Business News In Kannada: ನಿಮಗೆ ಯಾವುದಾದರೊಂದು ಪ್ರಮುಖ ಅಥವಾ ಅತ್ಯಗತ್ಯ ಸಂಗತಿಗೆ ಪೆಮೆಂಟ್ ಮಾಡಬೇಕಾಗಿದ್ದು ಮತ್ತು ನಿಮ್ಮ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿರುವುದು ಇಂತಹ ಪರಿಸ್ಥಿತಿ ನಿಮಗೆ ಎಂದಾದರೂ ಎದುರಾಗಿದೆಯಾ? ಹೌದು, ಎಂದಾದಲ್ಲಿ ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಕೆಲಸವು ಸಾಧ್ಯವಾಗುವುದಿಲ್ಲ. ಆದರೆ ಇನ್ಮುಂದೆ ಹಾಗೆ ಆಗುವುದಿಲ್ಲ, ಏಕೆಂದರೆ, UPI ಬಳಕೆದಾರರಿಗಾಗಿ ಕ್ರೆಡಿಟ್ ಲೈನ್ ಸೇವೆಯನ್ನು ಆರಂಭಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮೋದನೆಯನ್ನು ನೀಡಿದೆ. ಅಂದರೆ, ಇನ್ಮುಂದೆ ನೀವು ನಿಮ್ಮ ಬ್ಯಾಂಕ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ದರೂ ಸಹ ಹಣವನ್ನು ಪಾವತಿ ಮಾಡಬಹುದು.
ವಾಸ್ತವವಾಗಿ, RBI ಯುಪಿಐನಲ್ಲಿ 'ಪೇ ಲೇಟರ್' ಸೇವೆಯನ್ನು ಸೇರಿಸಲು ಬ್ಯಾಂಕ್ಗಳಿಗೆ ಅನುಮೋದನೆ ನೀಡಿದೆ. ಕೆಲವು ಬ್ಯಾಂಕುಗಳು ತಮ್ಮ ಪೂರ್ವ-ಅನುಮೋದಿತ ಕ್ರೆಡಿಟ್ ಮಿತಿಯೊಂದಿಗೆ ಪಾವತಿಗಳನ್ನು ಮಾಡಲು ಬಳಕೆದಾರರಿಗೆ ಸಹಾಯ ಮಾಡಲು 'ಪೇ ಲೇಟರ್' ಆಯ್ಕೆಯನ್ನು ಪರಿಚಯಿಸಿವೆ. ಇದು ಹೇಗೆ ಕೆಲಸ ಮಾಡುತ್ತದೆ ಮತ್ತು ಇದರಿಂದ ಹೇಗೆ ಶುಲ್ಕವನ್ನು ಪಾವತಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
UPI ಪೇ ಲೇಟರ್ ಎಂದರೇನು?
ಇತ್ತೀಚೆಗೆ RBI ಯುಪಿಐನಲ್ಲಿ 'ಪೇ ಲೇಟರ್' ಸೇವೆಯನ್ನು ಸೇರಿಸಲು ಬ್ಯಾಂಕ್ಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ, ಬಳಕೆದಾರರು ಖಾಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದರೂ ಸಹ ಪಾವತಿಗಳನ್ನು ಮಾಡಬಹುದು. ಈ ಆಯ್ಕೆಯು 'ಈಗ ಖರೀದಿಸಿ ನಂತರ ಪಾವತಿಸಿ' ಅನ್ನು ಹೋಲುತ್ತದೆ. ಇದುವರೆಗೆ, UPI ಬಳಸುವ ಬಳಕೆದಾರರು ತಮ್ಮ ಉಳಿತಾಯ ಖಾತೆ, ಓವರ್ಡ್ರಾಫ್ಟ್ ಖಾತೆ, ಪ್ರಿಪೇಯ್ಡ್ ವ್ಯಾಲೆಟ್ ಮತ್ತು ಕ್ರೆಡಿಟ್ ಕಾರ್ಡ್ ಅನ್ನು UPI ಗೆ ಮಾತ್ರ ಲಿಂಕ್ ಮಾಡಬಹುದಾಗಿತ್ತು, ಆದರೆ ಇದೀಗ UPI ವಹಿವಾಟುಗಳಿಗೆ ಕ್ರೆಡಿಟ್ ಲೈನ್ ಮಿತಿಯನ್ನು ಸಹ ಬಳಸಬಹುದು. ಈ ಸೇವೆಯು ಪ್ರತಿಯೊಂದು UPI ಅಪ್ಲಿಕೇಶನ್ನಲ್ಲಿಯೂ ಲಭ್ಯವಿರಲಿದೆ.
