ಹಣಕಾಸಿಗೆ ಸಂಬಂಧಿಸಿದ ಈ 5 ಕೆಲಸಗಳ ಅಂತಿಮ ಗಡುವು ಇದೆ ತಿಂಗಳು ಮುಕ್ತಾಯಗೊಳ್ಳುತ್ತಿವೆ, ತಪ್ಪಿದರೆ ಭಾರಿ ಹಾನಿ!

September 2023 Deadline: ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಕೇವಲ ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಈ ಸೆಪ್ಟೆಂಬರ್ ತಿಂಗಳಿನಲ್ಲಿ ಹಣಕಾಸಿಗೆ ಸಂಬಂಧಿಸಿದ ಹಲವು ಕೆಲಸಗಳಿಗೆ ಅಂತಿಮ ಗಡುವು ಮುಕ್ತಾಯಗೊಳ್ಳುತ್ತಿದೆ. ಹೀಗಾಗಿ ಸಮಯ ಇರುವಾಗಲೇ ಈ ಕೆಲಸಗಳನ್ನು ಪೂರ್ಣಗೊಳಿಸಿ ಸಂಭಾವ್ಯ ಹಾನಿಯಿಂದ ಪಾರಾಗಿ.   

Written by - Nitin Tabib | Last Updated : Sep 17, 2023, 06:10 PM IST
  • ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿದ್ದು, ಅವುಗಳನ್ನು ಬದಲಾಯಿಸಲು 4 ತಿಂಗಳ ಕಾಲಾವಕಾಶ ನೀಡಿತ್ತು.
  • ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು 30 ಸೆಪ್ಟೆಂಬರ್ 2023 ಕೊನೆಯ ದಿನಾಂಕವಾಗಿದೆ,
  • ಅದರ ನಂತರ ನೀವು ರೂ 2000 ನೋಟುಗಳನ್ನು ಹೊಂದಿದ್ದರೂ ಸಹ, ಅವುಗಳನ್ನು ಬದಲಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ಅವು ಅಮಾನ್ಯಗೊಳ್ಳಲಿವೆ.
ಹಣಕಾಸಿಗೆ ಸಂಬಂಧಿಸಿದ ಈ 5 ಕೆಲಸಗಳ ಅಂತಿಮ ಗಡುವು ಇದೆ ತಿಂಗಳು ಮುಕ್ತಾಯಗೊಳ್ಳುತ್ತಿವೆ, ತಪ್ಪಿದರೆ ಭಾರಿ ಹಾನಿ! title=

ನವದೆಹಲಿ: ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಕೇವಲ ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಈ ಸೆಪ್ಟೆಂಬರ್ ತಿಂಗಳಿನಲ್ಲಿ ಹಲವು ಹಣಕಾಸಿನ ಕೆಲಸಗಳಿಗೆ ಅಂತಿಮ ಗಡುವುಗಳಿವೆ. ಪ್ರತಿಯೊಬ್ಬರೂ ಈ ಎಲ್ಲಾ ಹಣಕಾಸು ಸಂಬಂಧಿತ ಕಾರ್ಯಗಳನ್ನು ಸಮಯಕ್ಕೆ ಮುಂಚಿತವಾಗಿ ಪೂರ್ಣಗೊಳಿಸಬೇಕಾಗಿದೆ, ಇಲ್ಲದಿದ್ದರೆ ಅವರು ಸಮಸ್ಯೆಗಳನ್ನು ಎದುರಿಸಬೇಕಾಗುವ ಸಾಧ್ಯತೆ ಇದೆ. ವಾಸ್ತವದಲ್ಲಿ, ಅಕ್ಟೋಬರ್ 1 ರಿಂದ ಅನೇಕ ಬದಲಾವಣೆಗಳು ಸಂಭವಿಸಲಿವೆ. ಹಾಗಾದರೆ ಬನ್ನಿ ಪ್ರಮುಖ ಐದು ಕೆಲಸಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.  ನೀವು ಅಕ್ಟೋಬರ್ 1 ರ ಮೊದಲು ಅಂದರೆ ತಿಂಗಳ ಅಂತ್ಯದವರೆಗೆ ಅವುಗಳನ್ನು ಪೂರ್ಣಗೊಳಿಸಬೇಕಾಗಿದೆ. 

1- ಸಣ್ಣ ಉಳಿತಾಯ ಯೋಜನೆಗೆ ಆಧಾರ ಒದಗಿಸುವುದು
ಸಣ್ಣ ಉಳಿತಾಯ ಯೋಜನೆಯ ಅಸ್ತಿತ್ವದಲ್ಲಿರುವ ಗ್ರಾಹಕರು ಸೆಪ್ಟೆಂಬರ್ 30 ರೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ಒದಗಿಸದಿದ್ದರೆ, ನಂತರ ಅವರ ಖಾತೆಗಳನ್ನು 1 ಅಕ್ಟೋಬರ್ 2023 ರಂದು ಅಮಾನತುಗೊಳಿಸಲಾಗುತ್ತದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS), ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಅಥವಾ ಪೋಸ್ಟ್ ಆಫೀಸ್ ಯೋಜನೆಗಳಂತಹ ಸಣ್ಣ ಉಳಿತಾಯ ಯೋಜನೆಗಳನ್ನು ಸೆಪ್ಟೆಂಬರ್ 30 ರ ಬಳಿಕ ಮುಂದುವರಿಸಲು ಆಧಾರ್ ಸಂಖ್ಯೆಯನ್ನು ಒದಗಿಸುವುದು ಅವಶ್ಯಕವಾಗಿದೆ.

