ದೇಶಾದ್ಯಂತ ಇರುವ ಲಕ್ಷಾಂತರ ಎಲ್‌ಐಸಿ ಏಜೆಂಟ್ ಹಾಗೂ ನೌಕರರಿಗೆ ಭಾರಿ ಸಂತಸಸ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!
Good News For LIC Agents: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಉದ್ಯೋಗಿಗಳು ಮತ್ತು ಎಲ್‌ಐಸಿ ಏಜೆಂಟರುಗಳ ಬಹುಕಾಲದ ಒಂದು ಬೇಡಿಕೆಗೆ ಇಂದು ತೆರೆಬಿದ್ದಂತಾಗಿದೆ. ಹೌದು ದೇಶಾದ್ಯಂತ ಇರುವ ಲಕ್ಷಾಂತರ ಎಲ್‌ಐಸಿ ಏಜೆಂಟ್ ಹಾಗೂ ನೌಕರರಿಗೆ ಮೋದಿ ಸರ್ಕಾರ ಗೌರಿ ಗಣೇಶ ಹಬ್ಬದ ಬರ್ಜರಿ ಗಿಫ್ಟ್ ನೀಡಿದೆ. .
ಬೆಂಗಳೂರು: ನೀವು ಎಲ್‌ಐಸಿ ಏಜೆಂಟ್ ಅಥವಾ ಎಲ್‌ಐಸಿ ಉದ್ಯೋಗಿಯಾಗಿದ್ದರೆ ಈ ಸುದ್ದಿ ಕೇವಲ ನಿಮಗಾಗಿ. ಇಂದು ಹಣಕಾಸು ಸಚಿವಾಲಯವು ಭಾರತೀಯ ಜೀವ ವಿಮಾ ನಿಗಮ (LIC) ಉದ್ಯೋಗಿಗಳು ಮತ್ತು LIC ಏಜೆಂಟ್‌ಗಳಿಗೆ ಕೆಲವು ಪ್ರಯೋಜನಗಳಿಗೆ ಅನುಮೋದನೆಯನ್ನು ನೀಡಿದೆ. ಇದರ ಅಡಿಯಲ್ಲಿ, ಹಣಕಾಸು ಸಚಿವಾಲಯವು ಅವರಿಗೆ ಗ್ರಾಚ್ಯುಟಿಯ ಮಿತಿ, ಅವರ ರಿನ್ಯೂಯೇಬಲ್ ಕಮಿಷನ್ ಅರ್ಹತೆ, ಟರ್ಮ್ ಇನ್ಸ್ಯೂರೆನ್ಸ್ ರಕ್ಷಣೆ ಮತ್ತು ಕುಟುಂಬ ಪಿಂಚಣಿಗೆ ಏಕರೂಪದ ದರಕ್ಕೆ ಅನುಮೋದನೆಯನ್ನು ನೀಡಿದೆ.
ಯಾವ ಕಲ್ಯಾಣಕಾರಿ ನಿರ್ಧಾರಗಳಿಗೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ ಇಲ್ಲಿ ತಿಳಿದುಕೊಳ್ಳಿ
-ಎಲ್‌ಐಸಿ ಏಜೆಂಟ್‌ಗಳಿಗೆ ಗ್ರಾಚ್ಯುಟಿ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಇದು ಅವರ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲಿದೆ ಮತ್ತು ಎಲ್‌ಐಸಿ ಏಜೆಂಟರು ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ.
-ಮರು ನೇಮಕಾತಿಯ ನಂತರ ಬರುವ ಎಲ್‌ಐಸಿ ಏಜೆಂಟ್‌ಗಳನ್ನು ರಿನ್ಯೂಯೇಬಲ್ ಕಮಿಷನ್ ಗೆ ಅರ್ಹರನ್ನಾಗಿ ಮಾಡಲು ಹಣಕಾಸು ಸಚಿವಾಲಯವು ಅನುಮೋದಿಸಿದೆ, ಇದರಿಂದ ಅವರು ಹೆಚ್ಚಿದ ಆರ್ಥಿಕ ಸ್ಥಿರತೆಯನ್ನು ಪಡೆಯುತ್ತಾರೆ. ಪ್ರಸ್ತುತ, LIC ಏಜೆಂಟ್‌ಗಳು ಯಾವುದೇ ಹಳೆಯ ಏಜೆನ್ಸಿ ಅಡಿಯಲ್ಲಿ ಪೂರ್ಣಗೊಂಡ ಯಾವುದೇ ವ್ಯವಹಾರಕ್ಕಾಗಿ ರಿನ್ಯೂಯೇಬಲ್ ಕಮಿಷನ್ ಗೆ ಅರ್ಹರಾಗಿರುವುದಿಲ್ಲ.
ಈ ಕುರಿತು ಹಣಕಾಸು ಸಚಿವಾಲಯವು X- ನಲ್ಲಿ ಪೋಸ್ಟ್ ಮೂಲಕ ಅಧಿಕೃತ ಮಾಹಿತಿಯನ್ನು ನೀಡಿದೆ.
ಹಣಕಾಸಿಗೆ ಸಂಬಂಧಿಸಿದ ಈ 5 ಕೆಲಸಗಳ ಅಂತಿಮ ಗಡುವು ಇದೆ ತಿಂಗಳು ಮುಕ್ತಾಯಗೊಳ್ಳುತ್ತಿವೆ, ತಪ್ಪಿದರೆ ಭಾರಿ ಹಾನಿ!
-ಎಲ್‌ಐಸಿ ಉದ್ಯೋಗಿಗಳ ಕಲ್ಯಾಣಕ್ಕಾಗಿ, ಅವರು ಕುಟುಂಬ ಪಿಂಚಣಿಯ ಲಾಭವನ್ನು ಏಕರೂಪದ ಶೇಕಡಾ 30 ರಷ್ಟು ಪಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ-ಬ್ಯಾಂಕ್ ಖಾತೆ ಖಾಲಿ ಇದೆಯಾ? ಟೆನ್ಷನ್ ಬಿಟ್ಹಾಕಿ ಯುಪಿಐ ಆರಂಭಿಸಿರುವ ಈ ಸೇವೆ ಬಳಸಿ ಪೆಮೆಂಟ್ ಮಾಡಿ!
13 ಲಕ್ಷಕ್ಕೂ ಹೆಚ್ಚು ಎಲ್‌ಐಸಿ ಏಜೆಂಟರು ಪ್ರಯೋಜನ ಪಡೆಯಲಿದ್ದಾರೆ
ಈ ಕಲ್ಯಾಣಕಾರಿ ಕ್ರಮಗಳು 13 ಲಕ್ಷಕ್ಕೂ ಹೆಚ್ಚು ಎಲ್‌ಐಸಿ ಏಜೆಂಟ್‌ಗಳು ಮತ್ತು 1 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡಲಿದೆ, ಅವರು ಎಲ್‌ಐಸಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ಭಾರತದಲ್ಲಿ ವಿಮೆಯ ಆಳವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಲಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