ಇದನ್ನೂ ಓದಿ-ದೀಪಾವಳಿಗೂ ಮುನ್ನವೇ ಈ ಬಿಸಿನೆಸ್ ಆರಂಭಿಸಿ ಕೈತುಂಬಾ ಹಣ ಸಂಪಾದಿಸಲು ಇದೆ ಸುವರ್ಣಾವಕಾಶ!
ಮೊದಲನೆಯದಾಗಿ, ಬ್ಯಾಂಕ್ಗಳು ಕ್ರೆಡಿಟ್ ಲೈನ್ಗೆ ಗ್ರಾಹಕರಿಂದ ಅನುಮೋದನೆಯನ್ನು ಪಡೆದುಕೊಳ್ಳಬೇಕಾಗುತ್ತದೆ ಮತ್ತು ಅದರ ನಂತರ ಕ್ರೆಡಿಟ್ ಮಿತಿಯನ್ನು ನಿರ್ಧರಿಸಲಾಗುತ್ತದೆ. ಬಳಕೆದಾರರು ತಮ್ಮ UPI ಅಪ್ಲಿಕೇಶನ್ಗಳಲ್ಲಿ 'ಪೇ ಲೇಟರ್' ಆಯ್ಕೆಯನ್ನು ಸಕ್ರಿಯಗೊಳಿಸಬಹುದು. ಪಾವತಿ ಮಾಡಿದ ನಂತರ, ಅದನ್ನು ಮರುಪಾವತಿಸಲು ಬ್ಯಾಂಕ್ ನಿಮಗೆ ಸಮಯವನ್ನು ನೀಡುತ್ತದೆ ಮತ್ತು ಅದಕ್ಕೆ ನೀವು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಇದನ್ನೂ ಓದಿ-ಲಾಭ ಪಡೆದುಕೊಳ್ಳಲು ಇಂದಿನಿಂದಲೇ ಸನ್ನದ್ಧರಾಗಿ, ಶೀಘ್ರದಲ್ಲೇ ಪ್ರಧಾನಿ ಮೋದಿ ಈ ಯೋಜನೆ ಆರಂಭಿಸಲಿದ್ದಾರೆ!
ಪ್ರಸ್ತುತ ಎಚ್ಡಿಎಫ್ಸಿ ಮತ್ತು ಐಸಿಐಸಿಐ ಬ್ಯಾಂಕ್ಗಳು ಯುಪಿಐ ನೌ ಪೇ ಲೇಟರ್ ಸೇವೆಯನ್ನು ಆರಂಭಿಸಿವೆ. ಖಾತೆದಾರರ ಅರ್ಹತೆಗೆ ಅನುಗುಣವಾಗಿ ಎರಡೂ ಬ್ಯಾಂಕ್ಗಳು ಗರಿಷ್ಠ 50,000 ರೂ.ಗಳ ಕ್ರೆಡಿಟ್ ಮಿತಿಯನ್ನು ಇಟ್ಟುಕೊಂಡಿವೆ. RBI ಯುಪಿಐ ಜೊತೆಗೆ ಈ ಸೌಲಭ್ಯವನ್ನು ಸೇರಿಸಲು ಎಲ್ಲಾ ಇತರ ಬ್ಯಾಂಕುಗಳನ್ನು ಕೇಳಿಕೊಂಡಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