2- SBI WeCare
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ WeCare ವಿಶೇಷ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಲು ಹಿರಿಯ ನಾಗರಿಕರಿಗೆ ಕೊನೆಯ ದಿನಾಂಕ 30 ಸೆಪ್ಟೆಂಬರ್ 2023 ಆಗಿದೆ. ಈ ಯೋಜನೆಗೆ ಹಿರಿಯ ನಾಗರಿಕರು ಮಾತ್ರ ಅರ್ಹರಾಗಿರುತ್ತಾರೆ, ಇದು ಬಲವಾದ ಬಡ್ಡಿತ್ಯನ್ನು ನೀಡುತ್ತದೆ. ಈ ಖಾತೆಗೆ 50 ಬಿಪಿಎಸ್ ಹೆಚ್ಚುವರಿ ಬಡ್ಡಿಯನ್ನು ಬ್ಯಾಂಕ್ ನೀಡುತ್ತದೆ. SBI Wecare ಖಾತೆಯಲ್ಲಿ 7.5 ಪ್ರತಿಶತ ಬಡ್ಡಿ ಲಭ್ಯವಿದೆ.

3- IDBI ಅಮೃತ್ ಮಹೋತ್ಸವ FD
ಐಡಿಬಿಐ ನ ಈ ವಿಶೇಷ FD ಯಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2023 ಆಗಿದೆ. 375 ದಿನಗಳ ಅಮೃತ್ ಮಹೋತ್ಸವ ಎಫ್‌ಡಿ ಯೋಜನೆಯಡಿ, ಸಾರ್ವಜನಿಕರು, ಎನ್‌ಆರ್‌ಇ ಮತ್ತು ಎನ್‌ಆರ್‌ಒಗಳು ಬ್ಯಾಂಕ್‌ನಿಂದ ಶೇಕಡಾ 7.10 ಬಡ್ಡಿಯ ಲಾಭವನ್ನು ಪಡೆಯಬಹುದು. ಆದರೆ ಹಿರಿಯ ನಾಗರಿಕರು ಈ ಅವಧಿಯ ಎಫ್‌ಡಿಯಲ್ಲಿ ಶೇಕಡಾ 7.60 ಬಡ್ಡಿಯನ್ನು ಪಡೆಯುತ್ತಾರೆ. ಮತ್ತೊಂದೆಡೆ, 444 ದಿನಗಳ ಎಫ್‌ಡಿಗೆ ಶೇಕಡಾ 7.15 ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 7.65 ಬಡ್ಡಿ ಸಿಗುತ್ತಿದೆ.

ಇದನ್ನೂ ಓದಿ-ಬ್ಯಾಂಕ್ ಖಾತೆ ಖಾಲಿ ಇದೆಯಾ? ಟೆನ್ಷನ್ ಬಿಟ್ಹಾಕಿ ಯುಪಿಐ ಆರಂಭಿಸಿರುವ ಈ ಸೇವೆ ಬಳಸಿ ಪೆಮೆಂಟ್ ಮಾಡಿ!

4- ಡಿಮ್ಯಾಟ್ ಮತ್ತು MF ನಾಮನಿರ್ದೇಶನ
ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆದಾರರಿಂದ ನಾಮನಿರ್ದೇಶನ ಅಥವಾ ನಿರ್ಗಮನದ ಕೊನೆಯ ದಿನಾಂಕವನ್ನು ಸೆಬಿ ವಿಸ್ತರಿಸಿದೆ. ಹೊಸ ಗಡುವು ಸೆಪ್ಟೆಂಬರ್ 30 ಆಗಿದೆ. ಈ ದಿನಾಂಕದೊಳಗೆ ನೀವು ನಾಮಿನಿಯನ್ನು ನಿಮ್ಮ ಡಿಮ್ಯಾಟ್ ಖಾತೆಯಲ್ಲಿ ನೋಂದಾಯಿಸದಿದ್ದರೆ, ನಿಮ್ಮ ಡಿಮ್ಯಾಟ್ ಖಾತೆಯನ್ನು ಫ್ರೀಜ್ ಮಾಡಲಾಗುವುದು.

ಇದನ್ನೂ ಓದಿ-ದೀಪಾವಳಿಗೂ ಮುನ್ನವೇ ಈ ಬಿಸಿನೆಸ್ ಆರಂಭಿಸಿ ಕೈತುಂಬಾ ಹಣ ಸಂಪಾದಿಸಲು ಇದೆ ಸುವರ್ಣಾವಕಾಶ!

5- 2000 ನೋಟು ಬದಲಾಯಿಸುವುದು
ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿದ್ದು, ಅವುಗಳನ್ನು ಬದಲಾಯಿಸಲು 4 ತಿಂಗಳ ಕಾಲಾವಕಾಶ ನೀಡಿತ್ತು. ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು 30 ಸೆಪ್ಟೆಂಬರ್ 2023 ಕೊನೆಯ ದಿನಾಂಕವಾಗಿದೆ, ಅದರ ನಂತರ ನೀವು ರೂ 2000 ನೋಟುಗಳನ್ನು ಹೊಂದಿದ್ದರೂ ಸಹ, ಅವುಗಳನ್ನು ಬದಲಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ಅವು ಅಮಾನ್ಯಗೊಳ್ಳಲಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್

Trending News