ಮಿ ಯೋಜನೆಯು ಮಹಿಳಾ ಸಬಲೀಕರಣದ ಭಾಗವಾಗಿ ಕಾಂಗ್ರೆಸ್‌ ಸರ್ಕಾರವು ಜಾರಿಗೆ ತಂದಿರುವ ಯೋಜನೆಯಾಗಿದೆ. ಈ ಯೋಜನೆಯಡಿ ಪ್ರತಿಯೊಂದು ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು ₹2,000 ಜಮಾ ಮಾಡಲಾಗುತ್ತದೆ. ಇದು ಮಹಿಳೆಯರಿಗೆ ಆರ್ಥಿಕ ಬೆಂಬಲದ ಮೂಲಾಧಾರವಾದ್ದು, ಕೋಟ್ಯಂತರ ಮಹಿಳೆಯರಿಗೆ ನೆರವು ನೀಡಲಾಗುತ್ತಿದೆ.

ಕರ್ನಾಟಕದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿರುವ ಈ ಯೋಜನೆಯು ನೇರ ಲಾಭ ವರ್ಗಾವಣೆ(DBT) ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪುತ್ತದೆ. ಈಗಾಗಲೇ 10 ಕಂತುಗಳ ಹಣವನ್ನು ಯಶಸ್ವಿಯಾಗಿ ವಿತರಿಸಲಾಗಿದ್ದು, ಒಟ್ಟು 20 ಸಾವಿರ ರೂ.ವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ.

ಇದನ್ನೂ ಓದಿ: Gold Purchase: ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿಸಬಹುದು ಗೊತ್ತಾ?

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸಿದ ಬಳಿಕ ಜಾರಿಗೆ ಬಂದ ಈ ಯೋಜನೆ ಲೋಕಸಭಾ ಚುನಾವಣೆವರೆಗೂ ಚೆನ್ನಾಗಿಯೇ ಜಾರಿಯಾಗಿತ್ತು. ಆದರೆ ಕೆಲವು ಕಾರಣಗಳಿಂದ ಕಳೆದ 2 ತಿಂಗಳಿನಿಂದ ಈ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪಿಲ್ಲ. ಹೀಗಾಗಿ ಕೋಟ್ಯಂತರ ಮಹಿಳೆಯರಿಗೆ ಆತಂಕ ಉಂಟಾಗಿದ್ದು, ಹಣ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಳೆದ 2 ತಿಂಗಳಿನಿಂದ ಈ ಯೋಜನೆಯ ಹಣ ತಲುಪದ ಕಾರಣ ಯಾವಾಗ ಹಣ ಬರುತ್ತದೆ ಅಂತಾ ಮಹಿಳೆಯರು ಕಾತುರದಿಂದ ಕಾಯುತ್ತಿದ್ದಾರೆ.

ಕೆಲವರು ಇನ್ಮುಂದೆ ನಮಗೆ ಹಣ ಬರುತ್ತೋ ಇಲ್ವೋ ಅಂತಾ ಚಿಂತಿತರಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತದೆ ಅಂತಾ ಕಾಯುತ್ತಿರುವ ಮಹಿಳೆಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಈ ಕಾಯುವಿಕೆ ಈಗ ಅಂತ್ಯವಾಗಿದೆ. ಸ್ವತಃ ಸರ್ಕಾರವೇ ಈ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ್ದು, ಜೂನ್‌ ಮತ್ತು ಜುಲೈತಿಂಗಳ 2 ತಿಂಗಳ ಕಂತಿನ ಹಣವನ್ನು ಒಟ್ಟಿಗೆ ₹4,000 ವನ್ನು ಇದೇ ಆಗಸ್ಟ್‌ ಮೊದಲ ವಾರದಲ್ಲಿ ಯಜಮಾನಿಯರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.   

ಇದನ್ನೂ ಓದಿ: Top 5 Bikes In India: ಇವೇ ನೋಡಿ 2024ರ ಟಾಪ್ ಬೈಕುಗಳು

ಈ ಬಗ್ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಾಹಿತಿ ನೀಡಿದ್ದು, ಈ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ. ಮೇ ತಿಂಗಳಿನವರೆಗೆ ಸರಿಯಾಗಿಯೇ ಹಣ ಪಾವತಿಯಾಗಿದೆ. ಆದರೆ ಕಾರಣಾಂತರಗಳಿಂದ ಜೂನ್‌ ಮತ್ತು ಜುಲೈ ತಿಂಗಳ ಹಣ ಪಾವತಿಯಾಗಿಲ್ಲ. ಎಲ್ಲಾ ರೀತಿಯ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಆಗಸ್ಟ್‌ ಮೊದಲ ವಾರದೊಳಗೆ ಎಲ್ಲಾ ಮಹಿಳೆಯರ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಕೋಟ್ಯಂತರ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ನಮ್ಮ ಸರ್ಕಾರವು ಬದ್ಧವಾಗಿದೆ. ಮಹಿಳೆಯರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಹೀಗಾಗಿ ಶೀಘ್ರವೇ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಗೃಹಲಕ್ಷ್ಮಿ ಯೋಜನೆಯ 2 ತಿಂಗಳ 4,000 ರೂ. ಹಣ ಜಮಾ ಆಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

Trending News