ನವದೆಹಲಿ: Modi Government Big Decision - ಕೊರೊನಾ ಎರಡನೇ ಅಲೆಯ (Coronavirus Second Wave) ಹೊಡೆತಕ್ಕೆ ಸಿಲುಕಿರುವ ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರಿಗೆ ಕೇಂದ್ರದ ಪ್ರಧಾನ ನರೇಂದ್ರ ಮೋದಿ ಸರ್ಕಾರ (PM Narendra Modi Government) ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಚಿಲ್ಲರೆ ಹಾಗೂ ಸಗಟು ವ್ಯಾಪಾರವನ್ನು MSME ವ್ಯಾಪ್ತಿಗೆ ತರಲು ಮೋದಿ ಸರ್ಕಾರ ನಿರ್ಧರಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ನಿತೀನ್ ಗಡ್ಕರಿ (Union Minister Nitin Gadkari) ಈ ಮಾಹಿತಿ ನೀಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರಿಗೆ ಸುಲಭವಾಗಿ ಸಾಲ ಸಿಗಲಿದೆ ಎಂದು ಗಡ್ಕರಿ ಹೇಳಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ದೇಶದ ಸುಮಾರು 2.5 ಕೋಟಿ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಲಾಭ ಉಂಟಾಗಲಿದೆ.


COMMERCIAL BREAK
SCROLL TO CONTINUE READING

ಪರಿಷ್ಕೃತ ಮಾರ್ಗಸೂಚಿಯಡಿಯಲ್ಲಿ, ಇದೀಗ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು ಎಂಎಸ್‌ಎಂಇ ( Micro, Small & Medium Enterprises) ವ್ಯಾಪ್ತಿಗೆ ಬರಲಿದ್ದಾರೆ. MSME ಕ್ಷೇತ್ರವನ್ನು ಬಲಪಡಿಸಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಎಂಎಸ್‌ಎಂಇ ವಲಯವು ಆರ್ಥಿಕ ಬೆಳವಣಿಗೆಯ ಎಂಜಿನ್ ಆಗಿದೆ. ಚಿಲ್ಲರೆ (Retail) ಮತ್ತು ಸಗಟು (Wholesale) ವ್ಯವಹಾರವನ್ನು MSME ವ್ಯಾಪ್ತಿಗೆ ತರುವ ದೊಡ್ಡಅನುಕೂಲ ಸಾಲ ಸಿಗುವಲ್ಲಿ ಆಗಲಿದೆ. ಆದ್ಯತೆಯ ವಲಯಕ್ಕೆ ಸುಲಭವಾದ ನಿಯಮಗಳಲ್ಲಿ ಸಾಲ ನೀಡಲು ರಿಸರ್ವ್ ಬ್ಯಾಂಕಿನಿಂದ ಹಲವು ಅವಕಾಶಗಳನ್ನು ನೀಡಲಾಗಿದೆ ಎಂದು ಗಡ್ಕರಿ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
7th Pay Commission: ಪ್ರತಿ ತಿಂಗಳು ಸರ್ಕಾರಿ ನೌಕರರ ವೇತನದಲ್ಲಿ ರೂ.7750 ವೃದ್ಧಿ, ಏನಿದು ಲೆಕ್ಕಾಚಾರ?


RBI ಪ್ರಕಾರ, ಪರಿಷ್ಕೃತ PSL ಮಾರ್ಗಸೂಚಿಗಳ ಮೂಲಕ ಬಂಡವಾಳ ಕಡಿಮೆ ಇರುವ ಈ ವಲಯದಲ್ಲಿ ಸಾಲ ಸೌಲಭ್ಯ ಒದಗಿಸಲು ಮತ್ತಷ್ಟು ಸುಲಭವಾಗಲಿದೆ.


ವ್ಯಾಪಾರಿಗಳ ಪಾಲಿಗೆ ಐತಿಹಾಸಿಕ ಹೆಜ್ಜೆ - CAIT
ಚಿಲ್ಲರೆ ಮತ್ತು ಸಗಟು ವ್ಯಾಪಾರವನ್ನು MSME ಅಡಿ ತರುವ ನಿರ್ಧಾರ ಒಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್  (CAIT) ಹೇಳಿದೆ. ಕಳೆದ ಸುಮಾರು ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ನಾವು ಈ ವಿಷಯವನ್ನು ಸರ್ಕಾರದ ಬಳಿ ಪ್ರಸ್ತಾಪಿಸುತ್ತಿದ್ದೆವು ಎಂದು ಕ್ಯಾಟ್ (Confederation Of All India Traders) ರಾಷ್ಟ್ರೀಯ ಅಧ್ಯಕ್ಷ ಬಿ. ಸಿ. ಭರ್ತಿಯಾ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಖಂಡೆಲ್ವಾಲ್ ಹೇಳಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ದೇಶದ ಕೋಟ್ಯಾಂತರ ಸಣ್ಣ ವ್ಯಾಪಾರಿಗಳಿಗೆ ಲಾಭ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ- Post Office ಈ ಯೋಜನೆಯಲ್ಲಿ ಹಣ ದ್ವಿಗುಣ : ಏನೆಲ್ಲಾ ಪ್ರಯೋಜನಗಳಿವೆ ಇಲ್ಲಿ ನೋಡಿ!


ಈ ನಿರ್ಧಾರದಿಂದ, ವ್ಯಾಪಾರಿಗಳು ಎಂಎಸ್‌ಎಂಇ ವರ್ಗಕ್ಕೆ ಸೇರುತ್ತಾರೆ ಮತ್ತು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನೀಡುವ ಆದ್ಯತಾ ವಲಯದ ಸಾಲ ಪಡೆದುಕೊಳ್ಳಲು ಅವರಿಗೆ ಅನುಕೂಲವಾಗಲಿದೆ. ಇದರ ಹೊರತಾಗಿ, ಎಂಎಸ್‌ಎಂಇ ವಲಯಕ್ಕೆ ಲಾಭವಾಗುತ್ತಿರುವ ಸರ್ಕಾರದ ಇತರ ಯೋಜನೆಗಳ ಲಾಭವನ್ನು ವ್ಯಾಪಾರಿಗಳು ಪಡೆದುಕೊಳ್ಳಲು ಸಾಧ್ಯವಾಗಲಿದೆ. ದೇಶದ ವ್ಯಾಪಾರ ಸಮುದಾಯವು ಸುಮಾರು 40 ಕೋಟಿ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ ಮತ್ತು ಸುಮಾರು 115 ಲಕ್ಷ ಕೋಟಿಗಳಷ್ಟು ವಾರ್ಷಿಕ ವ್ಯವಹಾರವನ್ನು ಮಾಡುತ್ತಿದೆ ಎಂದು ಸಿಎಐಟಿ ಹೇಳಿದೆ.


ಇದನ್ನೂ ಓದಿ- LICಯಿಂದ ಹೊಸ ಪಿಂಚಣಿ ಯೋಜನೆ : ಒಮ್ಮೆ ಮಾತ್ರ ಹಣ ಠೇವಣಿ, ವೃದ್ದಾಪ್ಯದಲ್ಲಿ ಪಿಂಚಣಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.